37 C
Hubli
ಏಪ್ರಿಲ್ 25, 2024
eNews Land
ರಾಜ್ಯ

ಬೆಂಗಳೂರಿನ ಸಮಗ್ರ ರಸ್ತೆಗಳ ದುರಸ್ತಿಯನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಲಾಗುವುದು ಸಿಎಂ

ಇಎನ್ಎಲ್ ಬೆಂಗಳೂರು

ಬೆಂಗಳೂರಿನ ಸಮಗ್ರ ರಸ್ತೆಗಳ ದುರಸ್ತಿಯನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಲಾಗುವುದು ಹಾಗೂ ಖುದ್ದಾಗಿ ತಾವೇ ಈ ಕಾರ್ಯವನ್ನು ಮೇಲ್ವಿಚಾರಣೆ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಅವರು ಇಂದು ಬೆಂಗಳೂರು ಟೆಕ್ ಸಮ್ಮಿಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಅನಿರೀಕ್ಷಿತ ಮಳೆ ನಿರಂತರವಾಗಿ ಬೀಳುತ್ತಿದೆ. ಇನ್ನೂ ನಾಲ್ಕು ಐದು ದಿನಗಳ ಕಾಲ ಮಳೆಯಾಗಲಿದೆ ಎಂಬ ಸೂಚನೆಗಳಿವೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಒಟ್ಟು ಪರಿಣಾಮ ಬೆಂಗಳೂರು ನಗರ ಹಾಗೂ ಕೆಲವು ಜಿಲ್ಲೆಗಳಲ್ಲಿ ಬಹಳಷ್ಟು ಆಗಿದೆ. ಈಗಾಗಲೇ ಕೆಲವು ಸಭೆ ನಡೆಸಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ ಎಂದರು.

ಮಳೆ ನಿಂತ ತಕ್ಷಣವೇ ತಗ್ಗು ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳಿಗೆ ತಂಡಗಳ ನಿಯೋಜನೆ ಹಾಗೂ ತಂಡದಲ್ಲಿ ಹೆಚ್ಚಿನ ಜನರನ್ನು ಸೇರ್ಪಡೆಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಇದಲ್ಲದೆ ಎನ್.ಡಿ.ಆರ್.ಎಫ್ ತಂಡಗಳನ್ನು ಹಾಗೂ ರಾಜ್ಯದ ಎಸ್.ಡಿ.ಆರ್.ಎಫ್ ನ ನಾಲ್ಕು ವಿಶೇಷ ತಂಡಗಳನ್ನು ಬೆಂಗಳೂರಿಗೆ ಸೀಮಿತವಾಗಿ ರಚನೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.

ಮಳೆ ಬಂದಾಗ ನಿರ್ವಹಣೆ ಬಗ್ಗೆ ಇದ್ದ ಗೊಂದಲಗಳನ್ನು ನಿವಾರಿಸಲಾಗಿದ್ದು, ಮಳೆ ನಿಂತ ಕೂಡಲೇ ರಸ್ತೆ ದುರಸ್ತಿಯಾಗಬೇಕು. ನಿರ್ವಹಣೆ ಹೊತ್ತ ಸಂಸ್ಥೆ ಮಾಡದಿದ್ದರೆ, ಅವರ ಮೊತ್ತವನ್ನು ತಡೆಹಿಡಿದು, ಪಾಲಿಕೆಯೇ ಈ ಕಾರ್ಯವನ್ನು ಕೈಗೊಂಡು, ಜನರಿಗೆ ಅನಾನುಕೂಲವಾಗದಂತೆ ತಿಳಿಸಿದೆ ಎಂದು ನುಡಿದರು.

110 ಗ್ರಾಮಗಳ ಯು.ಜಿ.ಡಿ ಲೈನ್ ಗಳ ಸಮಸ್ಯೆಯನ್ನು ನಿವಾರಿಸಲು 280 ಕೋಟಿ ಮೊತ್ತದ ಟೆಂಡರ್ ಕಾರ್ಯಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

Related posts

ಪುನೀತ್ ಪುತ್ಥಳಿ ಅನಾವರಣ ಮಾಡಿದ ಸಿಎಂ ಬೊಮ್ಮಾಯಿ

eNewsLand Team

ಪೆಟ್ರೋಲ್, ‌ಡೀಸೆಲ್ ಬೆಲೆ ಇಳಿಕೆ, ಇಂದು ಸಂಜೆ ಅಧಿಸೂಚನೆ: ಸಿಎಂ

eNEWS LAND Team

ಖಾಸಗಿ, ಸರ್ಕಾರಿ,ಅರೆ ಸರ್ಕಾರಿ ಉದ್ಯೋಗ ಕನ್ನಡಿಗರಿಗೇ : ಸಿಎಂ ಬೊಮ್ಮಾಯಿ

eNEWS LAND Team