26.2 C
Hubli
ಏಪ್ರಿಲ್ 19, 2024
eNews Land
ಸುದ್ದಿ

40 ವರ್ಷದಲ್ಲಿ ಇಂಥ ಮಾತು ಕೇಳಿರಲಿಲ್ಲ: ಸಭಾಪತಿ ಹೊರಟ್ಟಿ ನೋವಿನಿಂದ ಮಾತಾಡಿದ್ಯಾಕೆ? ನೋಡಿ!

ಇಎನ್ಎಲ್ ಧಾರವಾಡ: ನಿನ್ನೆ ಪರಿಷತ್ ನ ವಿಪಕ್ಷ ಸದಸ್ಯರ ವರ್ತನೆ ಬಹಳ ನೋವು ತಂದಿದೆ. 40 ವರ್ಷದ ರಾಜಕಾರಣದಲ್ಲಿ ಇಂಥ ಮಾತು ಕೇಳಿರಲಿಲ್ಲ ಎಂದು ಹುಬ್ಬಳ್ಳಿಯಲ್ಲಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಮತಾಂತರ ನಿಷೇಧ ಕಾಯಿದೆಯನ್ನು ವಿಧಾನ ಪರಿಷತ್ ನಲ್ಲಿ ಮಂಡಿಸಲು ನಾನು ಕಾಲಾವಕಾಶ ನೀಡುತ್ತಿದ್ದೇನೆ‌ ಎಂದು ತಪ್ಪು ಗ್ರಹಿಕೆ ಹಿನ್ನೆಲೆಯಲ್ಲಿ ವಿಪಕ್ಷ ನಾಯಕರು ಮನಸ್ಸಿಗೆ ನೋವಾಗುವಂತೆ ನಡೆಸಿಕೊಂಡರು.

ನನ್ನ ತೇಜೋವಧೆ ಮಾಡುವ ನಿಟ್ಟಿನಲ್ಲಿ ಮಾತನಾಡಿದರು.ನನಗೆ ಬಹಳ ನೋವು ಆಯ್ತು. ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಈ ತರಹದ ಮಾತುಗಳನ್ನು ಕೇಳಿರಲಿಲ್ಲ

ನನ್ನನ್ನ ಏಜೆಂಟ್ ಅಂದರು. ಅದು ಬೇಸರ ತರಿಸಿತು. ಅದಕ್ಕಾಗಿ ರಾಜೀನಾಮೆ ನೀಡಲು ನಿರ್ಧಾರ ಮಾಎಇದೆ. ಆದರೆ ಬಳಿಕ ಮುಖ್ಯಮಂತ್ರಿ, ಸಭಾ ನಾಯಕರು ಬಂದು ಕ್ಷಮೆ ಕೇಳಿದ್ದಾರೆ. ಹೀಗಾಗಿ ಪ್ರಕರಣ ಇತ್ಯರ್ಥವಾಗಿದೆ. ಅದಕ್ಕಾಗಿ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದರು.

ಫೆಬ್ರವರಿಲಿ ಜಂಟಿ ಸದನ ಕರೆಯಲಾಗುವುದು. ಒಂದು ವಾರದ ನಂತರ ಬಜೆಟ್ ಅಧಿವೇಶನ ನಡೆಯುತ್ತದೆ ಎಂದು ಹೊರಟ್ಟಿ ಹೇಳಿದರು.

Related posts

ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ರಷ್ಯಾ; ಜಗತ್ತಿನಲ್ಲಿ ತಲ್ಲಣ

eNewsLand Team

ನಡೆದಾಡುವ ದೇವರು ಸಿದ್ಧೇಶ್ವರ ಸ್ವಾಮೀಜಿ ವೈಕುಂಠಕ್ಕೆ

eNEWS LAND Team

ಕುಮಾರಸ್ವಾಮಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ; ಸಿಎಂ ಬೊಮ್ಮಾಯಿ‌ ಹೀಗೆ ಹೇಳಿದ್ಯಾಕೆ!?

eNewsLand Team