ಇಎನ್ಎಲ್ ಕಲಘಟಗಿ: ನೈಸರ್ಗಿಕ ಸಂಪನ್ಮೂಲಗಳಿoದ ಕೂಡಿದೆ, ಆದರೆ ಶೈಕ್ಷಣಿಕ ಕ್ಷೇತ್ರದಲ್ಲಿ ತುಂಬಾ ಹಿಂದುಳಿದಿದೆ, ಆದ್ದರಿಂದ ಆಧುನಿಕ ಜಗತ್ತಿಗೆ ಶಿಕ್ಷಣವೇ ಶಕ್ತಿ ಎಂದ ಮಾಜಿ ಶಾಸಕ ಸಂತೋಷ ಲಾಡ್.
ಅನೇಕ ವರ್ಷಗಳಿಂದ ತಾಲೂಕಿನಲ್ಲಿ ತಮ್ಮೆಲ್ಲರ ಸಹಕಾರದಿಂದ ಅನೇಕ ಅಭಿವೃದ್ಧಿಕಾರ್ಯಗಳಾದ ರೈತರಿಗೆ ಬೋರ್‌ವೆಲ್, ಹಸಿದವರಿಗೆ ಊಟ, ಉಚಿತ ಆರೋಗ್ಯ ಸೇವೆ, ಮುಂತಾದ ಯೋಜನೆಗಳನ್ನು ಸಂತೋಷಲಾಡ್ ಫೌಂಡೇಶನ್ ವತಿಯಿಂದ ಮಾಡುತ್ತಾ ಬಂದಿದ್ದೇನೆ. ಈಗ ಫೆ.2 ರಿಂದ ಕೆ.ಎ.ಎಸ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‌ಲೈನ್
ತರಬೇತಿ ನೀಡಲಾಗುತ್ತಿದ್ದು, ಇದಕ್ಕಾಗಿ ಅಭ್ಯರ್ಥಿಗಳಿಗೆ ಕೇವಲ “ಒಂದು ರೂಪಾಯಿ” ಶುಲ್ಕ ನಿಗದಿ ಪಡಿಸಲಾಗಿದೆ. ಇದೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದರ ಸದುಪಯೋಗವನ್ನು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು, ಹಾಗೂ ಅಭ್ಯರ್ಥಿಗಳು ಪಡೆದುಕೊಳ್ಳಬೇಕು. ನೊಂದಣಿ ತರಬೇತಿಯ ಸಮಯ ಹಾಗೂ ಮತ್ತಿತರ ಮಾಹಿತಿಯನ್ನು ಪಡೆಯಲು72044 32147, 7204434147, 9019103524 , 8618914461 ಈ ನಂಬರ್‌ಗಳಿಗೆ ಕರೆ ಮಾಡಬಹುದು ಎಂದು ಸಂತೋಷ ಲಾಡ್ ಅಭಿಮಾನಿಗಳ ಬಳಗದವರು ಕೋರಿದ್ದಾರೆ.
ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ವಿಶ್ವದರ್ಶನ ಕರಿಯರ ಅಕಾಡೆಮಿ, ಧಾರವಾಡ ಇವರ ಸಹಕಾರದೊಂದಿಗೆ ಕೆ.ಎ.ಎಸ್, ಪಿ.ಎಸ್.ಐ, ಎಫ್.ಡಿ.ಎ, ಎಸ್.ಡಿ.ಎ, ಪಿ.ಡಿ.ಓ, ಪೊಲೀಸ್, ಟಿ.ಇ.ಟಿ, ಸಿ.ಇ.ಟಿ ಗ್ರೂಪ್.ಸಿ ಎಸ್.ಎಸ್.ಇ., ಬ್ಯಾಕಿಂಗ್ ಹಾಗೂ ಇನ್ನಿತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್ ಲೈನ್ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.