34 C
Hubli
ಏಪ್ರಿಲ್ 29, 2024
eNews Land
ಸುದ್ದಿ

ಗ್ರಾಮ ಪಂಚಾಯತಿ ಚುನಾವಣೆ ಡಿ.27 ರಂದು: ಡಿಸಿ ನಿತೇಶ ಪಾಟೀಲ

ಇಎನ್ಎಲ್ ಧಾರವಾಡ ಡಿ.13: ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ ಧಾರವಾಡ ತಾಲೂಕಿನ ಮಾರಡಗಿ, ಕಲಘಟಗಿ ತಾಲೂಕಿನ ಬೇಗೂರು, ನವಲಗುಂದ ತಾಲೂಕಿನ ಕಾಲವಾಡ, ಕುಂದಗೋಳ ತಾಲೂಕಿನ ಮಳಲಿ ಮತ್ತು ಪಶುಪತಿಹಾಳ, ಅಣ್ಣಿಗೇರಿ ತಾಲೂಕಿನ ಸಾಸ್ವಿಹಳ್ಳಿ ಗ್ರಾಮಪಂಚಾಯಿತಿ ಸದಸ್ಯರ ನಿಗದಿತ ಅವಧಿ ಪೂರ್ಣಗೊಂಡಿರುವುದರಿಂದ ತೆರವಾದ ಸ್ಥಾನಗಳನ್ನು ತುಂಬಲು ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಗಳಿಗೆ ಡಿಸೆಂಬರ್ 27 ರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಚುನಾವಣೆ ಜರುಗಲಿದೆ ಎಂದು ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.

ಈ ಕುರಿತು ಅಧಿಸೂಚನೆ ಹೊರಡಿಸಿರುವ ಅವರು, ಡಿಸೆಂಬರ್ 13 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 17 ರ ವರಗೆ ನಾಮಪತ್ರ ಸ್ವೀಕರಿಸಲಾಗುವುದು. ಡಿ.18 ರಂದು ನಾಮಪತ್ರಗಳ ಪರಿಶೀಲನೆ ಜರುಗುವುದು. ಡಿ.20 ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ. ಡಿಸೆಂಬರ್ 27 ರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ಜರುಗಲಿದೆ. ಮತ್ತು ಮರುಮತದಾನ ಅಗತ್ಯವಿದ್ದಲ್ಲಿ ಡಿ.29 ರಂದು ಜರುಗಿಸಲಾಗುವುದು. ಮತಗಳ ಎಣಿಕೆ ಕಾರ್ಯವು ಡಿ.30 ರ ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ಜರುಗಲಿದೆ. ಮತ್ತು ಡಿಸೆಂಬರ್ 30 ಕ್ಕೆ ಚುನಾವಣಾ ಪ್ರಕ್ರಿಯೆಗಳು ಮುಕ್ತಾಯವಾಗುತ್ತವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

1993 ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ ಗ್ರಾಮಪಂಚಾಯಿತಿಗಳ ವಿವಿಧ ಕಾರಣಗಳಿಂದ ತೆರವಾಗಿರುವ ಹಾಗೂ ಖಾಲಿ ಇರುವ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. ಧಾರವಾಡ ತಾಲೂಕಿನ ನರೇಂದ್ರ ಗ್ರಾಮಪಂಚಾಯಿತಿ, ನರೇಂದ್ರ-3 ಕ್ಷೇತ್ರದ ಖಾಲಿ ಇರುವ ಸ್ಥಾನ-(ಸಾಮಾನ್ಯ) 01, ನಿಗದಿ ಗ್ರಾಮಪಂಚಾಯಿತಿ, ನಿಗದಿ-1 ಕ್ಷೇತ್ರದ ಖಾಲಿ ಇರುವ ಸ್ಥಾನ-(ಸಾಮಾನ್ಯ) 01, ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮಪಂಚಾಯಿತಿ, ಶಲವಡಿ-5 ಕ್ಷೇತ್ರದ ಖಾಲಿ ಇರುವ ಸ್ಥಾನ-(ಸಾಮಾನ್ಯ) 01, ಇಬ್ರಾಹಿಂಪುರ ಗ್ರಾಮಪಂಚಾಯಿತಿ, ಇಬ್ರಾಹಿಂಪುರ-3 ಕ್ಷೇತ್ರದ ಖಾಲಿ ಇರುವ ಸ್ಥಾನ-(ಹಿಂದುಳಿದ ‘ಬ’ ವರ್ಗ) 01, ಕುಂದಗೋಳ ತಾಲೂಕಿನ ಗೌಡಗೇರಿ ಗ್ರಾಮಪಂಚಾಯಿತಿ ಸಂಕ್ಲಿಪೂರ-1 ಕ್ಷೇತ್ರದ ಖಾಲಿ ಇರುವ ಸ್ಥಾನ-(ಅನುಸೂಚಿತ ಜಾತಿ ಮಹಿಳೆ) 01, ಚಾಕಲಬ್ಬಿ ಗ್ರಾಮಪಂಚಾಯಿತಿ ಬರದ್ವಾಡ-1 ಕ್ಷೇತ್ರದ ಖಾಲಿ ಇರುವ ಸ್ಥಾನ- (ಸಾಮಾನ್ಯ ಮಹಿಳೆ) 02, ಬರದ್ವಾಡ-2 ಕ್ಷೇತ್ರದ ಖಾಲಿ ಇರುವ ಸ್ಥಾನ-(ಹಿಂದುಳಿದ ‘ಅ’ ವರ್ಗ-1, ಹಿಂದುಳಿದ ‘ಅ’ ವರ್ಗ ಮಹಿಳೆ-1, ಸಾಮಾನ್ಯ-1) 03, ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮಪಂಚಾಯಿತಿ ಯಲಿವಾಳ-4 ಕ್ಷೇತ್ರ ಖಾಲಿ ಇರುವ ಸ್ಥಾನ-(ಹಿಂದುಳಿದ ‘ಅ’ ವರ್ಗ ಮಹಿಳೆ) 01, ನವಲಗುಂದ ತಾಲೂಕಿನ ಯಮನೂರು ಗ್ರಾಮಪಂಚಾಯಿತಿ ಅರೇಕುರಹಟ್ಟಿ-1 ಕ್ಷೇತ್ರದ ಖಾಲಿ ಇರುವ ಸ್ಥಾನ-(ಸಾಮಾನ್ಯ ಮಹಿಳೆ-1, ಸಾಮಾನ್ಯ-1) 02, ಅರೆಕುರಹಟ್ಟಿ-2 ಕ್ಷೇತ್ರದ ಖಾಲಿ ಇರುವ ಸ್ಥಾನ-(ಅನುಸೂಚಿತ ಜಾತಿ ಮಹಿಳೆ-1, ಹಿಂದುಳಿದ ‘ಅ’ ವರ್ಗ-1) 02, ಅರೇಕುರಹಟ್ಟಿ-3 ಕ್ಷೇತ್ರದ ಖಾಲಿ ಇರುವ ಸ್ಥಾನ-(ಹಿಂದುಳಿದ ‘ಬ’ ವರ್ಗ ಮಹಿಳೆ-1, ಹಿಂದುಳಿದ ‘ಅ’ ವರ್ಗ-1, ಸಾಮಾನ್ಯ ಮಹಿಳೆ-1, ಸಾಮಾನ್ಯ-1) 04, ನವಲಗುಂದ ತಾಲೂಕಿನ ತಡಹಾಳ ಗ್ರಾಮಪಂಚಾಯಿತಿ ಅರಹಟ್ಟಿ-3 ಕ್ಷೇತ್ರದ, ಖಾಲಿ ಇರುವ ಸ್ಥಾನ-(ಸಾಮಾನ್ಯ) 01 ಒಟ್ಟು 20 ಸ್ಥಾನಗಳಿಗೆ ಚುನವಾಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ನಿತೇಶ್ ಪಾಟೀಲ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

Related posts

ವಿಧಾನಸಭಾ ಚುನಾವಣೆ ನಿಮಿತ್ಯ ಧಾರವಾಡ ಜಿಲ್ಲೆಗೆ ನಿಯೋಜಿತರಾದ ಸಾಮಾನ್ಯ ವೀಕ್ಷಕರ ವಿವರ ನೋಡಿ!

eNEWS LAND Team

ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ-2022. ಜಿಲ್ಲೆಯ 21 ಮತಗಟ್ಟೆಗಳ ಮಾಹಿತಿ ಇಲ್ಲಿದೆ ನೋಡಿ

eNEWS LAND Team

APMC ವ್ಯಾಪಾರಸ್ಥರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಯಾರು? ನೋಡಿ

eNEWS LAND Team