34 C
Hubli
ಮೇ 3, 2024
eNews Land
ಆರ್ಥಿಕತೆ

ಓಮಿಕ್ರಾನ್ ಭೀತಿ ಕುಸಿತ; ಷೇರು ಮಾರುಕಟ್ಟೆ ಚಿಗಿತ

ಇಎನ್ಎಲ್ ಎಕನಾಮಿಕ್ ಡೆಸ್ಕ್

ಕೊರೋನಾ ವೈರಾಣುವಿನ ಓಮಿಕ್ರಾನ್ ರೂಪಾಂತರಿ ತಳಿ ಕುರಿತ ಭಯ ತಗ್ಗಿದ ಕಾರಣ ದೇಶದ ಷೇರುಪೇಟೆ ಸೂಚ್ಯಂಕಗಳು ಮಂಗಳವಾರ ಭರ್ಜರಿ ಏರಿಕೆ ದಾಖಲಿಸಿದೆ.

886 ಅಂಶ ಏರಿಕೆ ಕಂಡ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 57,633 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರು‍ಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 264 ಅಂಶ ಜಿಗಿತ ಕಂಡು, 17,176 ಅಂಶಗಳಲ್ಲಿ ವಹಿವಾಟು ಮುಗಿಸಿತು.

ಲೋಹ ಮತ್ತು ಬ್ಯಾಂಕಿಂಗ್ ವಲಯದಲ್ಲಿ ಕಡಿಮೆ ಬೆಲೆಗೆ ಸಿಗುತ್ತಿರುವ ಷೇರುಗಳ ಖರೀದಿಗೆ ಹೂಡಿಕೆದಾರರು ಮುಂದಾದರು. ರುಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ತುಸು ಚೇತರಿಕೆ ಕಂಡುಕೊಂಡಿದ್ದು ಕೂಡ ಷೇರು ಮಾರುಕಟ್ಟೆ ಸೂಚ್ಯಂಕಗಳ ಏರಿಕೆಗೆ ಕಾರಣವಾಯಿತು.

ಕೊರೋನಾ ರೂಪಾಂತರಿ ಓಮಿಕ್ರಾನ್ ವೇಗವಾಗಿ ಹಬ್ಬಿದರೂ ಅಪಾಯಕಾರಿ ಅಲ್ಲ‌ ಎಂಬ ತಜ್ಞರ ಅಭಿಪ್ರಾಯ ಜಾಗತಿಕ ಷೇರು ಮಾರುಕಟ್ಟೆ ಉತ್ಸಾಹ ಹೆಚ್ಚಿಸಿದೆ. ಪರಿಣಾಮ ಭಾರತದ ಮಾರುಕಟ್ಟೆ ಕೂಡ ಚೇತರಿಕೆ ಕಂಡಿದೆ.

Related posts

Market Opening Bell

eNEWS LAND Team

ದಿವಾಳಿ ಆಗಿಲ್ಲ: ಕಲಘಟಗಿ ಅರ್ಬನ್ ಬ್ಯಾಂಕ್ ಸ್ಪಷ್ಟಣೆ

eNEWS LAND Team

Paytm IPO Details

eNEWS LAND Team