25.9 C
Hubli
ಏಪ್ರಿಲ್ 29, 2024
eNews Land
ರಾಜ್ಯ

ಜನರ ರಾಜಕಾರಣ ಮಾಡ್ತೇವೆ, ಅಧಿಕಾರದ ರಾಜಕೀಯ ಮಾಡಲ್ಲ: ಸಿಎಂ

ಇಎನ್ಎಲ್ ಹಾವೇರಿ: ಮುಂದಿನ 14 ತಿಂಗಳು ಕಾಲ ಕೇವಲ ಜನರ ರಾಜಕಾರಣ ಮಾಡುತ್ತೇನೆ. ಹೊರತು ಯಾವುದೇ ರೀತಿಯ ಅಧಿಕಾರದ ರಾಜಕಾರಣವನ್ನು ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಅವರು ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್ ನಿಂದ ಸಾವನ್ನಪ್ಪಿದ ಕುಟುಂಬಗಳಿಗೆ ಸರ್ಕಾರದ ವತಿಯಿಂದ ೧ ಲಕ್ಷ ರೂಪಾಯಿ ಪರಿಹಾರ ಚೆಕ್ ವಿತರಣೆ ಮಾಡಿದ ನಂತರ ಮಾತನಾಡಿದರು.

ಜನವರಿಯಲ್ಲಿ ಬೇರೆ-ಬೇರೆ ಇಲಾಖೆಗಳನ್ನು ಒಂದುಗೂಡಿಸಿ, ಉದ್ಯೋಗ ಕ್ರಾಂತಿಯನ್ನು ಮಾಡುವ ಒಂದು ಮಹತ್ವಾಕಾಂಕ್ಷಿಯ ಯೋಜನೆಯನ್ನು ಸರ್ಕಾರ ರೂಪಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅಭಿವೃದ್ಧಿ ಎನ್ನುವುದು ಒಂದು ನಿರಂತರ ಚಲನೆಯಲ್ಲಿರುವ ಒಂದು ಪ್ರಗತಿಯ ಚಕ್ರ, ನಿರಂತರ ಅಭಿವೃದ್ಧಿಯನ್ನು ಕಂಡಾಗ ಮಾತ್ರ ಜನರ ಜೀವನದ ಗುಣಮಟ್ಟದಲ್ಲಿ ಬದಲಾವಣೆಯಾಗಲು ಮತ್ತು ಎಲ್ಲ ರಂಗದಲ್ಲಿಯೂ ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯ. ಗ್ರಾಮೀಣ-ನಗರ ಪ್ರದೇಶ, ರೈತರ ಬದುಕಿನಲ್ಲಿ, ಕೂಲಿ ಕಾರ್ಮಿಕರ, ತಾಯಂದಿರ ಬದುಕಿನಲ್ಲಿ, ಯುವಕರ ಬದುಕಿನಲ್ಲಿ, ದೀನ-ದಲಿತರ, ಹಿಂದುಳಿದ ವರ್ಗದವರ ಸ್ವಾಭಿಮಾನದ ಬದುಕನ್ನು ನೀಡುವ ಕೆಲಸವಾಗಬೇಕಾಗಿದೆ, ಇವೆಲ್ಲವು ಸಾಧ್ಯವಾದಾಗ ಪ್ರಗತಿ-ಪರ, ಕಲ್ಯಾಣ ಪರ ರಾಜ್ಯವಾಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಬರುವ ದಿನಗಳಲ್ಲಿ ಆದ್ಯತೆಗಳನ್ನು ಕೊಟ್ಟು ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಿದ್ದೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

 

ಮುಂದಿನ ಒಂದೂವರೆ ವರ್ಷದಲ್ಲಿ ಬಹಳ ದೊಡ್ಡ ಬದಲಾವಣೆಯನ್ನು ನಮ್ಮ ರಾಜ್ಯದ ಜನರ ಜೀವನದಲ್ಲಿ ತರುವಂತೆ ದಿನದ 24/7 ಗಂಟೆಗಳ ಕಾಲ ನಾನು ಜನರ ಸೇವೆಯನ್ನು ಮಾಡುತ್ತೇನೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ತಿಳಿದು ಪರಿಹಾರವನ್ನು ಕಂಡುಕೊಳ್ಳುವ ಸಲುವಾಗಿ ನಾವು ಕೆಲಸವನ್ನು ಮಾಡುತ್ತಾ ಇದ್ದೇವೆ. ಈಗಾಗಲೇ ಮಂಜೂರಾಗಿ ಮನೆಗಳನ್ನು ನಮ್ಮ ಸರ್ಕಾರದ ಅವಧಿಯಲ್ಲಿಯೇ ಕಟ್ಟುವಂತ ಕೆಲಸವಾಗಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಈ ಬಗ್ಗೆ ಪ್ರತಿ ತಿಂಗಳು ಪರಿಶೀಲನೆ ಮಾಡುವಂತ ಕೆಲಸ ಮಾಡುತ್ತೇನೆ ಎಂದರು.

ಅಂತೆಯೇ ಕಾರ್ಯಕ್ರಮದಲ್ಲಿ ನೀಡಿರುವ ಗದೆಯನ್ನು ಇಲ್ಲಿನ ಸಿದ್ದೇಶ್ವರ ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Related posts

ಈಶ್ವರಪ್ಪ ವಿವಾದಾತ್ಮಕ ಹೇಳಿಕೆಗೆ ಪ್ರತಿಭಟನೆ

eNEWS LAND Team

ಕಾಂಗ್ರೆಸ್ ಪಾಲಿಗೆ ಅಚ್ಛೇದಿನ್ ಬರುವುದೇ ಇಲ್ಲ : ಸಿಎಂ ಬೊಮ್ಮಾಯಿ

eNEWS LAND Team

ಅಪಘಾತ ರಹಿತ ಬಸ್ ಚಾಲಕರು: “HEROS ON THE ROAD” ಚಾಲಕರೇ ತಪ್ಪದೇ ನೋಡಿ!

eNEWS LAND Team