18 C
Hubli
ನವೆಂಬರ್ 30, 2022
eNews Land
ಜನಪದ ಸುದ್ದಿ

ಕಲಾ ತವರು ಕಲಘಟಗಿ: ಬಸವರಾಜ ಹೊರಟ್ಟಿ

Listen to this article

ಇಎನ್ಎಲ್ ಕಲಘಟಗಿ: ಕಲೆಗಳ ತವರೂರಾದ ಕಲಘಟಗಿಯಲ್ಲಿ 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ವತಿಯಿಂದ 2020-21 ನೇ ಸಾಲಿನ ವಾರ್ಷಿಕ ರಂಗ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ.

ಸ್ಥಳೀಯ ಪಟ್ಟಣದ ಹನ್ನೆರಡು ಮಠದ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಲಘಟಗಿಯು ನಾಟಕ, ಜಾನಪದ, ದೊಡ್ಡಾಟ, ಭಜನಾ ಕಲೆ, ಕರಡಿ ಮಜಲು, ಹೆಜ್ಜೆ ಮಜಲು ಮುಂತಾದವುಗಳ ಕಣಜವಾಗಿದೆ. ಆದರೆ ಮುಂದಿನ ಕೆಲ ವರ್ಷಗಳಲ್ಲಿ ನಮ್ಮ ಈ ಮೂಲ ಸಂಸ್ಕೃತಿಗಳು ನಾಶವಾಗಲಿವೆ. ಇದನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಈಗಾಗಲೇ ಶಿವಣ್ಣನವರು ಹೇಳಿದಂತೆ ಮಠದ ಮುಂದಿನ ಜಾಗೆಯನ್ನು ಸ್ವಾಮೀಜಿಯವರು ಕೊಡಲು ಒಪ್ಪಿದ್ದು ನಮಗೆಲ್ಲರಿಗೂ ಸಂತೋಷವಾಗಿದೆ. ನಾವು-ಸ್ಥಳೀಯ ಶಾಸಕರು ಸೇರಿ ರಂಗ ಮಂದಿರ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಥಳೀಯ ಶಾಸಕರಾದ ಸಿ.ಎಮ್.ನಿಂಬಣ್ಣವರ ನಾಟಕದ ಕಲೆಯು ನಮ್ಮ ಬದುಕನ್ನು ಚಿತ್ರಿಸುವ, ಅಂಕುಡೊoಕು ತಿದ್ದುವ ಜೀವಂತ ಕಲೆಯಾಗಿದೆ. ಈ ಕಲೆಯನ್ನು ನಿರಂತರವಾಗಿ ಮುನ್ನಡೆಸಿಕೊಂಡು ಹೋಗುವುದು ನಮ್ಮೆಲ್ಲರ ಹಾಗೂ ಸರ್ಕಾರದ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ನಾವು-ನೀವೆಲ್ಲರೂ ಸೇರಿ ಇದನ್ನು ಉಳಿಸೋಣ. ತಮ್ಮೆಲ್ಲರ ಆಸೆಯಂತೆ ರಂಗ ಮಂದಿರ ನಿರ್ಮಿಸಲು ಈಗಲೇ ₹10ಲಕ್ಷ ರೂ.ಗಳನ್ನು ಮಂಜೂರ ಮಾಡುತ್ತೇನೆ. ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ ಮಾಡಿರಿ ಎಂದರು. ಕಲಘಟಗಿಯಿಂದಲೂ ಪ್ರಶಸ್ತಿಗೆ ಆಯ್ಕೆಯಾದ ಬಸವರಾಜ ಕಡ್ಲೆಣ್ಣನವರ, ಹಾಗೂ ಎಲ್ಲ ಕಲಾವಿದರನ್ನು ಅಭಿನಂದಿಸಿದರು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ.ಭೀಮಸೇನ ಆರ್. ಮಾತನಾಡಿ ಆಯ್ಕೆ ತುಂಬಾ ಕಷ್ಟಕರದ ಕೆಲಸ, ರಂಗ ನಾಟಕದ ಕಲೆಗಳಿಗೆ ಎಂದೂ ಸಾವಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಫಲಾಫೇಕ್ಷೆ ಇಲ್ಲದೇ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ, ಕೋರೋನಾ ಹಾವಳಿಯಿಂದಲೂ ಈ ರಂಗವು ಕಷ್ಟದಲ್ಲಿ ಸಿಲುಕಿದೆ, ಕಲಾವಿದರನ್ನು ಗುರುತಿಸೋಣ, ಅಕಾಡೆಮಿ ಹಾಗೂ ನಾಲ್ಕು ದತ್ತು ನಿಧಿಯಿಂದ ಪ್ರಶಸ್ತಿಗಳನ್ನು ನೀಡುತ್ತಿದ್ದೇವೆ ಎಂದರು.
ಜೀವಮಾನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್.ಎನ್.ಸೇತೂರಾಂ ಈ ರಂಗಕ್ಕೆ ಸೇವೆ ಸಲ್ಲಿಸಲು ಅಲ್ಲ, ಮನಸ್ಸಿನ ಹಸಿವೆ ತುಂಬಿಸಲು ಬಂದಿದ್ದೇನೆ, ಇದು ಜನ ಸಮುದಾಯ ನೀಡಿದ ಪ್ರಶಸ್ತಿ, ಇಂತಹ ಕಾರ್ಯಕ್ರಮಕ್ಕೆ ಈ ಪವಿತ್ರ ಜಾಗೆಯನ್ನು ಆಯ್ಕೆ ಮಾಡಿದ್ದಕ್ಕಾಗಿ, ಇಷ್ಟೆಲ್ಲ ಅಪಾರ ಸಂಖ್ಯೆಯಲ್ಲಿ ತಾವೆಲ್ಲರೂ ಸೇರಿದ್ದೀರಿ. ಇದು ಕಲೆಗೆ ಕೊಟ್ಟ ಗೌರವ, ಸೌಜನ್ಯದ ಪ್ರತೀಕವಾಗಿರುವ ಬಸವರಾಜ ಹೊರಟ್ಟಿಯವರ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ಎಲ್ಲರಿಗೂ ಹೆಮ್ಮೆಯ ವಿಷಯ ಎಂದರು.
ನಾಟಕ ಅಕಾಡೆಮಿ ಸದಸ್ಯ ಶಿವಣ್ಣ ಅರಳಿಹೊಂಡ ಸುಸಜ್ಜಿತ ರಂಗ ಮಂದಿರಕ್ಕೆ ಬೇಡಿಕೆ ಇಟ್ಟರು. ಸಂತೋಷ ಕುಮಾರ ಕುಸನೂರ, ಎಮ್,ಇಸ್ಮಾಯಿಲ್, ಭರಮಪ್ಪ ಜುಟ್ಲದ, ಮ.ಬ.ಸೋಮಣ್ಣ, ಗೆಣಿಕೆಹಾಳು ತಿಮ್ಮನಗೌಡ ಮೇಲುಸೀಮೆ, ಗುರುಬಸಪ್ಪ ಕಲ್ಲಪ್ಪ ಸಜ್ಜನ, ಹಣಮವ್ವ ಕುಳಲಿ, ಹನುಮಾನದಾಸ ಪವಾರ, ಉಮಾದೇವಿ ಹಿರೇಮಠ, ಬಸವರಾಜ ಐರಣಿ, ನೂರಜಹಾನ ಗೊರಜಿನಾಳ್, ಮಹಾವೀರ ಜೈನ್, ಅಶ್ವತ್ಥ ಕದಂಬ, ಎಮ್.ಆರ್.ಚಂದ್ರಶೇಖರಯ್ಯ, ಧನ್ಯಕುಮಾರ, ವೆಂಕಟರಮಣಸ್ವಾಮಿ, ಶ್ರೀನಿವಾಸ ಪ್ರಭು ಉಪ್ಪುಂದ, ರೋಹಿಣಿ ಜಗರಾಂ, ಕೆ.ಎನ್. ವಾಸುದೇವ ಮೂರ್ತಿ, ವಿ.ಲಕ್ಷ್ಮಿಪತಿ ,ಎಮ್,ಎಸ್,ವಿದ್ಯಾ, ಮಂಜುಳಾ ಸುರತ್ಕಲ್, ಬಾಬು ಹಿರಣ್ಣಯ್ಯ, ಮೋಹನ್ ರಾಮ್, ಮಾ.ಬಾಸ್ಕರ್, ವೆಂಕಣ್ಣ ಕಾಮನೂರ, ಅನ್ನಪೂರ್ಣ ಬಿ ಹೊಸಮನಿ, ಸುನಂದಾ ಹೊಸಪೇಟೆ, ಕೆ.ರಾಮಚಂದ್ರಯ್ಯ, ಪ್ರಶಸ್ತಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಗಣ್ಯರು ರಂಗ ಗ್ರಾಮಾಮೃತ ಪ್ರಶಸ್ತಿ ಪುಸ್ತಕ ಬಿಡುಗಡೆ ಮಾಡಿದರು.ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಎಮ್.ಆರ್.ತೋಟಗಂಟಿ ಹಾಗೂ ಸಂಗಡಿಗರು ಪ್ರಾರ್ಥನೆ ಮತ್ತು ನಾಡಗೀತೆ ಹಾಡಿದರು. ವ್ಹಿ.ಎಸ್.ಪಾಟೀಲ್, ಅಶೋಕ ಅರಕಸಾಲಿ, ಅಣ್ಣಪ್ಪ ಓಲೇಕಾರ, ಮಂಜುನಾಥ ಮುರಳ್ಳಿ, ಆರ್.ಎಮ್.ಹೊಲ್ತಿಕೋಟಿ, ಫಕ್ಕೀರೇಶ ಕೊಂಡಾಯಿ, ಮಲ್ಲಿಕಾರ್ಜುನ ಪುರದನಗೌಡ್ರ ಹಾಗೂ ತಾಲೂಕಿನ ಸಮಸ್ತ ಕಲಾವಿದ ಬಳಗದವರು ಸೇರಿದಂತೆ ಉಪಸ್ಥಿತರಿದ್ದರು.

Related posts

ಸೈಬರ್ ಅಪರಾಧಿಗಳ ವಿರುದ್ಧ ರಾಜಿ ಇಲ್ಲದೇ ಕಠಿಣ ಕ್ರಮ : ಸಿಎಂ ಬೊಮ್ಮಾಯಿ

eNewsLand Team

ಲಸಿಕಾಕರಣದಲ್ಲಿ ಧಾರವಾಡ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

eNEWS LAND Team

ಲಿಂಗಪತ್ತೆ ಹಾಗೂ ನಕಲಿ ವೈದ್ಯರ ಮೇಲೆ ಕಠಿಣ ಕ್ರಮಕೈಗೊಳ್ಳಿ ಆಸ್ಪತ್ರೆಗಳ ಸೇವೆಗಳ ಬಗ್ಗೆ ದರಪಟ್ಟಿ ಪ್ರದರ್ಶನ ಕಡ್ಡಾಯ: ಡಿಸಿ ಸಂಜಯ ಶೆಟ್ಟೆಣ್ಣವರ

eNEWS LAND Team