29 C
Hubli
ಸೆಪ್ಟೆಂಬರ್ 26, 2023
eNews Land
ಸುದ್ದಿ

ಪೂರಕ ಕಾನೂನು ಸುಗಮಕಾರರ ತರಬೇತಿ ಮಹಿಳೆಯರ ಸಬಲೀಕರಣಕ್ಕೆ ಶಿಕ್ಷಣ ಅಗತ್ಯ : ನ್ಯಾ.ಹುಲ್ಲೂರ

ಇಎನ್ಎಲ್ ಬಾಗಲಕೋಟೆ: ನ.20 : ಇಂದು ನಗರದ ಅಕ್ಷಯ ಹೋಟೆಲ್ ಸಭಾಂಗಣದಲ್ಲಿ ಮಂಗಳೂರು ಡೆವಲಪ್‍ಮೆಂಟ್ ಎಜ್ಯುಕೇಶನ್ ಸರ್ವಿಸ್, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಪೂರಕ ಕಾನೂನು ಸುಗಮಕಾರರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ, ಕಾನೂನಿನ ನಡಿಗೆ ಮಹಿಳೆಯರ ಕಡೆಗೆ ಪೋಸ್ಟರ ಬಿಡುಗಡೆಗೊಳಿಸಿ ಮಾತನಾಡಿದರು.
ಮಹಿಳೆ ಆರ್ಥಿಕವಾಗಿ ಸಬಲೀಕರಣ ಹೊಂದಲು ಶಿಕ್ಷಣ ಅಗತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ ಹೇಳಿದರು.
  ಮಹಿಳೆ ಲಿಂಗತ್ವ, ಕಿರುಕುಳ, ಕೌಟುಂಬಿಕ ಹಾಗೂ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ. ಮಹಿಳಾ ಆರ್ಥಿಕವಾಗಿ ಸಬಲರಾದಾಗ ಮಾತ್ರ ಇವೆಲ್ಲವೂಗಳನ್ನು ತಡೆಯಲು ಸಾಧ್ಯವಾಗುತ್ತದೆ. ಇದಕ್ಕೆ ಶಿಕ್ಷಣ ಅಗತ್ಯವಾಗಿದೆ. ಪಾಲಕರು ಹೆಣ್ಣು ಹೆತ್ತರೆ ಹೊರೆ ಎಂಬ ಭಾವನೆ ಹಾಗೂ ಎಲ್ಲಂದರಲ್ಲಿ ಬಿಟ್ಟು ಹೋಗುವುದು, ಬೇರೆಯವರಿಗೆ ನೀಡುತ್ತಿರುವದಲ್ಲದೇ ಬಾಲ್ಯದಲ್ಲಿಯೇ ವಿವಾಹ ಮಾಡಿಕೊಡಲಾಗುತ್ತಿದೆ. ಇದರಿಂದ ಮಹಿಳೆ ಮಾನಸಿಕ, ದೈಹಿಕವಾಗಿ ಅಸ್ವಸ್ತರಾಗುತ್ತಾರೆ. ಅಲ್ಲದೇ ಅವರಿಗೆ ಹುಟ್ಟುವ ಮಗು ಕೂಡಾ ಬುದ್ದಿಮಾಂದ್ಯ, ವಿಕಲಚೇತನರಾಗಿ ಬೆಳೆಯುತ್ತಿವೆ ಎಂದರು.
  ಕಾನೂನಿನ ಅರಿವು ಎಲ್ಲರಿಗೂ ಅಗತ್ಯವಾಗಿದ್ದು, ತಾವು ತಿಳಿದುಕೊಳ್ಳುವದರ ಜೊತೆಗೆ ಇತರರಿಗೂ ತಿಳಿಸುವ ಕಾರ್ಯವಾಗಬೇಕು. ಸಮಾಜಕ್ಕೆ ಪಿಡುಗಾಗಿರುವ ಬಾಲ್ಯವಿವಾಹ ತಡೆಗೆ ಮಹಿಳೆಯರು ಮುಂದಾಗುವಂತೆ ಮಾಡುವ ನಿಟ್ಟಿನಲ್ಲಿ ಡೀಡ್ಸ್ ಸಂಸ್ಥೆ ಪೂರಕ ಕಾನೂನು ಸುಗಮಕಾರರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾದುದು. ಇದರ ಸದುಪಯೋಗವನ್ನು ಸುಗಮಕಾರರು ಪಡೆದುಕೊಳ್ಳಬೇಕು ಎಂದರು.
  ಮಂಗಳೂರಿನ ಡೆವಲಪ್‍ಮೆಂಟ್ ಎಜುಕೇಶನ್ ಸರ್ವಿನ ನಿರ್ದೇಶಕಿ ಮರ್ಲಿನ್ ಮಾರ್ಟಿಸ್ ಮಾತನಾಡಿ ಹೆಣ್ಣು ಮಕ್ಕಳ ಮೇಲೆ ಬಾಲ್ಯದಿಂದ ಹಿಡಿದು ನಿರಂತರವಾಗಿ ಯುದ್ಧಗಳು ನಡೆಯುತ್ತಿವೆ. ಈ ಯುದ್ಧಗಳನ್ನು ತಡೆಯುವ ನಿಟ್ಟಿನಲ್ಲಿ ಸುಗಮಕಾರರಿಗೆ ಪೂರಕ ಕಾನೂನು ತರಬೇತಿ ಹಮ್ಮಿಕೊಳ್ಳಲಾಗಿದೆ. ರಾಜ್ಯದ 8 ಜಿಲ್ಲೆಗಳಲ್ಲಿ ತರಬೇತಿ ನೀಡಲಾಗಿದ್ದು, ಬಾಗಲಕೋಟೆ 9ನೇ ಜಿಲ್ಲೆಯಾಗಿದೆ. ಸ್ವಯಂ ಸೇವಾ ಸಂಸ್ಥೆ, ಸ್ಥಳೀಯ ಸಂಘಟನೆ, ವೇದಿಕೆ ಕಾರ್ಯಕರ್ತೆಯರಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದರು.
  ತಳಮಟ್ಟದ ಮಹಿಳೆಯರಿಗೆ ಮತ್ತು ಜನರಿಗೆ ಹೆಣ್ಣು ಗಂಡು ಸಮಾನತೆಯ ಮತ್ತು ಮಹಿಳಾ ಕಾನೂನುಗಳ ಅರಿವು ಮೂಡಿಸುವ ಮತ್ತು ಅಸಮಾನತೆ, ಹಿಂಸೆಗಳು ನಡೆದಲ್ಲಿ ಅದನ್ನು ಎದುರಿಸಲು ಸಶಕ್ತಗೊಳಿಸುವ ಉದ್ದೇಶದೊಂದಿಗೆ ಈ ತರಬೇತಿ ಹಮ್ಮಿಕೊಳ್ಳಲಾಗಿದೆ. ಸುಗಮಕಾರರಿಗೆ ಪೂರಕ ಅರಿವು ಕಾರ್ಯಕ್ರಮ ನೀಡಿದಾಗ ಅವರು ತಮ್ಮ ಪೀಲ್ಡನಲ್ಲಿ ಇತರರಿಗೆ ಅರಿವು ಮೂಡಿಸುವದರಿಂದ ಆ ವ್ಯಾಪ್ತಿಯಲ್ಲಿ ಜನರು ಜಾಗೃತಗೊಳ್ಳಲು ಸಾಧ್ಯವಾಗುತ್ತದೆ ಎಂದರು.
  ಡೀಡ್ಸ್ ಸಂಸ್ಥೆಯ ಖುಷಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡೀಡ್ಸ್ ಸಂಸ್ಥೆಯ ತುಕಾರಾಮ, ಸವಿತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts

ಎಸ್‍ಡಿಎಂಗೆ ಮುನೇನಕೊಪ್ಪ , ಶೆಟ್ಟರ್ ಭೇಟಿ ; ಕವಿ ಕಣವಿ ಆರೋಗ್ಯ ವಿಚಾರಣೆ

eNewsLand Team

ಐಎಸ್ಎಲ್: ಇವತ್ತು ಎಟಿಕೆಎಂಬಿ V/S ಮುಂಬೈ

eNewsLand Team

ಅಂತಾರಾಜ್ಯ ಜಲವಿವಾದ: ಏಪ್ರಿಲ್’ನಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡುತ್ತೇನೆ: ಬೊಮ್ಮಾಯಿ

eNewsLand Team