23 C
Hubli
ಸೆಪ್ಟೆಂಬರ್ 25, 2023
eNews Land
ಜಿಲ್ಲೆ

ಸ್ವಚ್ಛ ಸರ್ವೇಕ್ಷಣೆ: ಹುಬ್ಬಳ್ಳಿ ಧಾರವಾಡ ಮಹಾನಗರಕ್ಕೆ 25ನೇ ಸ್ಥಾನ

ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ಆಯುಕ್ತ ಸುರೇಶ್ ಇಟ್ನಾಳ್

ಇಎನ್ಎಲ್ ಹುಬ್ಬಳ್ಳಿ

ಕೇಂದ್ರ ಸರ್ಕಾರವು ಸ್ವಚ್ಛ ನಗರಗಳಿಗೆ ನೀಡುವ ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಈ ಬಾರಿ ಗಣನೀಯ ಸಾಧನೆ ಮಾಡಿದ್ದು 25ನೇ ಸ್ಥಾನ ಪಡೆದಿದೆ.

ಶನಿವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ್ ಪ್ರಶಸ್ತಿ ಸ್ವೀಕಾರ ಮಾಡಿದರು.

ಹುಧಾ ಪಾಲಿಕೆಯು ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆಯಲ್ಲಿ 25ನೇ ರ್ಯಾಂಕ್, ತ್ಯಾಜ್ಯ ಮುಕ್ತ ನಗರ ವಿಭಾಗದಲ್ಲಿ ತ್ರೀ ಸ್ಟಾರ್ ಪಟ್ಟ ಪಡೆದಿದೆ. ಜತೆಗೆ 3-10ಲಕ್ಷ ಜನಸಂಖ್ಯೆಯುಳ್ಳ ನಗರದ ವಿಭಾಗದಲ್ಲಿ ‘ಫಾಸ್ಟೆಸ್ಟ್ ಮೂವರ್’ ಮಿಡ್ಯಂ ಸಿಟಿ ಅವಾರ್ಡ್ ಪಡೆದಿದೆ.

ಸ್ಮಾರ್ಟ್ ಸಿಟಿ ಯೋಜನೆ ಸಹಕಾರದೊಂದಿಗೆ ಮನೆ ಮನೆ ಕಸ ಸಂಗ್ರಹ, ತ್ಯಾಜ್ಯ ವಿಂಗಡಣೆ, ಸಂಸ್ಕರಣೆ ಕುರಿತು ಹುಧಾ ಮಹಾನಗರ ಪಾಲಿಕೆಯು ಸಾಕಷ್ಟು ಕ್ರಮ ಕೈಗೊಂಡಿತ್ತು. ಆಯುಕ್ತ ಸುರೇಶ್ ಇಟ್ನಾಳ್ ಅವರ ಮಾರ್ಗದರ್ಶನದಲ್ಲಿ ಪಾಲಿಕೆ ಘನತ್ಯಾಜ್ಯ ವಿಲೇವಾರಿ ವಿಭಾಗ ಅಧಿಕಾರಿಗಳು ಉತ್ತಮ ಕಾರ್ಯ ನಿರ್ವಹಿಸಿದ್ದರು.

 

Related posts

ಹುಬ್ಬಳ್ಳಿಲಿ 11 ವರ್ಷದ ಬಳಿಕ ಬಿಜೆಪಿ ರಾಜ್ಯ ಕಾರ್ಯಕಾರಿಣಿ: ಸಭೆಗೆ ಬಂದವರಿಗೆ ವಿಶೇಷ ಗಿಫ್ಟ್ ಸಿಗತ್ತೆ!!

eNewsLand Team

ಮನೆ ಹಾನಿ ವಿವರ ದಾಖಲಿಸಲು ಡಿ.12ರವರೆಗೆ ಅವಕಾಶ

eNewsLand Team

ಅಪಘಾತ: ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದ ಧಾರವಾಡ ಬಾಲಕ ಧಾರುಣ ಸಾವು

eNewsLand Team