ನವೆಂಬರ್ 28, 2022
eNews Land
ತಂತ್ರಜ್ಞಾನ

ಕರ್ನಾಟಕದಲ್ಲಿ ಅತಿ ಶೀಘ್ರದಲ್ಲಿ ಆರ್.ಅಂಡ್ ಡಿ ನೀತಿ ರೂಪಿಸಲಾಗುವುದು: ಸಿಎಂ

Listen to this article

ಇಎನ್ಎಲ್ ಬೆಂಗಳೂರು

ಕರ್ನಾಟಕ ರಾಜ್ಯದಲ್ಲಿ ಅತಿ ಶೀಘ್ರ ಆರ್ ಆ್ಯಂಡ್ ಡಿ (ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್) ನೀತಿಯನ್ನು ರೂಪಿಸಲಿದೆ. ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ, ಖಾಸಗಿ ಕಂಪನಿಗಳಲ್ಲಿ ಗ್ಯಾರೇಜ್ ಕೇಂದ್ರಿತ ಆರ್.ಅಂಡ್ ಡಿ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬೆಂಗಳೂರು ಟೆಕ್ ಸಮ್ಮಿಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಬೆಂಗಳೂರು ಟೆಕ್ ಸಮ್ಮಿಟ್ ಬಹಳ ದೊಡ್ಡ ಸಮಾವೇಶವಾಗಿದೆ. ವಿಶ್ವದಾದ್ಯಂತ 7000 ಕ್ಕೂ ಹೆಚ್ಚು ಗಣ್ಯರು ವರ್ಚುಯಲ್ ಆಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಹಲವಾರು ಕಂಪನಿಗಳು ಆರೋಗ್ಯ ಕ್ಷೇತ್ರ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, , ರಿನ್ಯೂವೆಬಲ್ ಎನರ್ಜಿ, ಏರೋಸ್ಪೇಸ್ ಸೇರಿದಂತೆ ಹೈಟೆಕ್ ತಂತ್ರಜ್ಞಾನದ ಕ್ಷೇತ್ರದಲ್ಲಿ ಆಸಕ್ತಿ ವಹಿಸಿದೆ ಎಂದು ತಿಳಿಸಿದರು.

ನಮ್ಮ ರಾಜ್ಯದಲ್ಲಿ ಉದ್ದಿಮೆಗಳ ಸ್ಥಾಪನೆಗೆ ಮೂಲಸೌಕರ್ಯ ಹಾಗೂ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲಾಗಿದೆ. ಈಗಾಗಲೇ ನಾವೀನ್ಯತೆಯಲ್ಲಿ ತೊಡಗಿರುವ ಕಂಪನಿಗಳಿಗೆ ಪ್ರೋತ್ಸಾಹ ಮತ್ತು ಹೊಸದಾಗಿ ತೊಡಗಿಕೊಳ್ಳುವವರನ್ನು ಒಳಗೊಳ್ಳಲಾಗುವುದು ಎಂದರು ತಿಳಿಸಿದರು.

ಉನ್ನತ ಶಿಕ್ಷಣದಲ್ಲಿ ಕನ್ನಡ ಅಳವಡಿಕೆಗೆ ಕಾನೂನು ಪರಿಶೀಲನೆ
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡವನ್ನು ಉನ್ನತ ಶಿಕ್ಷಣದಲ್ಲಿ ಅಳವಡಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಇದು ಬಹಳ ವರ್ಷಗಳಿಂದ ಇರುವ ಪ್ರಶ್ನೆ. ಕಾನೂನಿನ ಪರಿಶೀಲನೆಗೆ ಸರ್ಕಾರ ಅಗತ್ಯ ಕ್ರಮ ವಹಿಸಿದೆ ಎಂದರು.

Related posts

ಲ್ಯಾಪ್‍ಟಾಪ್‍ ದೋಷ: ಸಿಕ್ತು ₹ 52 ಸಾವಿರ ಪರಿಹಾರ!!

eNewsLand Team

ಪದ್ಮಶ್ರೀ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆ: ಕೃಷಿ ವಿಜ್ಞಾನಿ ಎ.ಆಯ್.ನಡಕಟ್ಟಿನ

eNEWS LAND Team

ಸ್ಪೇಸ್ ಎಕ್ಸ್ ಮೂಲಕ ಬಾಹ್ಯಾಕಾಶಕ್ಕೆ ಜಗಿದ ನಾಲ್ವರು ಗಗನಯಾತ್ರಿಗಳು

eNewsLand Team