ಇಎನ್ಎಲ್ ಅಣ್ಣಿಗೇರಿ:
ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೆಗೌಡ, ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೂಚನೆ ಮೇರೆಗೆ ಪ್ರಕಾಶ ಕಾಶಪ್ಪ ಅಂಗಡಿ ನವಲಗುಂದ ಮತಕ್ಷೇತ್ರದ ಅಣ್ಣಿಗೇರಿ ಪುರಸಭೆಯ ಚುನಾವಣೆಯ ಉಸ್ತುವಾರಿ ಅಧ್ಯಕ್ಷರನ್ನಾಗಿ ಧಾರವಾಡ ಜಿಲ್ಲಾ ಜೆಡಿಎಸ್ ಮಾಜಿ ಅಧ್ಯಕ್ಷ ಬಿ.ಬಿ.ಗಂಗಾಧರಮಠ ನೇಮಕ ಮಾಡಿದ್ದಾರೆ.
ಜೆಡಿಎಸ್ ಪಕ್ಷದ ನೂತನ ಜವಾಬ್ದಾರಿಯನ್ನು ವಹಿಸಿಕೊಂಡು ಇಂದಿನಿoದಲೇ ಪಕ್ಷದ ಸಂಘಟನೆ ಚುನಾವಣಾ ಉಸ್ತವಾರಿಯನ್ನು ಮಾಡಲು ಸೂಚಿಸಿದ್ದು, ಈ ಚುನಾವಣೆಯಲ್ಲಿ ತಮ್ಮನ್ನು ಹೊರತುಪಡಿಸಿ 5 ಮಂದಿಯನ್ನು ಚುನಾವಣಾ ಉಸ್ತುವಾರಿ ಸಮಿತಿಯ ಸದಸ್ಯರನ್ನು ನೇಮಕಮಾಡಿಕೊಂಡು ಎಲ್ಲಾ ವರ್ಗದ ಜನರು ಸಮಿತಿಯಲ್ಲಿ ಇರಬೇಕೆಂದು ತಿಳಿಸಿದ್ದಾರೆ.