23.3 C
Hubli
ಮೇ 21, 2024
eNews Land
ಮಹಿಳೆ ಸುದ್ದಿ

ಸರ್ಕಾರದ ಸೌಲಭ್ಯ ಪಡೆದು ಆರ್ಥಿಕವಾಗಿ ಮಹಿಳೆಯರು ಸಬಲರಾಗಬೇಕು: ಜಿ.ಆರ್.ಶೆಟ್ಟರ

ಇಎನ್ಎಲ್ ಕಲಘಟಗಿ: ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಬಳಸಿಕೊಂಡು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ಹಿರಿಯ ದಿವಾನಿ ನ್ಯಾಯಾಧೀಶರಾದ ಜಿ.ಆರ್.ಶೆಟ್ಟರ್ ಹೇಳಿದರು.

ತಾಲೂಕಿನ ಮುಕ್ಕಲ ಗ್ರಾಪಂ ವತಿಯಿಂದ 2023 24 ನೇ ಸಾಲಿನ 15ನೆಯ ಹಣಕಾಸು ಯೋಜನೆಯ ಅನಿರ್ಬಂಧಿತ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರ ಜೀವನ ಉಪಯೋಗಕ್ಕಾಗಿ ಹೊಲಿಗೆ ಯಂತ್ರಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸ್ವಉದ್ಯೋಗದ ಮೂಲಕ ಜೀವನ ರೂಪಿಸಿಕೊಳ್ಳಲು ಸರ್ಕಾರ ನೀಡುವ ಇಂತಹ ಹೊಲಿಗೆ ಯಂತ್ರ ಉಪಕರಣಗಳು ಉಪಯುಕ್ತವಾಗಿವೆ ಎಂದರು.

ನ್ಯಾಯಾಧೀಶರಾದ ಗಣೇಶ.ಎನ್ ಮಾತನಾಡಿ ಸಂವಿಧಾನದ ಮೂಲಭೂತ ಹಕ್ಕುಗಳು ನಮಗಾಗಿ ನಾವೇ ಕೊಟ್ಟುಕೊಂಡಿದ್ದು ಡಾ.ಬಿ.ಆರ್.ಅಂಬೇಡ್ಕರ ನೀಡಿರುವ ಸಂವಿಧಾನ ದೇಶದ ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ರಚಿತವಾಗಿರುವುದು ಎಂದರು

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಸಿಗುವ ಸೌಲಭ್ಯಗಳ ವಿಷಯದಲ್ಲಿ ಫಲಾನುಭವಿಗೆ ಕೊಡುವುದು ಬಹಳ ಕಡಿಮೆ ಅದರ ಪ್ರಚಾರ ಜಾಸ್ತಿಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಹೊಲಿಗೆ ಯಂತ್ರ ಪಡೆದ ಮಹಿಳೆಯರು ಸದ್ಭಳಕೆ ಮಾಡಿಕೊಂಡು ತಮ್ಮ ಜೀವನ ರೂಪಿಸಿಕೊಳ್ಳಬೇಕು. ಈ ಮೂಲಕ ಆರ್ಥಿಕವಾಗಿ ಸದೃಢ ಬದುಕು ಕಟ್ಟಿಕೊಳ್ಳುವಂತೆ ಕಿವಿಮಾತು ಹೇಳಿದರು.

ಶಿಕ್ಷಣದಿಂದ ಸಾಮಾಜಿಕ ಕ್ರಾಂತಿ ಆಗಲು ಸಾಧ್ಯ, ಪೋಷಕರು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಪ್ರತಿಯೊಬ್ಬರೂ ನಿಮ್ಮ ಹಕ್ಕುಗಳಿಗಾಗಿ ಕಾನೂನು ಬದ್ಧವಾಗಿ ಪ್ರಶ್ನೆ ಮಾಡುವುದು ರೂಡಿಸಿಕೊಳ್ಳಿ ಜೊತೆಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ ಪಂಗಡದವರಿಗೆ ಪ್ರತಿ ವರ್ಷ ಸಾವಿರಾರು ಕೋಟಿ ಹಣವನ್ನು ಮೀಸಲಿಟ್ಟು ಅವರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಅದರ ಸದುಪಯೋಗ ಪರಿಶಿಷ್ಟ ಜಾತಿ ಪಂಗಡದ ಅರ್ಹ ಫಲಾನುಭವಿಗಳು ಪಡೆದುಕೊಳ್ಳಿ ಎಂದು ಮಾತನಾಡಿದ ವಕೀಲ ರಮೇಶ ಸೋಲಾರಗೊಪ್ಪ.

ಗ್ರಾಪಂ ನಿಕಟ ಪೂರ್ವ ಅಧ್ಯಕ್ಷ ಲಿಂಗರೆಡ್ಡಿ ನಡುವಿನಮನಿ ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರು ಸಾವಲಂಬಿ ಜೀವನ ಕಟ್ಟಿಕೊಳ್ಳಲು ಗ್ರಾಮ ಪಂಚಾಯಿತಿ ಮೂಲಕ ವಿತರಿಸಿರುವ ಹೊಲಿಗೆ ಯಂತ್ರಗಳ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಕರೆ ನೀಡಿದರು. ಮುಕ್ಕಲ ಗ್ರಾಪಂ ವ್ಯಾಪ್ತಿಯ ಹುಣಸಿಕಟ್ಟಿ, ಬಿದರಗಡ್ಡಿ, ಗ್ರಾಮಗಳ ಒಟ್ಟು 135 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು.

ಈ ವೇಳೆ ಪಿಡಿಓ ನಾಗರಾಜ ಬಿದರಳ್ಳಿ ಗ್ರಾಪಂ ಅಧ್ಯಕ್ಷೆ ಸರೋಜಾ ಬಡಿಗೇರ ಉಪಾಧ್ಯಕ್ಷೆ ಯಲ್ಲವ್ವ ಓಲೆಕಾರ್ ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಂಜುನಾಥ್ ಧನಿಗೊಂಡ ಉಪಾಧ್ಯಕ್ಷ ವೀರಭದ್ರಯ್ಯ ನಡುವಿನಮನಿ, ಎಸ್ ಟಿ ತೆಗ್ಗಿಹಳ್ಳಿ, ಸಿದ್ದು ಹಿರೇಮಠ್, ಸಹದೇವ ಹೊರಕೇರಿ, ಸುಭಾಷ್ ಗೌಡ ಪಾಟೀಲ್ ಮುತ್ತಪ್ಪ ಅಂಗಡಿ ಕಲ್ಲಪ್ಪ ಗಾಡಗೋಳಿ, ಫಕೀರಪ್ಪ ಬಾಲಪ್ಪನವರ ಮಂಜುಳಾ ಹರಿಜನ, ಜ್ಯೋತಿ ಗಾಡಗೋಳಿ, ಶ್ರೀಕಾಂತ್ ಪಾಟೀಲ, ನಿಂಗಪ್ಪ ಕಲಕಟ್ಟಿ ಸೇರಿದಂತೆ ಗ್ರಾಪಂ ಸಿಬ್ಬಂದಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

DIVERSION OF TRAINS/ರೈಲುಗಳ ಮಾರ್ಗ ಬದಲಾವಣೆ

eNewsLand Team

17ರಂದು ರೈಲ್ವೇ ವೇಳಾ ಪಟ್ಟಿ ಬದಲಾವಣೆ: ಪ್ರಯಾಣಿಕರು ಗಮನಿಸಿ

eNEWS LAND Team

ಪಠ್ಯದ ಜೊತೆಗೆ ಪಠ್ಯೇತರ ಚಟುವಟಕೆ ಅವಶ್ಯ: ಡಾ.ಮೋತಿಲಾಲ್ ರಾಠೋಡ

eNewsLand Team