24.3 C
Hubli
ಮೇ 26, 2024
eNews Land
ಕೃಷಿ ಸುದ್ದಿ

ಅತಿವೃಷ್ಟಿಯಿಂದ ಬೆಳೆ ನಿರ್ವಹಣೆ ಹೇಗೆ: ಎನ್.ಎಫ್.ಕಟ್ಟೇಗೌಡರ

ಇಎನ್ಎಲ್ ಕಲಘಟಗಿ: ಅತಿವೃಷ್ಟಿಯಿಂದ ಬೆಳೆ ನಿರ್ವಹಣೆಗಾಗಿ ಈ ಕೆಳಗಿನ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲು ಕಲಘಟಗಿ ತಾಲೂಕಿನ ಕೃಷಿ ಸಹಾಯಕ ನಿರ್ದೇಶಕ ಎನ್.ಎಫ್.ಕಟ್ಟೇಗೌಡರ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ಇದನ್ನು ಓದಿ17ರಂದು ರೈಲ್ವೇ ವೇಳಾ ಪಟ್ಟಿ ಬದಲಾವಣೆ: ಪ್ರಯಾಣಿಕರು ಗಮನಿಸಿ

ಕಳೆದ ಹತ್ತು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಜಮೀನುಗಳಲ್ಲಿ ಜವಳು(ಸವಳು) ಪ್ರಮಾಣವು ಹೆಚ್ಚಾಗಿದೆ, ಇದಕ್ಕಾಗಿ ತಾಲೂಕಿನಲ್ಲಿ ಬಿತ್ತನೆಯಾದಂತಹ ಸೋಯಾ, ಅವರೆ, ಗೋವಿನಜೋಳ, ತೊಗರಿ ಮತ್ತು ಹತ್ತಿ ಬೆಳೆಗಳಲ್ಲಿ ಮಣ್ಣು ನೀರು ಹೀರಿಕೊಳ್ಳುವ ಗರಿಷ್ಠ ಪ್ರಮಾಣ ಮುಗಿದಿದೆ, ಆದ್ದರಿಂದ ರೈತರು ಬಸಿಗಾಲುವೆಗಳನ್ನು ತೋಡಿ ನೀರು ಹೊರಹೋಗುವಂತೆ ಮಾಡಿರಿ. ಮಳೆ ನಿಂತ ನಂತರ ಆಯಾ ಬೆಳೆಯು ಬೆಳವಣಿಗೆ ಅವಧಿ ಆಧರಿಸಿ ಎಡೆಕುಂಟೆ ಹೊಡೆಯುವುದು, ಕಳೆ ನಿರ್ವಹಣೆ ಮಾಡಬೇಕು, ಮಳೆ ಕಡಿಮೆಯಾಗಿ ಬಿಸಿಲು ಬಂದ ನಂತರ ತೇವಾಂಶವನ್ನು ಆಧರಿಸಿ ಸಂಯುಕ್ತ ರಸಗೊಬ್ಬರಗಳಾದ 19:19:19, 13:0:45, 17:44:0, 0:0:50, 0:52:34, ಮತ್ತು 18:18:18:61 ಇವುಗಳನ್ನು ಪ್ರತಿ ಲೀಟರ್ ನೀರಿನಲ್ಲಿ 5 ರಿಂದ

 ಇದನ್ನೂ ಓದಿ ಅತಿವೃಷ್ಟಿ ಹಾನಿ : ಪರಿಹಾರ ಮೊತ್ತ ಹೆಚ್ಚಿಸಿ ಆದೇಶ; ಹಾಲಪ್ಪ ಆಚಾರ್

ಗರಿಷ್ಠ 10 ಗ್ರಾಂ. ಮಿಶ್ರಣವನ್ನು ಎಕರೆಗೆ 200 ಲೀಟರ್ ದ್ರಾವಣವನ್ನು ಬಳಸಬೇಕು. ಕಲಘಟಗಿ ತಾಲೂಕಿನಲ್ಲಿ ಭತ್ತದ ಬೆಳೆಗೆ ಹೊಡತಾ ಮಾಡಲು ಸೂಕ್ತ ಹದವಿರುತ್ತದೆ, ಬೆಳೆಗಳಲ್ಲಿ ರಸ ಹೀರುವ ಕೀಟ ಬಾಧೆ ನಿರ್ವಹಿಸಲು 6ಗ್ರಾಂ  ಥೈಯೋಮಿಥಾಕ್ಸಮ್ 25%, ಡಬ್ಲೂಜಿ ಅಥವಾ 7.5 ಗ್ರಾಂ.ಅಸಿಟಾಮಿಪ್ರಿಡನ್ನು ಪ್ರತಿ 15 ಲೀ. ಟ್ಯಾಂಕಿಗೆ ಬೆರೆಸಿ ಸಿಂಪಡಿಸಬೇಕು, ಎಲೆ ತಿನ್ನುವ ಕೀಟಗಳ ಬಾಧೆಯನ್ನು ನಿಯಂತ್ರಿಸಲು 2ಮಿಲೀ ಫ್ರೋಫೆನೋಪಾಸ್ 50% ಇ.ಸಿ ಅಥವಾ 3.2 ಗ್ರಾಂ. ಇಮಾಮೆಕ್ಟಿನ್ ಬೆಂಜೋಯೋಟ 8ಮಿಲೀ ಅಥವಾ ಲ್ಯಾಮಡಾಸೈಲೋಥ್ರಿನ್ 5 ಇ.ಸಿ ಅಥವಾ 160 ರಿಂದ 170 ಮಿಲೀ ಬೇವಿನ ಎಣ್ಣೆಯನ್ನು ಪ್ರತಿ 15 ರಿಂದ 16ಲೀ ಟ್ಯಾಂಕಿನಲ್ಲಿ ಬೆರೆಸಿ ಸಿಂಪಡಿಸಬೇಕು, ಕಬ್ಬಿನ ಬೆಳೆಯಲ್ಲಿ ತುಕ್ಕು ರೋಗದ ಲಕ್ಷಣಗಳು ಕಂಡು ಬಂದಿದ್ದು, ಇದನ್ನು ನಿಯಂತ್ರಿಸಲು ಬೆಳೆಯಲ್ಲಿ ಒಣ ರವದಿಯನ್ನು ಸವರಿ ಗಾಳಿ ಆಡುವಂತೆ ಮಾಡಬೇಕು, ಕಬ್ಬಿನ ಬೆಳೆಗೆ ಯೂರಿಯಾ ಗೊಬ್ಬರದ ಬಳಕೆಯನ್ನು ಆದಷ್ಟು ಕಡಿಮೆ ಮಾಡಿರಿ,

ಇದನ್ನು ಓದಿ ಅತಿವೃಷ್ಟಿಗಾಗಿ ತುರ್ತು ಸಭೆ : ರೈತ ನೆಮ್ಮದಿಯಿಂದ ಇದ್ದಾಗ ಮಾತ್ರ ನಾವೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ: ಶಾಸಕ ನಿಂಬಣ್ಣವರ

ತುಕ್ಕು ರೋಗದ ನಿವಾರಣೆಗಾಗಿ 1ಮಿಲೀ ಹೆಕ್ಸಾಕೋನಾಝೋಲ್ 1ಮಿಲೀ. ಪ್ರೊಪಿಕೋನೋಜೋಲ್ ಅಥವಾ 0.5ಗ್ರಾಂ. ಟೆಬ್ಯುಕೋನೋಝೋಲ್+ಟ್ರಿಪ್ಲಾಕ್ಸಿಸ್ಟೊಬಿನ್ ಸಂಯುಕ್ತ ಶಿಲಿಂದ್ರನಾಶಕವನ್ನು ಸಿಂಪಡಣೆ ಮಾಡಬೇಕೆಂದು ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ ತಾಂತ್ರಿಕ ಮಾಹಿತಿ ವಿಜ್ಞಾನಿ ಡಾ.ಪಿ.ಎಸ್.ಹೂಗಾರ ಹಾಗೂ ಬಿ.ಎಸ್ ಕಣಗಿ ತಿಳಿಸಿದ್ದಾರೆ.

Related posts

ಒಮಿಕ್ರೋನ್ + ಡೆಲ್ಟಾ: ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ; ಸಿಎಂ

eNewsLand Team

ಫಸ್ಟ್ ಟೈಂ ಸೂರ್ಯನ ಮುಟ್ಟಿದ ಮಾನವ ! 

eNewsLand Team

ಶ್ರೀಕೃಷ್ಣಮಠಕ್ಕೆ ರಾಜ್ಯಪಾಲ ಗೆಹ್ಲೋಟ್ ಭೇಟಿ

eNewsLand Team