33 C
Hubli
ಏಪ್ರಿಲ್ 27, 2024
eNews Land
ರಾಜ್ಯ

ಕೇಂದ್ರದಲ್ಲಿ ಸ್ಪಂದನಾಶೀಲ ಸರ್ಕಾರವಿದೆ: ಸಿಎಂ ಬೊಮ್ಮಾಯಿ

ಇಎನ್ಎಲ್ ಬೆಂಗಳೂರು

ರೈತರ ಅಭಿಪ್ರಾಯಗಳಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಮುಂದಿನ ಅಧಿವೇಶನದಲ್ಲಿ ಕೃಷಿ ಕಾಯ್ದೆಯಲ್ಲಿನ ಮೂರು ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಪ್ರಧಾನ ಮಂತ್ರಿಗಳು ತಿಳಿಸಿದ್ದಾರೆ. ಆ ಮೂಲಕ ಕೇಂದ್ರದಲ್ಲಿ ಇರುವ ಸ್ಪಂದನಾಶೀಲ ಸರ್ಕಾರ ರೈತರ ಒತ್ತಾಯಕ್ಕೆ ಸ್ಪಂದಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಮ್ಮ ನಿವಾಸದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತ ಡಬ್ಲ್ಯೂಟಿಓ ದೊಂದಿಗೆ ಮಾಡಿಕೊಂಡಿದ್ದ ಅಂತರಾಷ್ಟ್ರೀಯ ಒಪ್ಪಂದದಂತೆ ಕೃಷಿ ಹಾಗೂ ಕೃಷಿ ಮಾರುಕಟ್ಟೆಯಲ್ಲಿ ಬಹಳಷ್ಟು ಸುಧಾರಣೆಗಳನ್ನು ತರಬೇಕೆನ್ನುವ ಉದ್ದೇಶವಿತ್ತು. ಈ ಹಿನ್ನೆಲೆಯಲ್ಲಿ ಕೃಷಿ ಕಾಯ್ದೆಯ ಕರಡು ಯುಪಿಎ ಸರ್ಕಾರ ಮಾಡಿತ್ತು. ನಂತರ ಎಲ್ಲಾರಾಜ್ಯಗಳ ಅಭಿಪ್ರಾಯಗಳನ್ನು ಪಡೆದು ಈ ಕರಡಿನಲ್ಲಿ ಅನೇಕ ಸುಧಾರಣೆಗಳನ್ನು ತರಲಾಗಿತ್ತು. ರೈತರು ಬೆಳೆದ ಫಸಲನ್ನು ನೇರವಾಗಿ ಮಾರಾಟ ಮಾಡುವ ಅವಕಾಶವನ್ನು ಈ ಕರಡು ಕಾಯ್ದೆಯಡಿ ಮಾಡಿಕೊಡಲಾಗಿತ್ತು. ಪಂಜಾಬ್ ಮತ್ತು ಹರಿಯಾಣದ ರೈತರು ನಿಯಂತ್ರಿತ ಮಾರುಕಟ್ಟೆಯಲ್ಲಿಯೇ ಬೆಳೆ ಮಾರಾಟದ ಅವಕಾಶಕ್ಕಾಗಿ ಹೋರಾಟ ನಡೆಸಿದ್ದರು ಎಂದು ತಿಳಿಸಿದರು.

ರಾಜ್ಯದಲ್ಲಿ ಅಕಾಲಿಕ ಮಳೆ ಹಾಗೂ ಬೆಳೆಹಾನಿ ಬಗ್ಗೆ ವರದಿ:
ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ವ್ಯಾಪಕವಾಗಿ ಅಕಾಲಿಕ ಮಳೆ ಆಗಿದೆ. ತಮಿಳುನಾಡು, ಆಂಧ್ರಕ್ಕೆ ಹೊಂದಿರುವ ಜಿಲ್ಲೆ, ಕರಾವಳಿ ಜಿಲ್ಲೆ, ಉತ್ತರಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ಹಾಗೂ ಬೆಳೆ ಹಾನಿ ಬಗ್ಗೆ ವರದಿ ನೀಡಲು ಸೂಚಿಸಿದ್ದೇನೆ. ಭತ್ತ ಜೋಳ ಬೆಳೆ ಹಾನಿಯಾಗಿರುವ ಬಗ್ಗೆ ಪ್ರಾಥಮಿಕ ಮಾಹಿತಿಇದ್ದು, ನಿಖರವಾದ ಮಾಹಿತಿಯನ್ನು ಪ್ರತಿ ಜಿಲ್ಲೆಯಿಂದಲೂ ಪಡೆಯುತ್ತಿದ್ದೇನೆ. ಬೆಳೆಹಾನಿ ಸಮೀಕ್ಷೆ ನಂತರ ಬೆಳೆ ಪರಿಹಾಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Related posts

ಮೀಸಲಾತಿ ಬಗ್ಗೆ ಸಿದ್ದರಾಮಯ್ಯ ಬಾಂಬ್!!. ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ!!

eNewsLand Team

ಜೋಗದ ವೈಭವದ ದೃಶ್ಯ ಕಣ್ತುಂಬಿಕೊಂಡ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್

eNewsLand Team

ಬಿಜೆಪಿಗೆ ಕಾಂಗ್ರೆಸ್ ಗುನ್ನಾ!! ಪಾಲಿಕೆ ಆವರಣದಲ್ಲೆ ತ್ಯಾಜ್ಯ ಸುರಿದ್ರು!!!

eNewsLand Team