22 C
Hubli
ಡಿಸೆಂಬರ್ 7, 2023
eNews Land
ಸುದ್ದಿ

ಸೋಲಿನ ಸುಳಿಯಿಂದ ಗೆಲವು ಸಂಭ್ರಮಿಸಿದ ಡೆಲ್ಲಿ ಕ್ಯಾಪಿಟಲ್ಸ್; 10ನೇ ಬಾರಿ ಮೊದಲ ಶರಣಾಗತಿ ಪರಂಪರೆ ಮುಂದುವರೆಸಿದ ಎಂಐ

 ಇಎನ್ಎಲ್ ಸ್ಪೋರ್ಟ್ಸ್ ಕ್ಲಬ್: ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅದ್ಭುತ ಗೆಲವು ಸಾಧಿಸಿದೆ. 2013ರಿಂದ ಐಪಿಎಲ್’ನ ಮೊದಲ ಪಂದ್ಯದ ಸೋಲಿನ ಪರೇಡ್ ಮುಂದುವರಿಸಿರುವ ಎಂಐ 15ನೇ ಆವೃತ್ತಿಯಲ್ಲೂ ಅದನ್ನು ಕಾಪಿಟ್ಟುಕೊಂಡಿದೆ.

ಇದನ್ನೂ ಓದಿ:ಮನುಷ್ಯನಿಗೆ‌ ಹೇಗೆಲ್ಲಾ ಸಾವು ಬರಬಹುದು? ಕಲಘಟಗಿಯಲ್ಲಿ ಬರ್ಬರವಾಗಿ ಅಪ್ಪಳಿಸಿದ ಮೃತ್ಯು!!

ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್’ಗೆ ಇಳಿಸಲ್ಪಟ್ಟ ರೋಹಿತ್ ಪಡೆ 178 ರನ್‌ಗಳ ಸವಾಲಿನ ಗುರಿ ಕಲೆ ಹಾಕಿತು. ಎಂಐ ಪರ ಇಶಾನ್ ಕಿಶನ್ ಅಜೇಯ 81 ರನ್’ಗಳ ಭರ್ಜರಿ ಬ್ಯಾಟಿಂಗ್ ನಡೆಸಿದರು. ನಾಯಕ ರೋಹಿತ ಶರ್ಮಾ 41 ರನ್ ಚಚ್ಚಿದರು.

ಇದನ್ನೂ ಓದಿ: ‘ಆ’ ಚಿತ್ರಕ್ಕೆ ನಿಮ್ಮ ಫೋಟೊ..! ಲೋನ್ ಆ್ಯಪ್ ಡೌನ್ಲೋಡ್ ಮಾಡೋ ಮೊದ್ಲು ಎಚ್ಚರ! ಧಾರವಾಡ ಮಹಿಳೆಗೆ ಆಗಿದ್ದೇನು??

ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಬೌಲಿಂಗ್‌ನಲ್ಲಿ ಕುಲ್‌ದೀಪ್ ಯಾದವ್ ಅದ್ಭುತ ದಾಳಿ ನಡೆಸಿ 3, ಖಲೀಲ ಅಹ್ಮದ್ 2 ವಿಕೆಟ್ ಕಬಳಿಸಿದರು.

ಇದನ್ನೂ ಓದಿ:ಪುನೀತ್ ಪುತ್ಥಳಿ ಅನಾವರಣ ಮಾಡಿದ ಸಿಎಂ ಬೊಮ್ಮಾಯಿ

ಗುರಿ ಬೆನ್ನತ್ತಿದ ಡೆಲ್ಲಿ ಆರಂಭದಲ್ಲೇ ಆಘಾತ ಅನುಭವಿಸಿತು. ಎರಡು ರನ್‌ಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಉತ್ತಮ ಬ್ಯಾಟಿಂಗ್ ನಡೆಸುವ ಮುನ್ಸೂಚನೆ ನೀಡಿದ್ದ ಪೃಥ್ವಿ ಶಾ ಕೂಡ 38 ರನ್‌ಗಳಿಗೆ ಔಟ್ ಆಗುವ ಮೂಲಕ ಆಘಾತ ಅನುಭವಿಸಿತು.

ಇದನ್ನೂ ಓದಿ:ರಾಜ್ಯದ ಆರು ಪ್ರಾದೇಶಿಕ ಸ್ಥಳಗಳಲ್ಲಿ ಚಿತ್ರ ಕಲಾ ಗ್ಯಾಲರಿ ಪ್ರಾರಂಭ: ಬೊಮ್ಮಾಯಿ

ಮಂದೀಪ್ ಸಿಂಗ್ ಒಂದೂ ರನ್ ಗಳಿಸದೆ ಔಟಾದರೆ ನಾಯಕ ರಿಷಬ್ ಪಂತ್ ಒಂದು ರನ್‌ ಗಳಿಸಿ ಪೆವಿಲಿಯನ್ ಸೇರಿದರು. ರೋವ್ಮನ್ ಪೋವೆಲ್ ಕೂಡ ಶೂನ್ಯ ಸುತ್ತಿದಾಗ ಡೆಲ್ಲಿ ತಂಡ 72 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿತ್ತು.

ಇದನ್ನೂ ಓದಿ:ಅಂಗವೈಕಲ್ಯ ಮೆಟ್ಟಿ ನಿಂತ ಹುಬ್ಬಳ್ಳಿಯ ಮಹ್ಮದ್ ಜಾವೇದ್ ಭಾರತ ಕ್ರಿಕೆಟ್ ಟೀಂಗೆ ಎಂಟ್ರಿ..!

ಆದರೆ ಬಳಿಕ ನಡೆದಿದ್ದೇ ಬೇರೆ. ಮೊದಲಿಗೆ ಶಾರ್ದೂಲ್ (22) ರನ್‌ವೇಗಕ್ಕೆ ಚುರುಕು ಮುಟ್ಟಿಸಿದರೆ ನಂತರ ಅಕ್ಷರ್ ಪಟೇಲ್ (38) ಹಾಗೂ ಲಲಿತ್ ಯಾದವ್(48) ಇನ್ನಿಂಗ್ಸ್ ಬೆಳೆಸುತ್ತಾ ಅಂತಿಮ ಹಂತದಲ್ಲಿ ಆರ್ಭಟಿಸಿದರು.

ಇದನ್ನೂ ಓದಿ:ಹೊಸ ನಾಯಕತ್ವದಲ್ಲಿ ಕಮಾಲ್ ಮಾಡುತ್ತಾ ಆರ್’ಸಿಬಿ??

ಇದನ್ನೂ ಓದಿ:ಥಾಲಾ ಇಸ್ ಬ್ಯಾಕ್!! ಅರ್ಧಶತಕ ಭಾರಿಸಿ ಧೋನಿ ಮ್ಯಾಜಿಕ್..ವಿಸಿಲ್ ಪೋಡು!

ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇನ್ನೂ 10 ಎಸೆತಗಳು ಬಾಕಿ ಇರುವಾಗಲೇ ಅದ್ಭುತ ಗೆಲವು ಸಾಧಿಸಿ 15ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ.ಈ ಮೂಲಕ ಸತತ 10ನೇ ಬಾರಿ ಮುಂಬೈ ಐಪಿಎಲ್’ನ ಮೊದಲ ಪಂದ್ಯದಲ್ಲಿ ಸೋಲಿನ ಪರಂಪರೆ ಮುಂದುವರೆಸಿಕೊಂಡು ಬಂದಂತಾಗಿದೆ.

ಇದನ್ನೂ ಓದಿ:ಐಪಿಎಲ್; ಚೆನ್ನೈ ಮಣಿಸಿ ಸೇಡು ತೀರಿಸಿಕೊಂಡ ಕೊಲ್ಕತ್ತಾ

 

Related posts

ಸಚಿವ ಸಂಪುಟದ ನಿರ್ಣಯದಂತೆ ಟೆಂಡರ್ ಪರಿಶೀಲನೆಗೆ ಎರಡು ಸಮಿತಿಗಳ ರಚನೆ : ಸಿಎಂ

eNewsLand Team

ಹುಬ್ಬಳ್ಳಿ: ಖತರ್ನಾಕ ಕಿಲ್ಲರ್: ಭಿಕ್ಷುಕರೇ ಟಾರ್ಗೆಟ್!!

eNEWS LAND Team

2023ರ ಚುನಾವಣೆಲಿ ಬಿಜೆಪಿ ಗೆಲುವು ನಿಶ್ಚಿತ: ಸಿಎಂ ಬೊಮ್ಮಾಯಿ

eNEWS LAND Team