26 C
Hubli
ಏಪ್ರಿಲ್ 30, 2024
eNews Land
ಸುದ್ದಿ

‘ಲಾಲ್‌ ಸಲಾಮ್‌’ ಮೂಲಕ ಲೇಖಕಿಯಾದ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಇಎನ್ಎಲ್ ಬ್ಯೂರೋ

ಕೇಂದ್ರ ಸಚಿವೆ ಸ್ಮೃತಿ ಜುಬಿನ್‌ ಇರಾನಿ ಅವರು ‘ಲಾಲ್‌ ಸಲಾಮ್‌’ ಕಾದಂಬರಿಯ ಮೂಲಕ ಲೇಖಕರಾಗಿ ಹೊಸ ಹೆಜ್ಜೆ ಇಡುತ್ತಿದ್ದಾರೆ. ಸ್ಮೃತಿ ಅವರ ಮೊದಲ ಕಾದಂಬರಿ ಹೊರ ಬರುತ್ತಿರುವ ಕುರಿತು ವೆಸ್ಟ್‌ಲೆಂಡ್‌ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ.

2010ರ ಏಪ್ರಿಲ್‌ನಲ್ಲಿ ದಾಂತೇವಾಡಾದಲ್ಲಿ ನಡೆದ ನಕ್ಸಲ್‌ ದಾಳಿಯಲ್ಲಿ 76 ಮಂದಿ ಸಿಆರ್‌ಪಿಎಫ್‌ ಸಿಬ್ಬಂದಿ ಸಾವಿಗೀಡಾಗಿದ್ದರು. ಆ ಘಟನೆಯನ್ನು ಆಧರಿಸಿ ಸ್ಮೃತಿ ಅವರು ಕಾದಂಬರಿ ಹೆಣೆದಿದ್ದಾರೆ. ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿನ ಸವಾಲುಗಳನ್ನು ಎದುರಿಸಿ, ದೇಶಕ್ಕಾಗಿ ಜೀವನ ಮುಡುಪಾಗಿಟ್ಟು ಸೇವೆ ಸಲ್ಲಿಸಿರುವ ಅಸಾಧಾರಣ ಪುರಷರು ಹಾಗೂ ಮಹಿಳೆಯರಿಗೆ ಈ ಕೃತಿಯ ಮೂಲಕ ಗೌರವ ಸಲ್ಲಿಸಲಾಗುತ್ತಿದೆ. ನವೆಂಬರ್‌ 29ರಂದು ಕಾದಂಬರಿಯು ಬಿಡುಗಡೆಯಾಗಲಿದೆ.

ರಾಜಕೀಯ ಮತ್ತು ಭ್ರಷ್ಟಾಚಾರದ ವ್ಯವಸ್ಥೆಯ ವಿರುದ್ಧ ವಿಕ್ರಮ್‌ ಪ್ರತಾಪ್‌ ಸಿಂಗ್‌ ಹೆಸರಿನ ಯುವ ಅಧಿಕಾರಿಯು ಎದುರಿಸುವ ಸವಾಲುಗಳನ್ನು ‘ಲಾಲ್‌ ಸಲಾಮ್‌’ ಕಥೆ ಒಳಗೊಂಡಿದೆ

Related posts

ಹುಬ್ಬಳ್ಳಿಯ ಗಣೇಶನಿಗೆ ಸಂಭ್ರಮದ ವಿದಾಯ

eNEWS LAND Team

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

eNEWS LAND Team

ಅಸಮಾನತೆ ತೊಡೆಯುವಲ್ಲಿ ಅಂಬೇಡ್ಕರ್ ಬಸವಣ್ಣನವರ ಪಾತ್ರಮುಖ್ಯ: ಡಾ.ಎ.ಸಿ.ವಾಲಿ

eNewsLand Team