23 C
Hubli
ಮೇ 7, 2024
eNews Land
ಸುದ್ದಿ

ಪೆಟ್ರೊಲ್, ಡಿಸೇಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಆಟೋ ರಿಕ್ಷಾ ಚಾಲಕರ ಸಂಘದಿಂದ ಪ್ರತಿಭಟನೆ

ಇಎನ್ಎಲ್ ಹುಬ್ಬಳ್ಳಿ
ಪೆಟ್ರೊಲ್, ಡಿಸೇಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಉತ್ತರ ಕರ್ನಾಟಕ ಆಟೋ ರಿಕ್ಷ ಚಾಲಕರ ಸಂಘದ ಪದಾಕಾರಿಗಳು ಸೋಮವಾರ ಪ್ರತಿಭಟನಾ ರ್ಯಾಲಿ ನಡೆಸಿದರು.
ಇಲ್ಲಿಯ ನಿಲಿಜನ್ ರಸ್ತೆಯಿಂದ ಚನ್ನಮ್ಮ ವೃತ್ತ, ಸಂಗೊಳ್ಳ ರಾಯಣ್ಣ ವೃತ್ತದ ಮುಖಾಂತರ ತಹಸೀಲ್ದಾರ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ತಹಸೀಲ್ದಾರ ಕಚೇರಿ ಎದುರು ಕೆಲಹೊತ್ತು ಪ್ರತಿಭಟನೆ ನಡೆಸಿದರು. ಬಳಿಕ ತಹಸೀಲ್ದಾರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು. ಅಲ್ಲದೇ, ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಿರಂತರವಾಗಿ ಬೆಲೆ ಏರಿಕೆ ಆಗುತ್ತಿರುವುದರಿಂದ ಬಡವರು, ಮಧ್ಯಮ ವರ್ಗದ ಜನರು ಉಪಜೀವನ ಸಾಗಿಸುವುದು ಕಷ್ಟವಾಗುತ್ತಿದೆ. ಕೋವಿಡ್‌ನಿಂದ ಉಂಟಾದ ಲಾಕ್‌ಡೌನ್ ಪ್ರಭಾವದಿಂದ ಈಗಷ್ಟೇ ಚೇತರಿಕೆ ಕಾಣುತ್ತಿವೆ. ಈಗಾಗಲೇ ದುಡಿಯುವ ಕೈಗಳು ಉದ್ಯೋಗ ಕಳೆದುಕೊಂಡಿವೆ. ಈ ಮಧ್ಯ ಉತ್ತರ ಕರ್ನಾಟಕದ ೫೦ ಲಕ್ಷ ಜನರು ಜೀವನೋಪಾಯಕ್ಕೆ ಕಾರಣವಾಗಿರುವ ಆಟೋ ರೀಕ್ಷಾಗಳ ಇಂಧನ(ಎಲ್‌ಪಿಜಿ) ಬೆಲೆ ಏರಿಕೆಯಿಂದ ಸಾಕಷ್ಟು ತೊಂದರೆ ಉಂಟಾಗುತ್ತಿದ್ದು, ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ರಫೀಕ್ ಕುಂದಗೋಳ, ದಾವುದಲಿ ಶೇಖ, ಮುರಳಿ ಇಂಗಳಹಳ್ಳಿ ಕಲ್ಲಪ್ಪ ಅಣ್ಣಿಗೇರಿ, ಜಾಫರ್ ಕೆರೂರ, ಚಂದ್ರಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.

Related posts

ಯುವತಿಯರಿಗೆ ಫ್ಯಾಷನ್ ಡಿಸೈನಿಂಗ್ ಬ್ಯುಟಿಷಿಯನ್ ತರಬೇತಿ

eNEWS LAND Team

ನವಲಗುಂದ ನೀಲಮ್ಮನ ಜಲಾಶಯ ಪರಿಸ್ಥಿತಿ ನೋಡಿ!!

eNEWS LAND Team

ರೈಲ್ವೇಯು ಈ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಸಂಚಿತ ಆಧಾರದ ಮೇಲೆ 500 MT ಸರಕು ಸಾಗಣೆಯ ಗಡಿಯನ್ನು ದಾಟಿದೆ

eNEWS LAND Team