28 C
Hubli
ಸೆಪ್ಟೆಂಬರ್ 21, 2023
eNews Land
ರಾಜ್ಯ

ಮಿನಿ ವಿಧಾನಸೌಧಕ್ಕೆ ಮರುನಾಮಕರಣ: ಇನ್ಮುಂದೆ ‘ತಾಲೂಕು ಆಡಳಿತ ಸೌಧ’

ಇಎನ್ಎಲ್ ಬೆಂಗಳೂರು:

ತಾಲೂಕು ಆಡಳಿತ ಕಚೇರಿಗಳನ್ನು ರಾಜ್ಯದ ಭಾಷಾನೀತಿಗೆ ಒಳಪಡುವಂತೆ ಹಾಗೂ ರಾಜ್ಯದ ಅಧಿಕೃತ ಭಾಷೆ ಕನ್ನಡವಾಗಿರುವುದರಿಂದ , ನಾಡು – ನುಡಿ ಸಂಸ್ಕೃತಿಗೆ ಪೂರಕವಾಗಿ ‘ಮಿನಿವಿಧಾನಸೌಧ’ ಹೆಸರನ್ನು ಬದಲಾಯಿಸಿ ‘ತಾಲೂಕು ಆಡಳಿತ ಸೌಧ’ ಎಂದು ಮರುನಾಮಕರಣ ಮಾಡಲಾಗಿದೆ.

ವಿಧಾನಸೌಧದ ಸ್ಫೂರ್ತಿಯಿಂದ ತಾಲೂಕು ಆಡಳಿತ ಕೇಂದ್ರಗಳಿಗೆ ಮಿನಿ ವಿಧಾನಸೌಧ ಎಂದು ಹಿಂದೆ ಹೆಸರಿಡಲಾಗಿತ್ತು. ಆದರೆ ಇಂಗ್ಲೀಷಿನಲ್ಲಿ ‘ಮಿನಿ’ ಎಂದರೆ ಚಿಕ್ಕದು ಎಂದರ್ಥ. ತಾಲೂಕು ಆಡಳಿತ ವಿಸ್ತಾರವಾಗಿರುವುದರಿಂದ ‘ಮಿನಿ’ ಎಂಬ ಪದ ಅದರಲ್ಲಿಯೂ ಇಂಗ್ಲೀಷಿನಲ್ಲಿ ಈ ಪದ ಇರುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಕಂದಾಯ ಸಚಿವ ಆರ್. ಅಶೋಕ್ ವ್ಯಕ್ತಪಡಿಸಿ ಮಿನಿ ವಿಧಾನಸೌಧ ಹೆಸರು ಬದಲಾಯಿಸುವುದಾಗಿ ಹೇಳಿದ್ದರು.

Related posts

ನೈಋತ್ಯ ರೈಲ್ವೆ ಈಗ ಹಸಿರು ರೈಲ್ವೆ ‌ಆಗ್ತಿದೆ, ಹೇಗೆ ಗೊತ್ತಾ?

eNewsLand Team

ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಅಸಿಂಧುಗೊಳಿಸಲು ಒತ್ತಡ ಆರೋಪ, ಡಿಕೆಶಿಗೆ ಮಾತನಾಡಲು ವಿಷಯವಿಲ್ಲದೆ ಅನಗತ್ಯ ಆರೋಪ: ಸಿಎಂ ಬೊಮ್ಮಾಯಿ

eNEWS LAND Team

ಬಿಎಸ್‌ವೈ ಸರ್ವಶ್ರೇಷ್ಠ ನಾಯಕ

eNEWS LAND Team