27.1 C
Hubli
ಮೇ 5, 2024
eNews Land
ಸುದ್ದಿ

ಅಣ್ಣಿಗೇರಿ ಪುರಸಭೆ ಚುನಾವಣೆಗೆ ಮಹೂರ್ತ ಫಿಕ್ಸ್.

ಇಎನ್ಎಲ್ ಅಣ್ಣಿಗೇರಿ : ಕಳೆದ 3 ವರ್ಷಗಳಿಂದ ಪುರಸಭೆ ಚುನಾವಣೆ ಜರುಗದೇ, ಜಿಲ್ಲಾಡಳಿತದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಡಿದ್ದವು. ತಾಲೂಕಿನ  ಅಭಿವೃದ್ದಿ ಕಾರ್ಯಗಳು ಸಾರ್ವಜನಿಕರ ಬೇಡಿಕೆ ಅನ್ವಯ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿತ್ತು. ಸದ್ಯಕ್ಕೆ ಪುರಸಭೆ ಚುನಾವಣೆ ಜರುಗುತ್ತಿರೋದು ಸಾರ್ವಜನಿಕ ವಲಯದಲ್ಲಿ ಸಂತಸ ತಂದಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಅಭ್ಯರ್ಥಿಗಳು, ಚುನಾವಣೆ ಅಖಾಡಕ್ಕೆ ಸ್ಪರ್ಧಿಸುವಲ್ಲಿ ಪ್ರಬಲ ಪೈಪೋಟಿ ಮೂಲಕ ಪುರಸಭೆ ಆಡಳಿತ ಕೈವಶ ಪಡಿಸಿಕೊಳ್ಳುವಲ್ಲಿ ಸನ್ನದ್ದವಾಗಿವೆ. ಮತದಾರರ ಒಲವು ಗೆಲುವಿನ ಮಾಲೆ ಯಾವ ಪಕ್ಷಕ್ಕೆ ಎಂಬುದನ್ನು ಕಾಯ್ದು ನೋಡಬೇಕಿದೆ.
ಡಿ.08 ರಂದು ಜಿಲ್ಲಾಧಿಕಾರಿಗಳು ಚುನಾವಣೆ ಆಧಿಸೂಚನೆಯನ್ನು ಹೊರಡಿಸಲಿದ್ದು. ಅಭ್ಯರ್ಥಿಗಳ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಡಿ.15 ಹಾಗೂ ಡಿ.16 ರಂದು ನಾಮಪತ್ರ ಪರಿಶೀಲಿಸುವುದು. ಡಿ.18 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾಗಿರುತ್ತದೆ. ಡಿ.27 ರಂದು ಬೆಳಿಗ್ಗೆ 7-೦೦ ರಿಂದ ಸಂಜೆ 5-೦೦ ಗಂಟೆಯವರೆಗೆ  ಮತದಾನ ನಡೆಯಲಿದೆ. ಡಿ.29 ರಂದು ಮರುಮತದಾನ ಅವಶ್ಯವಿದ್ದರೆ ಬೆಳಿಗ್ಗೆ 7-೦೦ ಗಂಟೆಯಿoದ ಸಂಜೆ 5-೦೦ ಗಂಟೆಯವರೆಗೆ ಜರಗುವುದು. ಡಿ.3೦ ರಂದು ಮತ ಎಣಿಕೆ ಜರುಗಲಿದೆ.

Related posts

ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ಮ್ಯಾಟ್‌ ಕಬಡ್ಡಿ ಟೂರ್ನಿ ನಾಳೆಯಿಂದ

eNewsLand Team

ಮಹಾವೀರ ಲಿಂಬ್ ಸೆಂಟರ್’ನಲ್ಲಿ ಕೃತಕ ಕೈ ಕಾಲುಗಳ ಜೋಡಣೆಯಲ್ಲಿ ಭಾಗಿ : ಮಹಾಪೌರ ಈರೇಶ ಅಂಚಟಗೇರಿ

eNEWS LAND Team

ಅಣ್ಣಿಗೇರಿ ತಾಲೂಕಾ ಕಸಾಪ ಕಾರ್ಯಕಾರಣಿ ಸಭೆ

eNEWS LAND Team