30 C
Hubli
ಮೇ 20, 2024
eNews Land
ಸಣ್ಣ ಸುದ್ದಿ

ಅಣ್ಣಿಗೇರಿ ಗಾಣಿಗ ಸಮುದಾಯ ಟ್ರಸ್ಟ್ ಭೂಮಿಪೂಜೆ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ: 21ಲಕ್ಷ ಭರವಸೆ

ಇಎನ್‌ಎಲ್ ಅಣ್ಣಿಗೇರಿ: ಅಣ್ಣಿಗೇರಿ ತಾಲೂಕ ಗಾಣಿಗ ಸಮುದಾಯ  ಭವನ ನಿರ್ಮಾಣಕ್ಕೆ 21 ಲಕ್ಷ ರೂಗಳ ಅನುದಾನ ನೀಡುವ ಭರವಸೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನೀಡಿದರು.

ಪಟ್ಟಣದ ದಿ. ಎಸ್.ಎಂ.ಪಾಟೀಲ ಸಭಾಭವನದಲ್ಲಿ ತಾಲೂಕ ಗಾಣಿಗ ಸಮಾಜ ಟ್ರಸ್ಟ್ನಿಂದ ಅಯೋಜಿಸಿದ ಭೂಮಿ ಪೂಜೆ, ಪ್ರತಿಭಾ ಪುರಸ್ಕಾರ, ನೂತನವಾಗಿ ಆಯ್ಕೆಯಾದ ಶಾಸಕ ಸಚಿವರಿಗೆ ಸನ್ಮಾನ ಕಾರ್ಯಕ್ರಮ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಂತರ ಮಾತನಾಡಿ, ಇವನಾರವ ಇವರಾರವ ಎನ್ನದೇ ಇವನಮ್ಮವ ಇವನಮ್ಮವ ಎಂಬುದನ್ನು ಅರಿತು ಗಾಣಿಗ ಸಮುದಾಯವು ಸಮಾಜದಲ್ಲಿ ಒಗ್ಗಟ್ಟಿನಿಂದ ಉತ್ತಮವಾದ ಸಂಘಟನೆ ಕಾರ್ಯಗಳು, ಹಮ್ಮಿಕೊಂಡು ಪ್ರೀತಿ ವಿಶ್ವಾಸ, ನಡೆ, ನುಡಿ, ಬೆಂಬಲ, ಗೌರವಿಸುವ ಮೂಲಕ ಕಾರ್ಯ ಚಟುವಟಿಕೆ ಮುಖಾಂತರ ಸಮಾಜಕ್ಕೆ ಮಾದರಿಯಾಗಬೇಕೆಂದರು. ಅಣ್ಣಿಗೇರಿ ತಾಲೂಕಿನಲ್ಲಿ ಗಾಣಿಗ ಸಮಾಜದ ನೂತನ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಈಗಾಗಲೇ ಭೂಮಿ ಖರೀದಿಸಿದ್ದು  ಸಮಾಜ ಬೆಳವಣಿಗೆಗೆ ಕಾರಣವಾಗಿರೋದು ಶ್ಲಾಘನೀಯ ಎಂದರು.

ನಾನು ದುಡಿದ ಹಣದಿಂದ ಕಲ್ಯಾಣ ಮಂಟಪ ನಿರ್ಮಾಣಕ್ಕೆ 21 ಲಕ್ಷ ರೂಗಳ ಅನುದಾನ ನೀಡುವ ಭರವಸೆ ಕೊಟ್ಟರು. ನನ್ನಂತೆ ಸಮಾಜದ ಮುಖಂಡರು ಕಲ್ಯಾಣ ಮಂಟಪ ನಿರ್ಮಾಣಕ್ಕೆ ತನು-ಮನ-ಧನ ಸಹಾಯ ನೀಡಬೇಕೆಂದರು. ಸಮಾಜ ಭಾಂದವರು ತಮ್ಮ ದುಡಿಮೆಯಲ್ಲಿ ಸ್ವಲ್ಪ ಧನಸಹಾಯ ಸಮಾಜಕ್ಕೆ ಮಿಸಲೀಡಬೇಕೆಂದರು.

ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ ಗಾಣಿಗ ಸಮಾಜದ ಶ್ರೇಯೋಭಿವೃದ್ಧಿಗೆ ನಾನು ಪ್ರಾಮಾಣಿಕವಾಗಿ ಶ್ರಮಿಸುವೆ. ಈಗಾಗಲೇ ಸಮಾಜಕ್ಕೆ ಒಂದು ಎಕರೆ ಭೂಮಿ ಖರೀದಿಸಲು 10ಲಕ್ಷ ರೂಗಳು ಅನುದಾನ ನೀಡಿರುವೆ. ಸಮಾಜದ ಆರ್ಶೀವಾದದಿಂದ ಶಾಸಕನಾಗಿರುವೆ. ಯಾವತ್ತೂ ಗಾಣಿಗ ಸಮುದಾಯ ಮರೆಯುವುದಿಲ್ಲ. ನೂತನವಾಗಿ ನಿರ್ಮಾಣಗೊಳ್ಳಲಿರುವ ಕಲ್ಯಾಣ ಮoಟಪ ಜಿಲ್ಲೆಯಲ್ಲಿಯೇ ಮಾದರಿಯಾಗಿರಬೇಕು. ಅದಕ್ಕೆ ಬೇಕಾದ ಸಹಕಾರ ಸಹಾಯ ನೀಡುವುದಾಗಿ ಹೇಳಿದರು.

ಸಾನಿಧ್ಯವಹಿಸಿದ ಹುಲಗಿ ಗುರುಬಸವೇಶ್ವರ ಮಠದ ಮಹಾಂತ ಬಸವಲಿಂಗ ಶ್ರೀಗಳು ಮಾತನಾಡಿ, ತಾಲೂಕಿನಲ್ಲಿ ಗಾಣಿಗ ಸಮಾಜ ಸಂಘಟನೆ ಮಾಡಿ ಸಮಾಜ ಒಳತಿಗೆ ಉತ್ತಮ ಕಾರ್ಯಗಳನ್ನು ಮಾಡುತ್ತಿರೋದು ಶ್ಲಾಘನೀಯ. ಸಮಾಜದ ಅಭಿವೃದ್ಧಿಗೆ ಕೈಗೊಂಡ ಕಾರ್ಯಗಳು ಜನಮನದಲ್ಲಿ ಉಳಿದು ಬೆಳೆಸುವಂತಾಗಬೇಕು. ಸಮಾಜದ ಬಡಕುಟುಂಬದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ ಉನ್ನತ ವ್ಯಕ್ತಿಗಳನ್ನಾಗಿ ರೂಪಿಸಿದರೇ ಸಮಾಜದ ದೇಶದ ಆಸ್ತಿಯಾಗಿ ಬೆಳೆಯಲು ಸಾಧ್ಯವೆಂದರು.

ಗಾಣಿಗ ಸಮುದಾಯ ಭವನ ನಿರ್ಮಾಣಕ್ಕೆ 1 ಎಕರೆ ಜಮೀನು ಭೂದಾನಿ ನಾಗರತ್ನಾ ಸೋಮಶೇಖರ ಅಭ್ಬಿಗೇರಿ ಅವರಿಗೆ ಸನ್ಮಾನಿಸಲಾಯಿತು. ಹಾಗೂ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕರಿಸಲಾಯಿತು. ಹಾಗೂ ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ಕುಂದಗೋಳ ಶಾಸಕ ಎಮ್.ಆರ್.ಪಾಟೀಲ, ಅಥಣಿ ಶಾಸಕ ಲಕ್ಷ್ಮಣ ಸವದಿ, ಅವರಿಗೆ ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಅಣ್ಣಿಗೇರಿ ತಾಲೂಕ ಗಾಣಿಗ ಸಮಾಜ ಟ್ರಸ್ಟ್ ಅಧ್ಯಕ್ಷ ನಾಗಪ್ಪ ಗಾಣಿಗೇರ ವಹಿಸಿದ್ದರು.

ಈ ವೇಳೆ ಗದಗ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ನೀಲಮ್ಮತಾಯಿ ಅಸುಂಡಿ, ಹುಧಾಮಪಾ ಸದಸ್ಯ ತಿಪ್ಪಣ್ಣ ಮಜ್ಜಿಗಿ, ರಾಜುಗೌಡ ಪಾಟೀಲ, ವಿರುಪಾಕ್ಷಪ್ಪ ಮೇಟಿ. ಸುರೇಶ ಗಾಣಿಗೇರ, ವಿರುಪಾಕ್ಷಪ್ಪ ಸೊಟಕನಾಳ, ಶಿವಣ್ಣ ಮಾಡೊಳ್ಳಿ, ರೇವಣ್ಣಪ್ಪ ಅಂಕಲಿ, ನಾಗಪ್ಪ ಸೊಟಕನಾಳ, ಜಗದೀಶ ಚವಡಿ, ಗಂಗಾಧರ ಗಾಣಿಗೇರ, ಅಶೋಕ ಮಜ್ಜಿಗುಡ್ಡ, ಅಜ್ಜಪ್ಪ ಮೇಟಿ, ಜಗದೀಶ ಗಾಣಿಗೇರ, ತಾಲೂಕಿನ ಗಾಣಿಗ ಸಮುದಾಯ ಮುಖಂಡರು ಉಪಸ್ಥಿತರಿದ್ದರು. 

Related posts

ಅಣ್ಣಿಗೇರಿ: ಪುರಸಭೆ ಬಜೆಟ್ ಪೂರ್ವಭಾವಿ ಸಭೆ ಫೆ.18ಕ್ಕೆ

eNEWS LAND Team

ಸಂಶಿ ಬಸ್ ನಿಲ್ದಾಣದಲ್ಲಿ ದಿಢೀರ್ ಪ್ರತಿಭಟನೆ

eNEWS LAND Team

ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನಕ್ಕೆ ಭೂಮಿಪೂಜೆ

eNEWS LAND Team