34 C
Hubli
ಮಾರ್ಚ್ 28, 2024
eNews Land
ರಾಜ್ಯ ಸುದ್ದಿ

ಹೊಸ ವರ್ಷಾಚರಣೆಯ ಗುಂಗಿನಲ್ಲಿ ಇದ್ದವರಿಗೆ ರಾಜ್ಯ ಸರ್ಕಾರ ಶಾಕ್! ನೈಟ್ ಕರ್ಫ್ಯೂ ಮತ್ತೆ ಜಾರಿ

ಇಎನ್ಎಲ್ ಬೆಂಗಳೂರು: ಒಮಿಕ್ರೋನ್ ಭೀತಿ ಹಿನ್ನೆಲೆಯಲ್ಲಿ ಡಿ. 28ರಿಂದ ಹತ್ತು ದಿನ ರಾತ್ರಿ ಕರ್ಫ್ಯೂ ಜಾರಿ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.ರಾತ್ರಿ ಗಂಟೆಯಿಂದ ಬೆಳಿಗ್ಗೆ 5ರ ವರೆಗೂ ಕರ್ಫ್ಯೂ ಇರಲಿದೆ.

ಬೆಂಗಳೂರಿನಲ್ಲಿ ತಜ್ಞರ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ನಡೆಸಿದ‌ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಾಕಷ್ಟು ಜನಜಂಗುಳಿ ಸೇರಿ ಕೋವಿಡ್ ಹರಡಲು ಕಾರಣ ಆಗಬಹುದು ಎಂಬ ಕಾರಣಕ್ಕೆ ನೈಟ್ ಕರ್ಪ್ಯೂ ಹೇರಲಾಗಿದೆ.

 

ರೆಸ್ಟೊರೆಂಟ್‌, ಬಾರ್‌, ಕ್ಲಬ್‌ ಹಾಗೂ ಪಬ್‌ಗಳಲ್ಲಿ ಒಟ್ಟು ಆಸನಗಳ ಪೈಕಿ ಶೇಕಡ 50 ಜನರ ಪ್ರವೇಶದ ಮಿತಿ ವಿಧಿಸಲಾಗಿದೆ.

‘ಹೊಸ ವರ್ಷಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗವಾಗಿ ನಡೆಸುವ ಸಂಭ್ರಮಾಚರಣೆ, ಸಮಾರಂಭಗಳನ್ನು ನಿಷೇಧಿಸಲಾಗಿದೆ’ ಎಂದು ಆರೋಗ್ಯ ಸಚಿವ ಕೆ.ಸುಧಾಕರ್‌ ಮಾಹಿತಿ ನೀಡಿದರು.

Related posts

ಕಸಾಪ: ಧಾರವಾಡ ಅಧ್ಯಕ್ಷರಾಗಿ ಡಾ.ಲಿಂಗರಾಜ ಅಂಗಡಿ ಪುನರಾಯ್ಕೆ

eNEWS LAND Team

ಮೇಕೆದಾಟು; ಕಾಂಗ್ರೆಸ್ಸಿಗೆ ಸಿಎಂ ತಿರುಗೇಟು

eNEWS LAND Team

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸದ ಚಿತ್ರಾವಳಿ

eNewsLand Team