22 C
Hubli
ಮೇ 5, 2024
eNews Land
ದೇಶ

ನಿರಂತರ ಮಳೆಗೆ ಪ್ರವಾಹ; ಆಂಧ್ರದಲ್ಲಿ‌ 23 ಬಲಿ: ತಿಮ್ಮಪ್ಪನಿಗೂ ವರುಣನ ಕಾಟ

ಉಕ್ಕಿ ಹರಿಯುತ್ತಿರುವ ಚೆಯ್ಯೂರು, ಸ್ವರ್ಣಮುಖಿ ಸೇರಿ ಹಲವು ನದಿಗಳು

ಕಡಪ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳ ಸಂಚಾರ ನ. 25 ರವರೆಗೆ ಸ್ಥಗಿತ

ಇಎನ್ಎಲ್ ಬ್ಯೂರೋ

ಆಂಧ್ರ ಪ್ರದೇಶದಲ್ಲಿ ಭಾರೀ  ಮಳೆ ಮುಂದುವರೆದಿದ್ದು ಈವರೆಗಿನ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ನೂರಾರು ಮಂದಿ ನಾಪತ್ತೆ ಆಗಿದ್ದಾರೆ. ಪೊಲೀಸ್, ಅರೆಸೈನಿಕ, ಸೈನಿಕರಿಂದ ರಕ್ಷಣಾ ಕಾರ್ಯ, ಜನರ ಸ್ಥಳಾಂತರ ನಡೆದಿದೆ.

ದಕ್ಷಿಣ ಆಂಧ್ರ ಪ್ರದೇಶದ ರಾಯಲಸೀಮ ಪ್ರಾಂತ್ಯದಲ್ಲಿ ಪ್ರವಾಹ ಹೆಚ್ಚಾಗಿದ್ದು, ಅನಂತಪುರ, ತಿರುಪತಿ, ಚಿತ್ತೂರಿನಲ್ಲಿ ಭಾರಿ ಮಳೆ ಮತ್ತು ಪ್ರವಾಹ ಮುಂದುವರೆದಿದೆ ಎಂದು ಸ್ಥಳೀಯ ವಾಹಿನಿಗಳು ವರದಿ ಮಾಡಿವೆ.

ರಾಜ್ಯದ ಚಿತ್ತೂರು, ಕಡಪ, ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳು ಹಾನಿಗೀಡಾಗಿವೆ. ನಿರಂತರವಾದ ಮಳೆಗೆ ಚೆಯ್ಯೂರು ನದಿ ತುಂಬಿ ಹರಿಯುತ್ತಿದೆ. ಅನ್ನಮಯ್ಯ ನೀರಾವರಿ ಯೋಜನೆಗೂ ಪ್ರವಾಹದಿಂದ ಹಾನಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಕಡಪ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳ ಸಂಚಾರ ನ. 25 ರವರೆಗೆ ಸ್ಥಗಿತಗೊಳಿಸಲಾಗಿದೆ.

ತಿರುಪತಿಯಲ್ಲಿ ವರುಣನ ಅಬ್ಬರಕ್ಕೆ ಪ್ರವಾಹ ಮುಂದುವರಿದಿದೆ.  ಮುಂಜಾಗ್ರತಾ ಕ್ರಮವಾಗಿ ತಿರುಮಲಕ್ಕೆ ಸಂಪರ್ಕ ಕಲ್ಪಿಸುವ ಘಾಟ್ ರಸ್ತೆ ಮುಚ್ಚಲಾಗಿದೆ. ಜತೆಗೆ ನಡಿಗೆ ಮಾರ್ಗವನ್ನೂ ಬಂದ್ ಮಾಡಲಾಗಿದ್ದು, ಯಾತ್ರಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಸ್ವರ್ಣಮುಖಿ ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದ್ದು, ಹಲವಾರು ಜನ, ರಾಸುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ.

ಸೈನ್ಯವು ವಿಶೇಷ ವಿಮಾನ ಬಳಸಿ ರಕ್ಷಣಾ ಕಾರ್ಯ ಮುಂದುವರಿಸಿದೆ.

Related posts

ವ್ಯವಹಾರ ಕುದುರಿಸಲು ಲಂಚ: 82ನೇ ಸ್ಥಾನದಲ್ಲಿ ಭಾರತ

eNewsLand Team

ಬಜೆಟ್‌ನಲ್ಲಿ ನೈಋತ್ಯ ರೈಲ್ವೆಗೆ ಬಂಪರ್! ₹ 6900 ಕೋಟಿ, ಇತಿಹಾಸದಲ್ಲೇ ಹೆಚ್ಚು

eNewsLand Team

ದಕ್ಷಿಣ ನೌಕಾನೆಲೆ ಕಮಾಂಡರ್ ಆಗಿ ಧಾರವಾಡದ ಅರವಿಂದ್

eNewsLand Team