23.8 C
Hubli
ಮಾರ್ಚ್ 28, 2023
eNews Land
ದೇಶ

ಅಸ್ಸಾಂ ಖ್ಯಾತ ಕವಿ ನೀಲ್ಮಣಿ ಫೂಕನ್‌ರಿಗೆ ಜ್ಞಾನಪೀಠ ಪ್ರಶಸ್ತಿ

Listen to this article

ಇಎನ್ಎಲ್ ಡೆಸ್ಕ್

ಖ್ಯಾತ ಅಸ್ಸಾಮಿ ಕವಿ ಹಾಗೂ ಸಾಹಿತಿ ನೀಲ್ಮಣಿ ಫೂಕನ್ ಅವರು ಭಾರತದ ಅತ್ಯುನ್ನತ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ವರ್ಷ 56ನೇ ಜ್ಞಾನಪೀಠ ಪ್ರಶಸ್ತಿಗೆ ನೀಲ್ಮಣಿ ಫೂಕನ್ ಆಯ್ಕೆ ಆಗಿದ್ದಾರೆ. ನೀಲ್ಮಣಿ ಫೂಕನ್ ಜೊತೆಗೆ ಕೊಂಕಣಿ ಬರಹಗಾರ ದಾಮೋದರ್ ಮೌಜೊ ಕೂಡ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ನೀಲ್ಮಣಿ ಫೂಕನ್ :-
ಭಾಷೆ ಮತ್ತು ಕಲಾತ್ಮಕ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಹೀಗಾಗಿ ನೀಲ್ಮಣಿ ಶ್ರೀಮಂತ ಜಾನಪದ ಸಂಸ್ಕೃತಿ ಮತ್ತು ಸ್ಥಳೀಯ ಜೀವನದ ಬದಲಾವಣೆಗಳಲ್ಲಿ ತೀವ್ರ ಆಸಕ್ತಿ ಬೆಳೆಸಿಕೊಂಡಿದ್ದರು. ಅವರು ಅಸ್ಸಾಂನ ಪ್ರಮುಖ ಕಲಾ ತಜ್ಞರು ಮತ್ತು ಬುಡಕಟ್ಟು ಹಾಗೂ ಜಾನಪದ ಕಲೆಯ ಪ್ರಜ್ಞಾಪೂರ್ವಕ ವಿಮರ್ಶಕರಲ್ಲಿ ಒಬ್ಬರಾಗಿದ್ದಾರೆ.

ಕಳೆದ 1981ರಲ್ಲಿ ನೀಲ್ಮಣಿ ಪೂಕನ್ ಅವರ ಕವಿತಾ (ಕೋಬಿತಾ) ಕವನ ಸಂಕಲನಕ್ಕಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಯಿತು. 1990ರಲ್ಲಿ ಪೂಕನ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದ್ದು, 2002ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಪಡೆದುಕೊಂಡರು.

Related posts

ಕೇಂದ್ರ ಸರ್ಕಾರದಿಂದ ದೇಶದ ಮೊದಲ ವರ್ಚುವಲ್ ಸೈನ್ಸ್ ಲ್ಯಾಬ್ ಅನಾವರಣ!

eNewsLand Team

“ದಿ ಕಾಶ್ಮೀರ ಫೈಲ್ಸ್” ಚಲನಚಿತ್ರ ಪ್ರದರ್ಶನಕ್ಕೆ ಶೇ.9ರಷ್ಟು ಜಿಎಸ್‌ಟಿ ವಿನಾಯಿತಿ

eNEWS LAND Team

ಮುಂಗಾರು ಮಳೆ ಬೇಗ ಬರುತ್ತೆ ; ಹವಾಮಾನ ಇಲಾಖೆ

eNewsLand Team