34.1 C
Hubli
ಮೇ 9, 2024
eNews Land
ಕ್ರೀಡೆ ಸುದ್ದಿ

ಕರ್ನಾಟಕಕ್ಕೆ ಕಂಚು ತಂದ ಅಣ್ಣಿಗೇರಿಯ ಹುಡುಗ

ಇಎನ್‌ಎಲ್ ಅಣ್ಣಿಗೇರಿ: ಭಾರತೀಯ ಓಲಲಂಪಿಕ್ ಅಸೋಸಿಯೇಷನ್ ಹಾಗೂ ಗೋವಾ ಕ್ರೀಡಾ ಪ್ರಾಧಿಕಾರ ಗೋವಾದಲ್ಲಿ ಆಯೋಜಿಸಿದ್ದ 37ನೇ ರಾಷ್ಟ್ರಿಯ ಕ್ರೀಡಾಕೂಟದಲ್ಲಿ ಸ್ಕಾಯ್(ಸಮರಕಲೆ) ಕ್ರೀಡೆಯ ವೈಯಕ್ತಿಕ ವಿಭಾಗದಲ್ಲಿ ಧಾರವಾಡ ಜಿಲ್ಲೆ ಅಣ್ಣಿಗೇರಿಯ ಕ್ರೀಡಾಪಟು ಗಣೇಶ ವೀ.ಶಾನುಭೋಗರ ಕಂಚಿನ ಪದಕ ಪಡೆಯುವುದರ ಮೂಲಕ ಗೆಲುವಿನ ನಗೆ ಬೀರಿದ್ದಾರೆ.
೫೦ ಕೆಜಿ.ತೂಕದ ಒಳಗಿನ ಸ್ಪರ್ಧಿಗಳಿಗಾಗಿ ಇರುವ ಈ ಸ್ಪರ್ಧೆಯಲ್ಲಿ ರಾಜಸ್ಥಾನ ಸ್ಪರ್ಧಿಯನ್ನು 2 ಅಂಕದಿ0ದ ಸೋಲಿಸಿ ಗಣೇಶ ಗೆಲುವನ್ನು ತಮ್ಮದಾಗಿಸಿಕೊಂಡರು. ಮುಂದಿನ ಹಂತದಲ್ಲಿ ಆಂಧ್ರಪ್ರದೇಶದ ಸ್ಪರ್ಧಿಯ ವಿರುದ್ದ ಸಮಬಲ ಸ್ಪರ್ಧೆ ನೀಡಿದರು. ಆದರೆ ಅತಾಚುರ್ಯದಿಂದ ಆಂದ್ರಪ್ರದೇಶದ ಸ್ಪರ್ಧಿಗೆ ಒಂದು ಅಂಕ ಹೆಚ್ಚಿಗೆ ನೀಡಲಾಯಿತು ಇದರ ವಿರುದ್ಧ ಗಣೇಶ ಆಕ್ಷೇಪ ಎತ್ತಿದರು. ಆದರೆ ಈ ಆಕ್ಷೇಪ ನಿಗದಿತ ಸಮಯದಲ್ಲಿ ಸಲ್ಲಿಸಲಿಲ್ಲ ಎನ್ನುಬ ಕಾರಣದಿಂದ ಅವರ ಮನವಿಯನ್ನು ಸ್ಪರ್ಧೆಯ ಮುಖ್ಯಸ್ಥರು ಪುರಸ್ಕರಿಸಲಿಲ್ಲ.
ಕಾಶ್ಮೀರದಲ್ಲಿ ಹುಟ್ಟಿದ ಈ ಸ್ಕಾ÷್ವಯ್ ಸಮರಕಲೆ ಕುರಿತು ಭಾರತೀಯ ಸ್ಕಾ÷್ವಯ್ ಅಸೋಸಿಯೇಷನ್ ರಾಷ್ಟçಮಟ್ಟದಲ್ಲಿ ಜಮ್ಮುವಿನ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ, ಎಕ್ ಭಾರತ ಶ್ರೇಷ್ಠ ಭಾರತ ಯೋಜನೆ ಅಡಿ ಹರಿಯಾಣದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಗಣೇಶ ಕಂಚಿನ ಪದಕ ಪಡೆದಿದ್ದರು.
ಈಗ ಮತ್ತೆ ರಾಷ್ಟಿçÃಯ ಕ್ರೀಡಾಕೂಟದಲ್ಲಿ ಗಣೇಶ ಶಾನುಭೋಗರ ತಮ್ಮ ಗೆಲುವಿನ ಮೂಲಕ ಕರ್ನಾಟಕಕ್ಕೆ ಕಂಚಿನ ಪದಕ ತಂದ ಹಿನ್ನಲೆಯಲ್ಲಿ ಅವರ ತರಬೇತಿ ಪಡೆದ ಅಣ್ಣಿಗೇರಿಯ ಧಾರವಾಡ ಜಿಲ್ಲಾ ಸ್ಕಾ÷್ವಯ್ ಅಸೋಸಿಯೇಷನ್ ಹಾಗೂ ಗೋಲ್ಡನ್ ಕರಾಟೆ ಕ್ಲಬ್‌ನ ಗುರು ತರಬೇತುದಾರ ಗಣೇಶ ಇಳಕಲ್, ಕರ್ನಾಟಕ ಸರಕಾರ ಕ್ರೀಡಾ ಇಲಾಖೆ ಸ್ಕಾ÷್ವಯ್ ವಿಭಾಗದ ಕಾರ್ಯದರ್ಶಿ ಮಹಮ್ಮದ್ ಅಲಿ, ಸ್ಕಾ÷್ವಯ್ ಅಸೋಸಿಯೇಷನ್ ಪೇಡರೇಶನ್ ಗ್ರಾö್ಯಂಡ್ ಮಾಸ್ಟರ್ ಮೀರ ನಜೀರ್, ಸ್ಕಾ÷್ವಯ್ ಹಾಗೂ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ಲಕ್ಷö್ಮಣ ನಾಯಕ ಮತ್ತು ಸಿ.ಜಿ.ನಾವಳ್ಳಿ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಗಣೇಶ ಶಾನುಭೋಗರ ಹಿರಿಯ ಪತ್ರಕರ್ತ ವೀರೇಶ ಶಾನುಭೋಗರ ಅವರ ಪುತ್ರರಾಗಿದ್ದಾರೆ.
ರಾಷ್ಟಿçÃಯ ಕ್ರೀಡಾಕೂಟದ ಸ್ಕಾ÷್ವಯ್ ವಿಭಾಗದಲ್ಲಿ ಪದಕ ವಿಜೇತ ಕರ್ನಾಟಕದ ಕ್ರೀಡಾಪಟುಗಳನ್ನು ರಾಜ್ಯ ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ಬಿ.ನಾಗೇಂದ್ರ ಅವರು ತಮ್ಮ ಅಧಿಕೃತ (ಎಕ್ಸ್) ಖಾತೆಯ ಮೂಲಕ ರಾಜ್ಯ ಸರಕಾರದ ಪರವಾಗಿ ಅಭಿನಂದಿಸಿದ್ದಾರೆ.

Related posts

ಅತಿವೃಷ್ಟಿಯಿಂದ ಬೆಳೆ ನಿರ್ವಹಣೆ ಹೇಗೆ: ಎನ್.ಎಫ್.ಕಟ್ಟೇಗೌಡರ

eNEWS LAND Team

ಹೊಸ ವರ್ಷಾಚರಣೆಯ ಗುಂಗಿನಲ್ಲಿ ಇದ್ದವರಿಗೆ ರಾಜ್ಯ ಸರ್ಕಾರ ಶಾಕ್! ನೈಟ್ ಕರ್ಫ್ಯೂ ಮತ್ತೆ ಜಾರಿ

eNewsLand Team

ಫೆ.1 ರಿಂದ 15 ರ ವರೆಗೆ ಹೊಸಯಲ್ಲಾಪೂರ ಕೋಳಿಕೆರೆ ಹೂಳೆತ್ತುವ ಕಾರ್ಯ

eNewsLand Team