22 C
Hubli
ಸೆಪ್ಟೆಂಬರ್ 11, 2024
eNews Land
ರಾಜ್ಯ ಸುದ್ದಿ

ಈಶ್ವರಪ್ಪ ವಿವಾದಾತ್ಮಕ ಹೇಳಿಕೆಗೆ ಪ್ರತಿಭಟನೆ

ಇಎನ್ಎಲ್ ಕಲಘಟಗಿ: ಸಚಿವ ಕೆ.ಎಸ್.ಈಶ್ವರಪ್ಪ ರಾಷ್ಟ್ರಧ್ವಜ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆ ಖಂಡನೀಯ ಎಂದು ಕಲಘಟಗಿ ಪಟ್ಟಣದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ನಾಗರಾಜ ಛಬ್ಬಿ ಗೆಳೆಯರ ಬಳಗ ಪ್ರತಿಭಟನೆ ಮಾಡಿದರು. ಮುಂದಿನ ದಿನಗಳಲ್ಲಿ ಕೆಂಪು ಕೋಟೆಯ ಮೇಲಿನ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಅಲ್ಲಿ ಹಿಂದೂಧ್ವಜ (ಭಗವಾಧ್ವಜ) ಹಾರಿಸುತ್ತೇವೆ ಅಂತ ಹೇಳಿರುವುದು ದೇಶ ದ್ರೋಹಿ ಹೇಳಿಕೆಯಾಗಿದೆ. ಇಂತ ವಿವಾದಾತ್ಮಕ ಹೇಳಿಕೆಗಳು ಕೋಮು ಸೌಹಾರ್ದತೆ ಹರಡಲು ಕಾರಣವಾಗುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ಪ್ರತಿಪಕ್ಷ ನಾಯಕ ಸಿದ್ರಾಮಯ್ಯ ಬಗ್ಗೆ ಅಧಿವೇಶನದಲ್ಲಿ ಏಕವಚನದಲ್ಲಿ ಬಾಯಿಗೆ ಬಂದoತೆ ಹೇಳಿಕೆಗಳನ್ನು ನೀಡಿದ್ದು ಖಂಡನೀಯ. ಆದ್ದರಿಂದ ಈ ವಿಷಯಗಳನ್ನು ಗಮನಿಸಿ ರಾಜ್ಯಪಾಲರು ಕೆ.ಎಸ್.ಈಶ್ವರಪ್ಪನವರನ್ನು ಸಚಿವ ಸಂಪುಟದಿoದ ವಜಾಗೊಳಿಸಬೇಕೆಂದು ಘೋಷಣೆಗಳ ಮೂಲಕ ತಹಶೀಲ್ದಾರ್ ಅವರ ಕಛೇರಿಗೆ ತೆರಳಿ ಮನವಿ ಕೊಟ್ಟರು.
          ಈ ಸಂದರ್ಭದಲ್ಲಿ ಪ್ರಕಾಶಗೌಡ ಪಾಟೀಲ, ಜಿ.ಡಿ.ಘೋರ್ಪಡೆ, ಕಿರಣ ಪಾಟೀಲಕುಲಕರ್ಣಿ, ಅಣ್ಣಪ್ಪ ಓಲೆಕಾರ, ಗುರುನಾಥ ದಾನೇನವರ, ವಿರುಪಾಕ್ಷಪ್ಪ ಮಡಿವಾಳರ, ಅಜೀಜ ದೇವರಾಯ, ತಮಿಮ್ ತೇರಗಾವಂ, ಶರಣಪ್ಪ ಮಡಿವಾಳರ, ಮದನ ಕುಲಕರ್ಣಿ, ಸಂಗಪ್ಪ ಹೊಸಮನಿ, ನಾಗಪ್ಪ ಅಂಗಡಿ, ರೇಖಾ ರೆಡ್ಡಿ, ಗಂಗವ್ವ ಪೂಜಾರ, ಸುರೇಶ ಗಬ್ಬೂರ, ಬಸವರಾಜ ಹಡಪದ, ಉಮೇಶ ರಾಯನಾಳ, ಶಿವು ಬೆಂಡಿಗೇರಿ, ದೇವರಾಜ ಲಮಾಣಿ, ಶಿವು ಮುತ್ತಗಿಕರ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಮಯಕ್ಕೆ ಮಾಜಿ ಸಚಿವ ಸಂತೋಷಲಾಡ್ ಅವರ ಕಾರ್ಯಕರ್ತರು ಪ್ರತ್ಯೇಕ ಮನವಿ ಕೊಟ್ಟಿದ್ದು ಕಲಘಟಗಿಯಲ್ಲಿ ಕಾಂಗ್ರೆಸ್ ಪಕ್ಷದ ಪರಿಸ್ಥಿತಿಯು ಹೇಗಿದೆ ಎನ್ನುವುದನ್ನು ತೋರಿಸಿತು. 
       

Related posts

ಹುಬ್ಬಳ್ಳಿ ಮತ್ತು ಗುಂತಕಲ್ ಗಳ ನಡುವೆ ಡೆಮು ರೈಲು ಸಂಚಾರ ಪ್ರಾರಂಭ

eNEWS LAND Team

ಗೌರಿ ಲಂಕೇಶ್ ಹತ್ಯೆ: ಆರೋಪಿಗಳನ್ನು ಹುಬ್ಬಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

eNewsLand Team

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮಹಾಪೌರರಾಗಿ ಈರೇಶ ಅಂಚಟಗೇರಿ ಉಪಮಹಾಪೌರರಾಗಿ ಉಮಾ ಮುಕುಂದ್ ಆಯ್ಕೆ

eNEWS LAND Team