23.4 C
Hubli
ಮಾರ್ಚ್ 24, 2023
eNews Land
ಜಿಲ್ಲೆ ರಾಜ್ಯ

ಬಿಜೆಪಿಗೆ ಕಾಂಗ್ರೆಸ್ ಗುನ್ನಾ!! ಪಾಲಿಕೆ ಆವರಣದಲ್ಲೆ ತ್ಯಾಜ್ಯ ಸುರಿದ್ರು!!!

Listen to this article

ಇಎನ್ಎಲ್ ಧಾರವಾಡ:

ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಕಾಂಗ್ರೆಸ್ ಠಕ್ಕರ್ ನೀಡಿದೆ.

 

ಮಹಾನಗರದ ಅಶುಚಿತ್ವ ಖಂಡಿಸಿ ಮಹಾನಗರ ಪಾಲಿಕೆ ಕಚೇರಿ ಆವರಣಕ್ಕೆ ಎರಡು ಟ್ರ್ಯಾಕ್ಟರ್ ನಲ್ಲಿ ತ್ಯಾಜ್ಯ ತಂದು ಒಂದು ಟ್ರ್ಯಾಕ್ಟರ್ ಕಸ ಸುರಿದು ಪ್ರತಿಭಟನೆ ನಡೆಸಿದರು. ತ್ಯಾಜ್ಯದ ಮೇಲೆ ಮೋದಿ ಕಟೌಟ್ ಇಟ್ಟು

 

ಪಾಲಿಕೆ ಆವರಣದಲ್ಲಿ ಕಸ ಸುರಿಯದಂತೆ ಅಧಿಕಾರಿಗಳು, ಪೊಲೀಸರು ನಾನಾ ಪರಿಯಾಗಿ ಕೇಳಿಕೊಂಡರು ಒಪ್ಪದೆ ಕಸ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಮಹಾನಗರ ಜಿಲ್ಲಾಧ್ಯಕ್ಷ ಎರಡು ತಿಂಗಳ ಹಿಂದೆ ಕಾಂಗ್ರೆಸ್ ಸಮಾವೇಶ ನಡೆದಾಗ ಫ್ಲೆಕ್ಸ್ ತೆರವು ಮಾಡಿ ಕಸ ಹೆಚ್ಚಾಗಿದೆ ಎಂದು ಪಾಲಿಕೆ ಹೇಳಿತ್ತು.

ಕಾರ್ಯಕಾರಿಣಿ ಹಿನ್ನೆಲೆಯಲ್ಲಿ ನಗರದಲ್ಲಿ ತ್ಯಾಜ್ಯ ವಿಲೇವಾರಿ ಸರಿಯಾಗಿ ಮಾಡಿಲ್ಲ. ಕೇವಲ ಕಾರ್ಯಕಾರಿಣಿ ನಡೆವ ಸ್ಥಳದಲ್ಲಿ ಪಾಲಿಕೆ ಸ್ವಚ್ಛತೆಯಲ್ಲಿ ತೊಡಗಿದೆ. ಬಿಜೆಪಿ ಮಾತು ಕೇಳಿ ಅವರ ಸಮಾವೇಶ, ಮನೆ ಕಾರ್ಯಕ್ರಮಕ್ಕೆ ಮಾತ್ರ ಸ್ವಚ್ಛತೆ ಮಾಡಲಾಗುತ್ತಿದೆ ಎಂದು ಆಕ್ರೋಶ.

ಇದು ಕೇವಲ ಸಾಂಕೇತಿಕ ಪ್ರತಿಭಟನೆ. ಪಾಲಿಕೆ ಇದೇ ರೀತಿ ಬಿಜೆಪಿ ಏಜೆಂಟರಾಗಿ ಕೆಲಸ ಮಾಡಿದರೆ ನಾವು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಶಾಕೀರ್ ಸನದಿ, ಅಲ್ತಾಫ್ ಹಳ್ಳೂರ, ರಜತ ಉಳ್ಳಾಗಡ್ಡಿಮಠ, ದೀಪಾ ಗೌರಿ, ನಾಗರಾಜ ಗೌರಿ ಸೇರಿದಂತೆ ಹಲವರಿದ್ದರು.

Related posts

ಅಣ್ಣಿಗೇರಿ ಯಾವ ವಾರ್ಡಲ್ಲಿ‌ ಎಷ್ಟು ಮತದಾನ ಆಗಿದೆ ಗೊತ್ತಾ? ಇಲ್ನೋಡಿ

eNewsLand Team

ಕಾಳಿ ಸ್ವಾಮಿಗೆ ಮಸಿ; ಹಿಂದೂ ಫೈರ್ ಬ್ರ್ಯಾಂಡ್ ಮುತಾಲಿಕ್ ಹೇಳಿದ್ದೇನು ಗೊತ್ತಾ?

eNewsLand Team

ಅನುಭವ ಮಂಟಪ ಯುವ ಪೀಳಿಗೆಗೆ ಆದರ್ಶದ ಮಂದಿರವಾಗಲಿದೆ : ಮುಖ್ಯಮಂತ್ರಿ  ಬೊಮ್ಮಾಯಿ

eNewsLand Team