36 C
Hubli
ಏಪ್ರಿಲ್ 27, 2024
eNews Land
ರಾಜ್ಯ ಸುದ್ದಿ

ಅಪಘಾತ ರಹಿತ ಬಸ್ ಚಾಲಕರು: “HEROS ON THE ROAD” ಚಾಲಕರೇ ತಪ್ಪದೇ ನೋಡಿ!

ಇದನ್ನು ಓದಿ:ಹುಬ್ಬಳ್ಳಿಯ ಭೂಮಾಪಕ ರಮೇಶ ನೀಲಪ್ಪ ಡವಳಗಿ ಜೈಲಿಗೆ: ಯಾಕೆ ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
ಇಎನ್ಎಲ್ ಹುಬ್ಬಳ್ಳಿ: ದಿನದಿಂದ ದಿನಕ್ಕೆ ರಸ್ತೆಗಳಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯ ನಡುವೆ ಸುಧೀರ್ಘ ಅವಧಿಗೆ ಅಪಘಾತ ರಹಿತ  ಬಸ್  ಚಾಲನೆ ಮಾಡುವ ಚಾಲಕರು ಸಂಸ್ಥೆಯ ಸುರಕ್ಷತಾ ರಾಯಭಾರಿಗಳು ಎಂದು ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್.ಎಸ್ ತಿಳಿಸಿದ್ದಾರೆ.

ಇದನ್ನು ಓದಿ:ಮನೆಯಿಂದಲೇ ಮತದಾನ ಮಾಡಲು ಒಪ್ಪಿಗೆ ನೀಡಿದ ವಿಕಲಚೇತನರ ಹಾಗೂ 80 + ವಯಸ್ಸಾದವರ ಮನೆಗೆ ಏ.29,30 ಹಾಗೂ ಮೇ 1 ರಂದು ಚುನಾವಾಣಾ ಸಿಬ್ಬಂದಿ ಭೇಟಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಗೋಕುಲ ರಸ್ತೆಯಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸುರಕ್ಷತಾ ಪ್ರಶಸ್ತಿ ಪುರಸ್ಕೃತ ಇಬ್ಬರು ಚಾಲಕರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಇದನ್ನು ಓದಿ:ಮತದಾನ ಪ್ರಮಾಣ ಹೆಚ್ಚಿಸಲು ಶ್ರಮಿಸಿ: ಪಿ.ಎಸ್. ವಸ್ತ್ರದ
ಚಿಕ್ಕೋಡಿ ವಿಭಾಗದ ಅಥಣಿ ಘಟಕದ ಕೇದಾರಿ ತಮ್ಮಣ್ಣ ಬಕಾರಿ 38 ವರ್ಷ ಹಾಗೂ ಬೆಳಗಾವಿ ವಿಭಾಗದ ಬೆಳಗಾವಿ-2ನೇ ಘಟಕದ ಎಸ್.ಎಸ್.ಭಾವಿಕಟ್ಟಿ 29ವರ್ಷಗಳ ಅವಧಿಗೆ ಯಾವುದೇ ಅಪಘಾತವಿಲ್ಲದೆ ಬಸ್ ಚಾಲನೆ ಮಾಡುತ್ತಿದ್ದಾರೆ‌. ಇವರಿಗೆ ಏ.18ರಂದು ದೆಹಲಿಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟ  (ASRTU)ದ ವತಿಯಿಂದ  ” ಹಿರೋಸ್ ಆನ್ ದಿ ರೋಡ್ ” “Heros on the road” ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

ಇದನ್ನು ಓದಿ:ಬಿಜೆಪಿ ಬಹುಮತದಿಂದ ಗೆಲ್ಲುವ ವಿಶ್ವಾಸ: ನಂದಿನಿ ಅಮೂಲಗೆ ಸವಾಲಾಗಲಿದೆ: ಸಿಎಂ ಬೊಮ್ಮಾಯಿ
ಇಬ್ಬರೂ ಚಾಲಕರಿಗೆ ವಾಕರಸಾ ಸಂಸ್ಥೆಯ ವತಿಯಿಂದ ಗೌರವಿಸಿ  ತಲಾ 5 ಸಾವಿರ ರೂ.ನಗದು ಪುರಸ್ಕಾರ ನೀಡಲಾಯಿತು.

ಇದನ್ನು ಓದಿ:ಕೂಡಲಸಂಗಮ ಭೇಟಿ ನೀಡಿದ ರಾಹುಲ್ ಗಾಂಧಿ!
ಆರೋಗ್ಯಕರ ಜೀವನಶೈಲಿ ಹಾಗೂ ಉತ್ತಮ ಕಾರ್ಯತತ್ಪರತೆಯಿಂದ ಸುಧೀರ್ಘ ಅವಧಿಗೆ ಯಾವುದೇ ಅಪರಾಧ, ಅಪಘಾತ ವಿಲ್ಲದೆ ಸಾರ್ವಜನಿಕ ಬಸ್ ಚಾಲನೆ ಮಾಡಲು ಸಾಧ್ಯ ಎಂಬುದನ್ನು ಈ ಚಾಲಕರು ನಿರೂಪಿಸಿದ್ದಾರೆ ಎಂದು ಶ್ಲಾಘಿಸಿದರು.

ಇದನ್ನು ಓದಿ:ಲಿಂಗಾಯತ ಸಿಎಂಗಳಬಗ್ಗೆ ಸಿದ್ರಾಮಯ್ಯ ಹೇಳಿಕೆಗೆ ಜನ ಪಾಠ ಕಲಿಸುತ್ತಾರೆ: ಸಿಎಂ ಬೊಮ್ಮಾಯಿ‌
ಸುರಕ್ಷತೆಯ ಬಗ್ಗೆ ನಂಬಿಕೆ ಇಟ್ಟು ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರ ವಿಶ್ವಾಸಕ್ಕೆ ಚ್ಯುತಿ ಬರದಂತೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರು ಹೇಳಿದರು. ಹಿರಿಯ ಅಧಿಕಾರಿಗಳಾದ ರಾಜೇಶ ಹುದ್ದಾರ, ಪ್ರಕಾಶ ಕಬಾಡಿ, ಜಗದೀಶ್, ಎಚ್. ರಾಮನಗೌಡರ, ಶಶಿಧರ ಕುಂಬಾರ, ಎಂ.ಆರ್. ಮುಂಜಿ, ಮತ್ತಿತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಇದನ್ನು ಓದಿ:ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಅಸಿಂಧುಗೊಳಿಸಲು ಒತ್ತಡ ಆರೋಪ, ಡಿಕೆಶಿಗೆ ಮಾತನಾಡಲು ವಿಷಯವಿಲ್ಲದೆ ಅನಗತ್ಯ ಆರೋಪ: ಸಿಎಂ ಬೊಮ್ಮಾಯಿ

Related posts

ಭಜರಂಗದಳ ಮತ್ತು ಪಿಎಫ್ಆಯ್ ಒಂದೇ ತಕ್ಕಡಿಯಲ್ಲಿ ತೂಗಿದ ಕಾಂಗ್ರೆಸ್ ಮುಖಂಡ ಯಾರು?

eNEWS LAND Team

ಸ್ವಯಂ ಸೇವಕರಿಗೆ ಎನ್.ಡಿ.ಆರ್.ಎಫ್. ತಂಡದಿಂದ ತರಬೇತಿ

eNEWS LAND Team

ಶಿರಸಂಗಿ ದೇಸಾಯಿಯವರ ಸ್ಥಳ ಪ್ರೇಕ್ಷಣೆಯ ಸ್ಥಳವಾಗಬೇಕು:ಬಸವಲಿಂಗ ಶ್ರೀಗಳು

eNEWS LAND Team