22 C
Hubli
ಅಕ್ಟೋಬರ್ 1, 2023
eNews Land
ಸುದ್ದಿ

ಅಸಮಾನತೆ ತೊಡೆಯುವಲ್ಲಿ ಅಂಬೇಡ್ಕರ್ ಬಸವಣ್ಣನವರ ಪಾತ್ರಮುಖ್ಯ: ಡಾ.ಎ.ಸಿ.ವಾಲಿ

ಇಎನ್ಎಲ್ ಅಣ್ಣಿಗೇರಿ: ಸಮಾಜದಲ್ಲಿ ಅಸಮಾನತೆ ತಡೆಯುವ ಕುರಿತು ಅಂಬೇಡ್ಕರ ಮತ್ತು ಬಸವಣ್ಣನವರ ನಡುವಿನ ಸಮನ್ವತೆಯ ಬಗ್ಗೆ ಯಾವ ರೀತಿ ಶ್ರಮಿಸಿದ್ದಾರೆ ಎಂಬುವುದನ್ನು ಡಾ.ಎ.ಸಿ.ವಾಲಿ ವಿವರಿಸಿದರು.

ಪಟ್ಟಣದ ಎಂ.ಬಿ.ಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಣ್ಣಿಗೇರಿ ಮತದಾರರ ಸಾಕ್ಷರತಾ ಸಂಘ ಹಾಗೂ ರಾಜ್ಯಶಾಸ್ತ್ರ ವಿಭಾಗದ ಅಡಿಯಲ್ಲಿ ಸಂವಿಧಾನದ ದಿನಾಚರಣೆ ನಿಮಿತ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂವಿಧಾನದ ರಚನೆ ಪೂರ್ವದಲ್ಲಿ ಭಾರತದಲ್ಲಿದ್ದ ಬ್ರಿಟಿಷ್ ಆಧಿಪತ್ಯ ಅಂತ್ಯಗೊಳಿಸುವ ಸಲುವಾಗಿ ಅಂಬೇಡ್ಕರ ನೇತೃತ್ವದ ತಂಡವು ಸಂವಿಧಾನದ ರಚನೆಗೆ ತೊಡಗಿಸಿಕೊಂಡಿದ್ದರ ಬಗ್ಗೆ ಉಮಾದೇವಿ ಕಣವಿ ಹೇಳಿದರು.

ವಿದ್ಯಾರ್ಥಿಗಳಾದ ಮಂಜುನಾಥ ಹೊಸಮನಿ, ಮತ್ತು ಕಲಾವತಿ ಕೆಂಭಾವಿ ಮಾತನಾಡಿ ಭಾರತದ ಸಂವಿಧಾನಕ್ಕೆ ತೆಗೆದುಕೊಂಡ ಕಾಲಾವಧಿ, ಭಾರತೀಯರಿಗೆ ಸಂವಿಧಾನದ ಅವಶ್ಯಕತೆ ಮಹತ್ವ ಕುರಿತು ಮಾತನಾಡಿದರು.

ಅಧ್ಯಕ್ಷತೆ ಪ್ರಾಚಾರ್ಯ ಬಿ.ಎನ್.ಹೊಮನಿ ಮಾತನಾಡಿ ಭಾರತದ ಸಂವಿಧಾನದಲ್ಲಿ ಇರುವ ಹಕ್ಕು ಮತ್ತು ಕರ್ತವ್ಯಗಳಿಂದ ಆಗುವ ಪ್ರಯೋಜನ, ದೊರೆಯುವ ಸಂವಿಧಾನಾತ್ಮಕ ಪರಿಹಾರದ ಹಕ್ಕು, ಹಾಗೂ ಸಂವಿಧಾನ ರಚನೆ ಅಧಿಕೃತವಾಗಿ ಜಾರಿಗೆ ತರುವ ತನಕ ಅಂಬೇಡ್ಕರ ವಹಿಸಿದ ಪಾತ್ರ ಕುರಿತು ಮಾತನಾಡಿದರು.

ಕೀರ್ತಿ ಕೆ., ಮಂಗಳಾ ಹಿರೇಮಠ, ಶೃತಿ ಭೋವಿ, ಮಂಜುನಾಥ ಮಂಗೋಣಿ, ಅಧ್ಯಾಪಕರ ವೃಂದ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಮುಸ್ಕಾನ್ ಇಸ್ಮಾಯಿಲ್ ನಿರೂಪಿಸಿದರು. ಹರ್ಷಿತಾ, ವಿಜಯಲಕ್ಷ್ಮೀ ಪ್ರಾರ್ಥಿಸಿದರು. ಹೀನಾ ನಾಯ್ಕವಾಡ ವಂದಿಸಿದರು.

Related posts

ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ ಬಹಳ ದಿನ ಉಳಿಯುವುದಿಲ್ಲ: ಮಾಜಿ ಸಿಎಂ ಬೊಮ್ಮಾಯಿ‌

eNEWS LAND Team

ಹೊಟ್ಟೆ ನೋವಿಗೆ ಹೀಗೆ ಮಾಡ್ಕೊಂಡ ಸುಳ್ಳದ ಹುಡುಗಿ!

eNewsLand Team

ಶೇ.90 ರಷ್ಟು ಷೇರು ಬಂಡವಾಳದೊಂದಿಗೆ ವಿವಿಧೋದ್ದೇಶಗಳ ಮಹಿಳಾ ಸಹಕಾರಿ ಸಂಘಗಳ ಪ್ರಾರಂಭ : ಸಿಎಂ ಬೊಮ್ಮಾಯಿ

eNEWS LAND Team