34 C
Hubli
ಫೆಬ್ರವರಿ 28, 2024
eNews Land
ಸುದ್ದಿ

ಶರಣ ಹೂಗಾರ ಮಾದಯ್ಯ ಜಯಂತಿ ಹಾಗೂ ಹೂಗಾರ ಸಮಾಜದ ಪ್ರಥಮ ಸಮಾವೇಶ

ಸೆ.13.ಮತ್ತು 14ರಂದು ಚನ್ನಾಪೂರ, ರಾಮಾಪೂರ, ಚವರಗುಡ್ಡ ಗ್ರಾಮ ಸಭೆ

ಇಎನ್ಎಲ್ ಅಣ್ಣಿಗೇರಿ: ಶರಣ ಹೂಗಾರ ಮಾದಯ್ಯನವರ ಸಮಗ್ರ ಜೀವನ ಚರಿತ್ರೆ, ಪರಂಪರೆ, ಸಾಂಸ್ಕೃತಿಕ ಹಿನ್ನಲೆ ಕುರಿತು ಅಣ್ಣಿಗೇರಿ ಹೂಗಾರ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಅರುಣಕುಮಾರ ಹೂಗಾರ ತಿಳಿಸಿದರು.
ಪಟ್ಟಣದ ಆದಿಕವಿ ಪಂಪಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಅಣ್ಣಿಗೇರಿ ಹೂಗಾರ ಸಮಾಜ ಸೇವಾ ಘಟಕದ ಪ್ರಥಮ ಸಮಾವೇಶ ಹಾಗೂ ಹೂಗಾರ ಮಾದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಹೂಗಾರ ಸಮಾಜ ಅಭಿವೃದ್ಧಿ ಪ್ರಾಧಿಕಾರ ರಚಿಸಿ ₹50 ಕೋಟಿಗಳ ಅನುದಾನ ಕಲ್ಪಿಸಬೇಕು. ಸದ್ಯ ಹೂಗಾರ ಸಮಾಜ 2 ಮೀಸಲಾತಿ ವರ್ಗದಲ್ಲಿದ್ದು ಸರ್ಕಾರಿ ಸೌಲಭ್ಯಗಳು ಒದಗಿಸುವ ಹಿನ್ನಲೆಯಲ್ಲಿ ಸಮಾಜದ ಸಶಕ್ತ ಬದುಕಿಗೆ ಎಸ್ಸಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು.

ಸೆ.10 ಮತ್ತು 11ರಂದು ರಾಜ್ಯಮಟ್ಟದ 9ನೇ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ: ಕುಲಪತಿ ಡಾ.ಸಿ.ಬಸವರಾಜು

ದಾಸೋಹಮಠ ಶ್ರೀಗಳು ಶರಣ ಮಾದಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಟನಮನ ಸಲ್ಲಿಸಿದರು. ಜ್ಯೋತಿ ಬೆಳಗಿಸುವ ಮೂಲಕ ಜಿಲ್ಲಾ ಹೂಗಾರ ಸಮಾಜ ಸೇವಾ ಸಂಘದ ಅಧ್ಯಕ್ಷ ಆರ್.ಆರ್.ಸಂಗಳಕರ ಉದ್ಘಾಟಿಸಿ, ಸಮಾಜದ ಬೆಳವಣಿಗೆ ಕುರಿತು ಮಾದಯ್ಯ ಜಯಂತಿ ಶುಭಾಶಯ ಕೋರಿದರು. ಶ್ರೀಗಳು ಹೂಗಾರ ಸಮಾಜ ಶ್ರೇಷ್ಠ ಜನಾಂಗ, ಹೂವಿನಷ್ಟ ಮೃದುವಾದ ಮನಸ್ಸು ಹೊಂದಿದವರು. ಮಾದಯ್ಯನವರ ಬದುಕು ಕಾಯಕನಿಷ್ಠೆ, ಶಿವಭಕ್ತಿ, ಆಚರಣೆ ಸಮಾಜದವರಿಗೆ ಸನ್ಮಾರ್ಗದ ಮುಕ್ತಿಪಥಕ್ಕೆ ದಾರಿದೀಪವಾಗಿದೆ. ಮಾದಯ್ಯ ಜಯಂತಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ಹೂಗಾರ ಸಮಾಜದವರು ಆಚರಿಸುತ್ತಿರೋದು ಶ್ಲಾಘನೀಯವೆಂದರು.

ರಾಜ್ಯದಲ್ಲಿ ಶೀಘ್ರದಲ್ಲೇ ಹೆಸರು ಖರೀದಿ ಕೇಂದ್ರ ಆರಂಭ: ಕೇಂದ್ರ ಸಚಿವ ಜೋಶಿ

ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಷಣ್ಮುಖ ಗುರಿಕಾರ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ, ಪುರಸಭೆ ಅಧ್ಯಕ್ಷೆ ಗಂಗಾ ಕರೆಟ್ಟನವರ, ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ, ಅಣ್ಣಿಗೇರಿ ಕಸಾಪ ಘಟಕ ಅಧ್ಯಕ್ಷ ರವಿರಾಜ ವೆರ್ಣೇಕರ, ಅಣ್ಣಿಗೇರಿ ಹೂಗಾರ ಸಮಾಜ ಸೇವಾ ಸಂಘದ ಅಧ್ಯಕ್ಷ ಸೋಮು ಹೂಗಾರ ಮಾತನಾಡಿ, ಅಣ್ಣಿಗೇರಿ ತಾಲೂಕಿನ ಹೂಗಾರ ಸಮಾಜದ ಸಮಾವೇಶ ಹಾಗೂ ಶರಣ ಮಾದಯ್ಯ ಜಯಂತಿಗೆ ಅಭೂತಪೂರ್ವ ಯಶಸ್ವಿ ಮಾಡಿದ ಸಮಾಜದವರಿಗೆ ಧನ್ಯವಾದ ತಿಳಿಸಿ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹೂಗಾರ ಭಾಂದವರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಲಿಂಗರಾಜ ಹೂಗಾರ ಶರಣ ಮಾದಯ್ಯನವರ ವೇಷ ಎಲ್ಲರ ಗಮನ ಸೆಳೆದರು. ಅಣ್ಣಿಗೇರಿ ಪಟ್ಟಣ ಹಾಗೂ ತಾಲೂಕಿನಾದ್ಯಾಂತ ಹೂಗಾರ ಸಮಾಜದವರು, ಸಂಘದ ಪದಾಧಿಕಾರಿಗಳು ಸದಸ್ಯರು, ಲಲಿತಾಸಾಲಿಮಠ, ಅನುಸೂಯಾ ರಬರವಿ, ವಿನಾಯಕ ಹೂಗಾರ, ರೇಣುಕಾ ಹೂಗಾರ ಇನ್ನುಳಿದಂತೆ ಉಪಸ್ಥಿತರಿದ್ದರು.

A separate authority for the management of Bengaluru traffic density: CM Bommai

 

Related posts

ಹೆಣ್ಮಕ್ಕಳ್ಳೇ ಸ್ಟ್ರಾಂಗು ಗುರು: ಬಿಇಓ ಉಮಾದೇವಿ ಬಸಾಪೂರ

eNEWS LAND Team

EXTENSION OF PERIODICITY OF SPECIAL TRAINS ಸಾಪ್ತಾಹಿಕ ವಿಶೇಷ ರೈಲುಗಳ ಸೇವೆ ವಿಸ್ತರಣೆ

eNEWS LAND Team

ಕನ್ನಡ ಶಾಲೆ ಉಳಿವಿಗೆ ಕಸಾಪ ಹೋರಾಟಕ್ಕೂ ಸಿದ್ಧ, ಮಾದರಿ ಶಾಲೆ ನೆಪವೊಡ್ಡಿ ಕನ್ನಡ ಶಾಲೆ ಮುಚ್ಚಬೇಡಿ: ನಾಡೋಜ ಡಾ.ಮಹೇಶ ಜೋಶಿ

eNEWS LAND Team