29 C
Hubli
ಮೇ 15, 2024
eNews Land
ಸುದ್ದಿ

ಕರ್ನಾಟಕ ಬಂದ್ ಕರೆಗೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ರೈತರು

ಇಎನ್ಎಲ್ ನವಲಗುಂದ: ಪಟ್ಟಣದ ಪಕ್ಷಾತೀತ ಹೋರಾಟ ಸಮಿತಿ ಹೋರಾಟಗಾರು ನೀಲಮ್ಮನ ಕೆರೆಯ ಹತ್ತಿರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ರಾಜ್ಯಾದ್ಯಂತ ಕಾವೇರಿ ನದಿ ನೀರಿಗಾಗಿ ನಡೆದ ಕರ್ನಾಟಕ ಬಂದ್ ಕರೆಗೆ ಪಟ್ಟಣದ ರೈತ ವೇಧಿಕೆಯ ಪಕ್ಷಾತೀತ ಹೋರಾಟ ಸಮಿತಿಯ ರೈತರು ನೀಲಮ್ಮನ ಕೆರೆಯ ಹತ್ತಿರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಮಹಾದಾಯಿ ಹಾಗೂ ಕಾವೇರಿ ನದಿ ನೀರಿನ ಅನ್ಯಾಯದ ವಿರುದ್ದು ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಸುಭಾಷಚಂದ್ರಗೌಡ ಪಾಟೀಲ ಮಾತನಾಡಿ ರಾಜ್ಯದಲ್ಲಿ ನೀರಿನ ವಿಷಯದಲ್ಲಿ ತುಂಬಾ ಸರಕಾರ ನಿರ್ಲಕ್ಷತನವನ್ನು ಮಾಡುತ್ತಿರುವುದು ಖಂಡನೀಯ ರಾಜ್ಯದ ರೈತರಿಗೆ ನೀರಿನ ಕೊರತೆ ಇರುವಂತಹ ಸಂದರ್ಭದಲ್ಲಿ ರಾಜ್ಯದಿಂದ ತಮಿಲುನಾಡಿಗೆ ಕಾವೇರಿ ನೀರನ್ನು ಬಿಟ್ಟು ರಾಜ್ಯದ ಜನರಿಗೆ ಅನ್ಯಾಯ ಮಾಡುತ್ತಿರುವುದು ಯಾವ ನ್ಯಾಯ ಇದಕ್ಕೆ ಈ ಭಾಗದ ರೈತರ ಸಂಪೂರ್ಣ ಬೆಂಬಲ ಇರುತ್ತದೆ. ತಕ್ಷಣ ಕಾವೇರಿ ನೀರನ್ನು ಬೇರೆ ರಾಜ್ಯಕ್ಕೆ ನೀಡುತ್ತಿರುವುದನ್ನು ಕೈಬಿಟ್ಟು ಇಲ್ಲಿಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕೆಂದು ಹೇಳಿದರು.
ಅಷ್ಟೇ ಅಲ್ಲದೇ ಈ ಭಾಗದ ಜಲ್ವಂತ ಸಮಸ್ಯೆ ಮಹಾದಾಯಿ ಕಳಸಾ ಬಂಡೂರಿ ವಿಷಯದಲ್ಲಿಯೂ ಇದೇ ರೀತಿಯ ನಿಲುವನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಮಾಡುತ್ತಿರುವುದು ಖಂಡನೀಯ ವಿಷಯ ಇದಕ್ಕೊಂದು ತಾರ್ಕಿಕವಾದ ಅಂತ್ಯವನ್ನು ಹಾಡಬೇಕು ಇಲ್ಲವಾದರೆ ರೈತರು ಉಗ್ರ ಹೋರಾಟ ಮಾಡುವುದರಲ್ಲಿ ಸಂಶಯವಿಲ್ಲವೆಂದು ಹೇಳಿದರು.
ಬೆಳಿಗ್ಗೆಯಿಂದ ಬಸ್ಸ ಸಂಚಾರ ಎಂದಿನಂತೆ ಇದ್ದು ಭಾಗಶ ಅಂಗಡಿ ಮುಗ್ಗಟ್ಟುಗಳು ತೆರೆದಿದ್ದು ಬಂದ್ ಕರೆಗೆ ವ್ಯಾಪಾಕವಾದ ಬೆಂಬಲ ಸಿಗದೆ ಇರುವುದು ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು ಎಂದು ಸರಕಾರದ ವಿರುದ್ದ ಹರಿಹಾಯ್ದರು.
ಸಾಂಕೇತಿಕವಾಗಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ರೈತರು ಪ್ರತಿಭಟನೆ ಮಾಡಿ ತಹಶೀಲ್ದಾರ ಸುದೀರ ಸಾಹುಕಾರ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಲ್ಲೇಶ ಉಪ್ಪಾರ, ಸಿದ್ದಲಿಂಗಪ್ಪ ಹಳ್ಳದ, ಸಂಗಪ್ಪ ನಿಡವಣೆ, ಕರಿಯಪ್ಪ ತಳವಾರ, ಮುರಿಗೆಪ್ಪ ಪಲ್ಲೇದ, ಗೋವಂದರಡ್ಡಿ ಮೊರಬದ, ಶಾಂತೇಶ ನೀರಲಗಿ, ಗಂಗಾಧರ ಪತ್ತಾರ, ಯಲ್ಲಪ್ಪ ದಾಡಿಬಾವಿ, ಮಲ್ಲಪ್ಪ ಬಸೇಗೂಣ್ಣವರ, ರವಿ ತೋಟದ, ಬಸಪ್ಪ ಮುಪ್ಪಯ್ಯನವರ, ಅಟೋ ಸಂಗದ ಮುತ್ತಣ್ಣ ದೊಡ್ಡಮನಿ, ರಕ್ಷಣಾ ವೇಧಿಕೆಯ ವಿಕ್ರಮ ಕುರಿ, ಸಿರಾಜ ಧಾರವಾಡ, ನಿಂಗಪ್ಪ ಕೆಳಗೇರಿ ಇತರರಿದ್ದರು.

Related posts

ಕಲಾ ತವರು ಕಲಘಟಗಿ: ಬಸವರಾಜ ಹೊರಟ್ಟಿ

eNEWS LAND Team

ಸೋಲಿನ ಸುಳಿಯಿಂದ ಗೆಲವು ಸಂಭ್ರಮಿಸಿದ ಡೆಲ್ಲಿ ಕ್ಯಾಪಿಟಲ್ಸ್; 10ನೇ ಬಾರಿ ಮೊದಲ ಶರಣಾಗತಿ ಪರಂಪರೆ ಮುಂದುವರೆಸಿದ ಎಂಐ

eNewsLand Team

6000 ಸಿ.ಎಸ್.ಸಿ ಕೇಂದ್ರಗಳ ಸ್ಥಾಪನೆ: ಎಲ್.ಎಚ್.ಮಂಜುನಾಥ

eNEWS LAND Team