29.4 C
Hubli
ಏಪ್ರಿಲ್ 29, 2024
eNews Land
ಕೃಷಿ

ಬೆಳೆ ಪರಿಹಾರ ಶೀಘ್ರ ಕ್ರಮ : ಸಿಎಂ ಬೊಮ್ಮಾಯಿ

ಇಎನ್ಎಲ್  ಬೆಂಗಳೂರು 

ಬೆಳೆ ಹಾನಿ ಸಮೀಕ್ಷೆ ನಡೆಸಲಾಗುತ್ತಿದ್ದು, ಬೆಳೆ ಪರಿಹಾರ ನೀಡಲು ಶೀಘ್ರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬೆಂಗಳೂರು ಟೆಕ್ ಸಮ್ಮಿಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಬೆಳೆ ಹಾನಿಯನ್ನು ಸಮೀಕ್ಷೆ ಮಾಡಲಾಗುತ್ತಿದ್ದು, ಬೆಳೆ ಹಾನಿಯಿಂದ ತರಕಾರಿ ಮುಂತಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಬಗ್ಗೆ ಕಣ್ಣಿರಿಸಲಾಗಿದ್ದು, ಭತ್ತದ ಹಾಗೂ ಇತರೆ ಧಾನ್ಯಗಳ ಎಂ.ಎಸ್.ಪಿ ಖರೀದಿ ಕುರಿತು ಮಹತ್ವದ ಸಭೆಯನ್ನು ನಡೆಸಲಾಗುತ್ತಿದೆ. ಈ ಬಗ್ಗೆ ನಿಗಾ ಇಡಲಾಗಿದೆ ಎಂದರು.

ಶೀಘ್ರಗಾಗಿ ಹಾಳಾಗುವ ವಸ್ತುಗಳ ಬಗ್ಗೆಯೂ ಸಂಪೂರ್ಣ ವರದಿ ಸಲ್ಲಿಸುವಂತೆ ತೋಟಗಾರಿಕೆ ಮತ್ತು ಕೃಷಿ ಇಲಾಖೆಗೆ ಸೂಚಿಸಿದೆ ಎಂದರು.

ಬೆಳೆ ಪರಿಹಾರದ ಬಗ್ಗೆ ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯ ಅವರು ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರು ಪತ್ರ ಬರೆಯುವ ಮೊದಲೇ ಬೆಳೆ ಸಮೀಕ್ಷೆ ಮಾಡಿ ಕೂಡಲೇ ಪರಿಹಾರ ನೀಡಲು ಎಲ್ಲ ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

Related posts

ಮಲಪ್ರಭಾ ಮಹಾದಾಯಿ ರೈತ ಹೋರಾಟ ಒಕ್ಕೂಟ ಬಂದ್‍ಗೆ ಬೆಂಬಲ.

eNEWS LAND Team

ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣಾ ಅಭಿಯಾನ

eNEWS LAND Team

ಮನೆ ಮನೆಗೆ ಕೃಷಿ ಮಾಹಿತಿ ರಥ: ಶಾಸಕ ನಿಂಬಣ್ಣವರ

eNEWS LAND Team