26 C
Hubli
ಮೇ 10, 2024
eNews Land
ಸಣ್ಣ ಸುದ್ದಿ

ಕಸಾಪ ಅಣ್ಣಿಗೇರಿ ತಾಲೂಕ ಘಟಕ ಹಾಗೂ ಹೋಬಳಿ ಪದಾಧಿಕಾರಿ ಪದಗ್ರಹಣ

ಇಎನ್‌ಇಲ್ ಅಣ್ಣಿಗೇರಿ: ಕುಂಬಾರ ಮಾಡಿದ ಹಣತೆ, ಗಾಣಿಗ ಮಾಡಿದ ಎಣ್ಣಿ, ರೈತ ಬೆಳದ ಹತ್ತಿ, ಇವು ಒಂದಕ್ಕೊoದು ಸೇರಿ ಸಮರಸಗೊಂಡಾಗ ದಿವ್ಯ ಬೆಳಕು ಪ್ರಜ್ವಲಿಸುತ್ತದೆ. ಆ ಬೆಳಕಿನಲ್ಲಿ ನಮ್ಮ ಬದುಕಿನ  ಮುಖ ನೋಡಿಕೊಂಡು ಬದುಕುವುದೇ ಕನ್ನಡದ ಶ್ರೀಮಂತ ಸಂಸ್ಕೃತಿ ಎಂದು ಡಾ.ಎ.ಸಿ.ವಾಲಿ ಮಹಾರಾಜರು ಹೇಳಿದರು.

ತಾಲೂಕಿನ ಮಜ್ಜಿಗುಡ್ಡ ಗ್ರಾಮದ ಬಸವೇಶ್ವರ ಸಭಾಭವನದಲ್ಲಿ  ಆಯೋಜಿಸಿದ ಅಣ್ಣಿಗೇರಿ ತಾಲೂಕ ಕಸಾಪ ಘಟಕ ಹಾಗೂ ಹೋಬಳಿ ಕಸಾಪ ಘಟಕ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಸಮಾರಂಭ ಉದ್ಘಾಟಿಸಿ ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ ಅಣ್ಣಿಗೇರಿ ತಾಲೂಕಿನ ಕಸಾಪ ಕನ್ನಡದ ಕೆಲಸ  ಕಾರ್ಯಚಟುವಟಿಕೆಗೆ ಬೆನ್ನಲುಬಾಗಿ ನಿಂತು ಸಹಕಾರ ನೀಡುವುದಾಗಿ ಹೇಳಿದರು.
ಅಣ್ಣಿಗೇರಿ ಹೋಬಳಿ ಕಸಾಪ ಘಟಕ ಅಧ್ಯಕ್ಷ ವಿ.ಡಿ.ಅಂದಾನಗೌಡ್ರ ಕನ್ನಡ ಚಟುವಟಿಗಳನ್ನು ಪಸರಿಸಲು  ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಗ್ರಾಮ ಘಟಕಗಳನ್ನು ತೆರಯುವ ದೀಕ್ಷೆ ಮಾಡುತ್ತೇನೆಂದರು.
ಪತ್ರಕರ್ತ ಬಸವರಾಜ ಕುಬಸದ ಮಾತನಾಡಿ, ಕನ್ನಡ ಭಾಷೆ ಶಾಲೆ ಉಳಿಯಬೇಕು. ಕನ್ನಡ ಚಟುವಟಿಕೆ ಹೆಚ್ಚು ಬೆಳಕಿಗೆ ಬಂದರೆ ಕನ್ನಡ ಭಾಷೆ ಉಳಿಯಲು ಸಾಧ್ಯವೆಂದರು.
ನಿಕಟಪೂರ್ವ ಅಧ್ಯಕ್ಷ ರವಿರಾಜ ವೇರ್ಣೆಕರ ಕನ್ನಡ ದ್ವಜ ತಾಲೂಕಿನ ಕಸಾಪ ಘಟಕ ನೂತನ ಅಧ್ಯಕ್ಷ ಡಾ.ಲಲಿತಾ ಸಾಲಿಮಠ, ಹಾಗೂ ಹೋಬಳಿ ಘಟಕದ ಅಧ್ಯಕ್ಷ ವಿ.ಡಿ.ಅಂದಾನಗೌಡ್ರ  ಅವರಿಗೆ ಹಸ್ತಾಂತರಿಸಿದರು.
ಅಣ್ಣಿಗೇರಿ ತಾಲೂಕ ಕಸಾಪ ಘಟಕ ಹಾಗೂ ಹೋಬಳಿ ಘಟಕದ ಪದಾಧಿಕಾರಿಗಳಿಗೆ ಧಾ.ಜಿ.ಕಸಾಪ ಗೌರವ ಕಾರ್ಯದರ್ಶಿ ಕೆ.ಎಸ್.ಕೌಜಲಗಿ  ಪ್ರತಿಜ್ಞಾವಿಧಿ ಬೋಧಿಸಿದರು. ಧಾ.ಜಿ.ಕಸಾಪ ಅಧ್ಯಕ್ಷರಾದ ಡಾ.ಲಿಂಗರಾಜ ಅಂಗಡಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಎಮ್.ಎಚ್.ನವಲಗುಂದ,  ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜಕರಡ್ಡಿ ಅವರನ್ನು ಸನ್ಮಾನಿಸಲಾಯಿತು.
ಶಲವಡಿ ಕಸಾಪ ಸಮ್ಮೇಳನದ ಸರ್ವಾಧ್ಯಕ್ಷ ಹುದ್ದಾರ ಜನಪದ ಹಾಸ್ಯ ಶೈಲಿಯ ಮೂಲಕ ಕನ್ನಡ ಭಾಷೆಯ ಸೊಡಗನ್ನು ತಮ್ಮದೇ ದಾಟಿಯಲ್ಲಿ ಪ್ರಸ್ತುತ ಪಡಿಸಿ ಸರ್ವರನ್ನು ರಂಜಿಸಿದರು.
ಮಜ್ಜಿಗುಡ್ಡ ಗ್ರಾಮದ ಬಸವೇಶ್ವರ ಟ್ರಸ್ಟ್ ಕಮಿಟಿಯಿಂದ ಭೋಜನ ವ್ಯವಸ್ಥೆ ನೇರವೆರಿಸಿದರು.
ಈ ವೇಳೆ ಎನ್.ಎಸ್ ಮೇಲ್ಮುರಿ, ಶ್ರೀಶೈಲ್ ಮೂಲಿಮನಿ, ಚಂಬಣ್ಣ ಅಕ್ಕಿ,ಕಸಾಪ ಮಾಜಿ ಅಧ್ಯಕ್ಷ ಪ್ರಕಾಶ ಅಂಗಡಿ , ಮಜ್ಜಿಗುಡ್ಡ ಗ್ರಾಮದ ಕನ್ನಡಾಭಿಮಾನಿಗಳು, ಸಾಹಿತ್ಯ ಆಸಕ್ತರು, ದತ್ತಿ ದಾನಿಗಳು ಉಪಸ್ಥಿತರಿದ್ದರು. ಜಿ.ವಾಯ್.ಕೊರವರ ಹಾಗೂ ಅಮೀನಸಾಬ ಪಾಪಣ್ಣವರ ನಿರೂಪಿಸಿದರು. ಪ್ರಶಾಂತ ಹಂದಿಗೋಳ ಪ್ರಾರ್ಥಸಿದರು. ನಾಡಗೀತೆ ಹಾಗೂ ರೈತಗೀತೆ ಮಜ್ಜಿಗುಡ್ಡ ಗ್ರಾಮದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಡಿದರು. ವಿರೇಶ ಅಂಗಡಿ ವಂದಿಸಿದರು.

Related posts

ಡಿ.10 ರಂದು ಮದ್ಯ ಮಾರಾಟ ನಿಷೇಧ

eNEWS LAND Team

ಸಿಡಲಿಗೆ ಬಲಿಯಾದ ಅಣಬೂರು ಗ್ರಾಮದ ಇಬ್ಬರು ಯುವಕರು

eNEWS LAND Team

ನಲವಡಿ: ಮಾದಕವಸ್ತುಗಳಿಂದ ಮಕ್ಕಳನ್ನು ರಕ್ಷಿಸಲು ಪಾಲಕರ ಮತ್ತು ಶಿಕ್ಷಕರ ಪಾತ್ರ ಬಹುಮುಖ್ಯ: ಪ್ರಕಾಶ ಅಂಗಡಿ

eNEWS LAND Team