ಇಎನ್ಎಲ್ ಧಾರವಾಡ :ಜಿಲ್ಲೆಯ ವಾರ್ಡ್ ನಂ.08 ರಲ್ಲಿ ಬರುವ ಹಿರೆಕೇರೆ (ಕೋಳಿಕೆರೆ) ಹೊಸಯಲ್ಲಾಪೂರದಲ್ಲಿ ಹೂಳು ಶೇಖರಣೆಗೊಂಡಿದೆ. ಹೂಳು ತೆಗೆದು ಸಾಗಿಸಲು ರೈತರಿಗೆ ಫೆಬ್ರವರಿ 1 ರಿಂದ 15 ರವರೆಗೆ ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಪಾಲಿಕೆ ವತಿಯಿಂದ ಜೆಸಿಬಿ ವ್ಯವಸ್ಥೆ ಮಾಡಲಾಗಿದ್ದು, ರೈತರು ತಮ್ಮ ಟ್ರ್ಯಾಕ್ಟರ್ ಹಾಗೂ ಟಿಪ್ಪರ್‍ಗಳನ್ನು ತಂದಲ್ಲಿ ಉಚಿತವಾಗಿ ಕೆರೆಯ ಹೂಳನ್ನು ತುಂಬಿಕೊಡಲಾಗುವುದು. ರೈತರು ಇದರ ಸದುಪಯೋಗ ಪಡೆಯಬೇಕೆಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.