ಇಎನ್ಎಲ್ ಕಲಘಟಗಿ: ನಮ್ಮ ಬ್ಯಾಂಕ್ ಇವತ್ತಿಗೂ ₹.11 ಲಕ್ಷ ಲಾಭದಲ್ಲಿದೆ, ಆದರೆ ರೈತರ ಕಬ್ಬಿನ ಬಿಲ್ ಇನ್ನೂ ಬರುವ ಹಂತದಲ್ಲಿರುತ್ತದೆ. ಹಳಿಯಾಳ ಸಕ್ಕರೆ ಕಾರ್ಖಾನೆ ಹೊರತುಪಡಿಸಿ ಇನ್ನುಳಿದ ಕಾರ್ಖಾನೆಗಳ ಬಿಲ್ ಬಾಕಿ ಇದೆ, ರಿಸರ್ವ ಬ್ಯಾಂಕ್ ಪದ್ಧತಿಯಂತೆ ಎನ್.ಪಿ.ಎ. ಪ್ರಕಾರ ನಷ್ಠ ಇದೆ, ಆದರೆ ದಿವಾಳಿಯಾಗಿಲ್ಲ.
ಇದನ್ನೂ ಓದಿ:ಉತ್ತಮ ಕೆಲಸ ಮಾಡಿದ್ದೀರಿ: ಪುರುಷೋತ್ತಮ
ಕಲಘಟಗಿ ಅರ್ಬನ್ ಬ್ಯಾಂಕ್ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ವೃಶಭೇಂದ್ರ ಪಟ್ಟಣಶೆಟ್ಟಿ, ಖಾಸಗಿ ಪತ್ರಿಕೆಯಲ್ಲಿ ಅರ್ಬನ್ ಬ್ಯಾಂಕ್ ದಿವಾಳಿಯಾಗಿವೆ ಎಂದು ಪ್ರಕಟವಾಗಿದೆ. ಆದರೆ ಆ ಶಬ್ದವು ಸತ್ಯಕ್ಕೆ ದೂರವಾಗಿದೆ. ಈ ಕುರಿತು ಪತ್ರಿಕೆಯ ಕಛೇರಿಗೆ ಮಾತನಾಡಿದ್ದೇನೆ. ನಮ್ಮ ಬ್ಯಾಂಕ್ ಒಂದು ಕೋಟಿ ₹21 ಲಕ್ಷ ಷೇರು ಬಂಡವಾಳ, ಬರತಕ್ಕ ಬಾಕಿ ₹1.75ಲಕ್ಷ ನಿಧಿಗಳು, ₹2.27 ಕೋಟಿ ಠೇವಣಿಗಳು, 30 ಲಕ್ಷ ಕೋಟಿ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಸರ್ಕಾರಿ ಭದ್ರತೆಯಲ್ಲಿ 6 ಕೋಟಿ ಸ್ಥಿರಾಸ್ತಿ 2 ಕೋಟಿ ಇರುತ್ತದೆ. ಬಂಗಾರ ಸಾಲ, ಬೀದಿಬದಿ ವ್ಯಾಪಾರಸ್ಥರಿಗೆ, ಮನೆ ಕಟ್ಟಲು, ಹೀಗೆ ಒಟ್ಟು₹19.65 ಕೋಟಿ ಸಾಲವಿದೆ.
ಇದನ್ನೂ ಓದಿ:ಇಂದು ಮಡಕಿಹೊನ್ನಿಹಳ್ಳಿಯಲ್ಲಿ ಕಲ್ಲು ಸಿಡಿ ಹೊಡೆಯುವ ಶಕ್ತಿ ಪ್ರದರ್ಶನ
ನಮ್ಮ ಬ್ಯಾಂಕ್ 3ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿ ಉತ್ತಮ ಸಂಪರ್ಕ ಹೊಂದಿದೆ. ಹಾಗಾಗಿ ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಸಭೆಯಲ್ಲಿ ನಿರ್ದೇಶಕ ಎಸ್.ಎನ್.ಭರಮಗೌಡ್ರ, ಆರ್.ಎ.ಗಾಣಿಗೇರ, ಪಿ.ಎಲ್.ರಘಪ್ಪನವರ, ಜೆ.ಕೆ.ಕರೆಡಣ್ಣವರ, ಎಸ್.ಕೆ.ಖಂಡೇಕರ್, ಆರ್.ಎಸ್.ರೊಟ್ಟಿ, ಆರ್.ಸಿ. ಶೀಲವಂತರ, ಜೆ.ಕೆ.ಕಡ್ಲಾಸ್ಕರ, ಟಿ.ಎಚ್. ಗಬ್ಬೂರ, ಮಂಜುಳಾ ದೇವಲಾಪುರ, ಎಮ್.ಎ.ಮುರಳ್ಳಿ, ಪಿ.ವೈ.ಡಂಬಳ, ಸಿ.ಬಿ.ಸಂಗೇದೇವರಕೊಪ್ಪ, ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಇದನ್ನೂ ಓದಿ:ಹೌ ಟು ಮೇಕ್ ಮನಿ ಎಂದು ಇಟ್ಟರು ಗುನ್ನಾ! ನಿಮ್ಮ ವಾಟ್ಸ್ ಆ್ಯಪ್ ಮೂಲಕ ಲಕ್ಷಕ್ಕೆ ಹೊಡಿಬಹುದು ಕನ್ನಾ!