28.2 C
Hubli
ಮೇ 3, 2024
eNews Land
ಸಂಸ್ಕೃತಿ ಸುದ್ದಿ

ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ಬಸ್ ವ್ಯವಸ್ಥೆ

ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ಬಸ್ ವ್ಯವಸ್ಥೆ

ಶೀಗಿ ಹುಣ್ಣಿಮೆ ಪ್ರಯುಕ್ತ ಅ. 20 ರಂದು ಬುಧವಾರ ಹುಬ್ಬಳ್ಳಿಯಿಂದ ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಹಾಗೂ
ಸರಣಿ ರಜೆ ಮುಗಿಸಿ ಹಿಂದಿರುಗುವವರಿಗಾಗಿ ಹುಬ್ಬಳ್ಳಿಯಿಂದ ವಿವಿಧ ಸ್ಥಳಗಳಿಗೆ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಾಯವ್ಯ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಕೋವಿಡ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ರೇಣುಕಾ ಯಲ್ಲಮ್ಮ ದೇವಸ್ಥಾನ ಸೇರಿದಂತೆ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.ಇದೀಗ ನಿರ್ಬಂಧಗಳನ್ನು ಸಡಿಲಿಸಲಾಗಿದ್ದು ಸೌದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ದರ್ಶನ ಮತ್ತು ಸೇವೆಗಳಿಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಶೀಗಿ ಹುಣ್ಣಿಮೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ಬೇಡಿಕೆ ಮೇರೆಗೆ ಅ.20 ರಂದು ಬೆಳಿಗ್ಗೆಯಿಂದ ಹುಬ್ಬಳ್ಳಿಯಿಂದ ಯಲ್ಲಮ್ಮಗುಡ್ಡಕ್ಕೆ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಭಕ್ತಾಧಿಗಳ ಅನುಕೂಲಕ್ಕಾಗಿ ನಗರದ ಹಳೆ ಬಸ್ ನಿಲ್ದಾಣ ಮತ್ತು ಹೊಸೂರು ಬಸ್ ನಿಲ್ದಾಣ ಎರಡೂ ಸ್ಥಳಗಳಿಂದ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.

ರಜೆ ಮುಗಿಸಿ ಹಿಂದಿರುಗುವವರಿಗೆ ಹೆಚ್ಚುವರಿ ಬಸ್
ಆಯುಧ ಪೂಜಾ, ವಿಜಯದಶಮಿ,ರವಿವಾರ,ಈದ ಮಿಲಾದ್, ವಾಲ್ಮಿಕಿ ಜಯಂತಿ ಮತ್ತಿತರ
ಸರಣಿ ರಜೆ ಪ್ರಯುಕ್ತ ದೂರದೂರುಗಳಲ್ಲಿ ನೆಲೆಸಿದ್ದ ಸಾವಿರಾರು ಜನರು ತವರೂರಿಗೆ ಆಗಮಿಸಿದ್ದರು. ರಜೆ ಮುಗಿಸಿ ನಗರದಿಂದ ತೆರಳುವ ಅವರ ಅನಕೂಲಕ್ಕಾಗಿ
ಅ. 20 ರಂದು ಬುಧವಾರ ಹುಬ್ಬಳ್ಳಿಯಿಂದ ಬೆಂಗಳೂರು ಮತ್ತಿತರ ವಿವಿಧ ಸ್ಥಳಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ನಿತ್ಯದ ಬಸ್ ಗಳೊಂದಿಗೆ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಹೆಚ್ಚುವರಿಯಾಗಿ ವೇಗದೂತ, ರಾಜಹಂಸ, ಸ್ಲೀಪರ್ ಹಾಗೂ ವೋಲ್ವೋ ಬಸ್ ಗಳನ್ನು ರಸ್ತೆಗಿಳಿಸಲಾಗುತ್ತದೆ.

ಗದಗ,ಕೊಪ್ಪಳ,ರಾಯಚೂರು,ಕಲಬುರಗಿ,ಸೊಲ್ಲಾಪುರ, ನವಲಗುಂದ, ನರಗುಂದ ಇಲಕಲ್, ಬದಾಮಿ,ಗುಳೇದಗುಡ್ಡ, ಬಾಗಲಕೋಟೆ, ವಿಜಯಪುರ ಕಡೆಗೆ ಹೋಗುವ ವೇಗದೂತ ಬಸ್ಸುಗಳು ಹಾಗೂ ಎಲ್ಲಾ ಗ್ರಾಮೀಣ ಬಸ್ ಗಳು ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ.

ಬೆಳಗಾವಿ,ನಿಪ್ಪಾಣಿ,ಕೊಲ್ಲಾಪುರ, ಪುಣೆ, ಪಿಂಪ್ರಿ, ಶಿರಡಿ, ಮುಂಬೈ, ಗೋಕಾಕ, ರಾಮದುರ್ಗ, ಚಿಕ್ಕೋಡಿ, ಸಂಕೇಶ್ವರ, ಪಣಜಿ,ವಾಸ್ಕೋ,ಮಡಗಾಂವ, ಶಿರಸಿ, ಕುಮಟಾ, ಮಂಗಳೂರು, ಧರ್ಮಸ್ಥಳ,ಅಂಕೋಲ, ಯಲ್ಲಾಪುರ, ಕಾರವಾರ, ದಾವಣಗೆರೆ, ಶಿವಮೊಗ್ಗ, ಮೈಸೂರು, ಬೆಂಗಳೂರು, ತಿರುಪತಿ, ಹೈದರಾಬಾದ್ ಮತ್ತಿತರ ಕಡೆಗೆ ಹೋಗುವ ವೇಗದೂತ ಸಾರಿಗೆಗಳು ಹಾಗೂ ಎಲ್ಲಾ ಪ್ರತಿಷ್ಟಿತ ಸಾರಿಗೆ ಬಸ್ಸುಗಳು ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಾಕರಸಾ ಸಂಸ್ಥೆ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.

Related posts

ನೆರೆ ಪರಿಹಾರ ಕಾರ್ಯ: ಧಾರವಾಡಕ್ಕೆ 7.5 ಕೋಟಿ ಬಿಡುಗಡೆ; ಮುನೇನಕೊಪ್ಪ

eNewsLand Team

“ಒಂದು ರೂಪಾಯಿ” ಶುಲ್ಕದಲ್ಲಿ ಕೆಎಎಸ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ

eNEWS LAND Team

ಶರಣ ಹೂಗಾರ ಮಾದಯ್ಯ ಜಯಂತಿ ಹಾಗೂ ಹೂಗಾರ ಸಮಾಜದ ಪ್ರಥಮ ಸಮಾವೇಶ

eNEWS LAND Team