32 C
Hubli
ಮೇ 5, 2024
eNews Land
ದೇಶ

ವ್ಯವಹಾರ ಕುದುರಿಸಲು ಲಂಚ: 82ನೇ ಸ್ಥಾನದಲ್ಲಿ ಭಾರತ

ಕಳೆದ ವರ್ಷ 77ನೇ ಸ್ಥಾನದಲ್ಲಿದ್ದ ಭಾರತ

ಇಎನ್ಎಲ್ ವರ್ಲ್ಡ್ ಡೆಸ್ಕ್

ವ್ಯವಹಾರ ಕುದುರಿಸಲು ಲಂಚ ಪಡೆಯುವ ದೇಶಗಳ ಜಾಗತಿಕ ಪಟ್ಟಿಯಲ್ಲಿ ಭಾರತವು ಈ ವರ್ಷ 82ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಕಳೆದ ವರ್ಷ 77ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ ಮತ್ತೂ ಐದು ಸ್ಥಾನಗಳ ಕುಸಿತ ಕಂಡಿದೆ.

ಲಂಚ ನಿಗ್ರಹ ಗುಣಮಟ್ಟ ನಿಗದಿಪಡಿಸುವ ಸಂಸ್ಥೆ ‘ಟ್ರೇಸ್‌’, 194 ದೇಶಗಳು, ಸ್ವಾಯತ್ತ, ಅರೆ ಸ್ವಾಯತ್ತ ಪ್ರದೇಶಗಳಲ್ಲಿ ವ್ಯವಹಾರ ಕುದುರಿಸಲು ಕೊಡಬೇಕಿರುವ ಲಂಚದ ಕುರಿತು ವಿವಿಧ ಮಾನದಂಡಗಳ ಮೂಲಕ ಅಳೆದು ಶ್ರೇಯಾಂಕ ನಿಗದಿಪಡಿಸುತ್ತದೆ.

ಪ್ರಸಕ್ತ ವರ್ಷದ ದತ್ತಾಂಶದ ಪ್ರಕಾರ ಉತ್ತರ ಕೊರಿಯಾ, ತುರ್ಕಮೆನಿಸ್ತಾನ್‌, ವೆನಿಜುವೆಲಾ, ಎರಿಟ್ರಿಯಾ ದೇಶಗಳಲ್ಲಿ ಅತಿ ಹೆಚ್ಚು ವ್ಯವಹಾರ ಕುದುರಿಸುವ ಲಂಚ ತಾಂಡವಾಡುತ್ತಿದ್ದರೆ, ಡೆನ್ಮಾರ್ಕ್‌, ನಾರ್ವೆ, ಫಿನ್ಲೆಂಡ್‌, ಸ್ವೀಡನ್‌, ನ್ಯೂಜಿಲೆಂಡ್‌ಗಳಲ್ಲಿ ಇದು ಕಡಿಮೆಯಿದೆ.

2020ರಲ್ಲಿ ಭಾರತವು 45 ಅಂಕ ಗಳಿಸಿದ್ದರೆ, ಈ ವರ್ಷ 44 ಅಂಕಕ್ಕೆ ಕುಸಿದಿದೆ.

ಭಾರತವು ತನ್ನ ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಚೀನಾ, ನೇಪಾಳ ಮತ್ತು ಬಾಂಗ್ಲಾದೇಶಕ್ಕಿಂತ ಉತ್ತಮ ಸ್ಥಿತಿಯಲ್ಲಿದೆ. ಭೂತಾನ್ 62ನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಅಂಕಿಅಂಶಗಳು ತೋರಿಸಿವೆ.

Related posts

ಪ್ರಧಾನಿ ನರೇಂದ್ರ ಮೋದಿಗೆ ಈ ದೇಶದ ಅತ್ಯುನ್ನತ ನಾಗರಿಕ ಗೌರವ

eNEWS LAND Team

100 ಕೋಟಿ ಲಸಿಕೆ ಸಂಭ್ರಮದಲ್ಲಿ ಭಾರತ !!

eNEWS LAND Team

FIRST LADY OFFICER TO HEAD THE TRAINING BATTALION “THE MIGHTY CHETAK” OF ASC CENTRE(NORTH)

eNEWS LAND Team