ಮೇ 3, 2024
eNews Land
ಜಿಲ್ಲೆ ಸುದ್ದಿ

ಚುನಾವಣಾ ಕರ್ತವ್ಯ ಲೋಪ;  ಹು.ಧಾ ಪೂರ್ವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿ ಮತಗಟ್ಟೆ ಅಧಿಕಾರಿ ನವೀನ ಸೂರ್ಯವಂಶಿರನ್ನು ಅಮಾನತ್ತುಗೊಳಿಸಿ ಡಿಸಿ ಆದೇಶ

ಇದನ್ನು ಓದಿ: ನೀರಿನಲ್ಲಿ ಮುಳುಗಿದ ರೈಲ್ವೇ ಬೋಗಿಗಳಿಂದ ಪಾರುಗಾಣಿಕಾ ಮತ್ತು ಮರುಪಡೆಯುವಿಕೆಗಾಗಿ ವಿಶೇಷ ತರಬೇತಿ

ಇಎನ್ಎಲ್ ಧಾರವಾಡ : 72-ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಭಾಗ ಸಂಖ್ಯೆ 94 ರ ಮತಗಟ್ಟೆ ಅಧಿಕಾರಿಯಾಗಿದ್ದ ನವೀನ ಡಿ. ಸೂರ್ಯವಂಶಿ ಅವರು ಚುನಾವಣಾ ಕರ್ತವ್ಯ ನಿರ್ವಹಣೆಯಲ್ಲಿ ನಿಷ್ಕಾಳಜಿ ತೋರಿ, ಕಾರ್ಯಲೋಪ ಮಾಡಿರುವುದರಿಂದ ತಕ್ಷಣ ಸರಕಾರಿ ಸೇವೆಯಿಂದ ಅವರನ್ನು ಅಮಾನತ್ತುಗೊಳಿಸಿ, ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಇಂದು ಆದೇಶ ಹೊರಡಿಸಿದ್ದಾರೆ.

ಇದನ್ನು ಓದಿ: ಅಮೂಲ್ ಜೊತೆ ನಂದಿನಿ ವಿಲೀನ ಪ್ರಸ್ತಾಪವೇ ಇಲ್ಲ: ಸಚಿವ ಎಸ್.ಟಿ.ಸೋಮಶೇಖರ್

ನವೀನ್ ಸೂರ್ಯವಂಶಿ ಅವರು 2023 ರ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಕೆಲಸಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸಿ ಕರ್ತವ್ಯಲೋಪ ಮಾಡಿದ್ದಲ್ಲದೇ, ಸಕಾಲಕ್ಕೆ ಮಾಹಿತಿ, ದಾಖಲೆಗಳನ್ನು ನೀಡದೇ ಚುನಾವಣಾ ಕಾರ್ಯಕ್ಕೆ ತೊಂದರೆಯುಂಟು ಮಾಡಿದ್ದಾರೆ. ಪ್ರಜಾಪ್ರತಿನಿಧಿ ಕಾಯ್ದೆ 1951 ರ ಕಲಂ 134 ಉಲ್ಲಂಘನೆ ಮಾಡಿದ್ದರಿಂದ ಅವರನ್ನು ಸರಕಾರಿ ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಲಾಗಿದೆ.

ಇದನ್ನು ಓದಿ: ಅಮೂಲ್ ಜೊತೆ ನಂದಿನಿ ವಿಲೀನ ಪ್ರಸ್ತಾಪವೇ ಇಲ್ಲ: ಸಚಿವ ಎಸ್.ಟಿ.ಸೋಮಶೇಖರ್

ಅಮಾನತ್ತು ಅವಧಿಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ಅನ್ವಯ ಜೀವನಾಂಶ ಭತ್ಯೆ ಪಡೆಯಲು ಅರ್ಹರಿದ್ದು, ತಮ್ಮ ಕಚೇರಿ ಮುಖ್ಯಸ್ಥರ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡಬಾರದೆಂದು  ಜಿಲ್ಲಾಧಿಕಾರಿಗಳು ಆಗಿರುವ  ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: ಕಿಚ್ಚ ಸುದೀಪ್‍ಗೆ ಅವಮಾನ ಮಾಡಿದ ಕಾಂಗ್ರೆಸ್, ಜೆಡಿಎಸ್‍ಗೆ ಪ್ರಜ್ಞಾವಂತ ಜನರಿಂದ ತಕ್ಕ ಉತ್ತರ: ಗೌರವ್ ಭಾಟಿಯಾ

Related posts

ಹುಬ್ಬಳ್ಳಿಲಿ ಧಗಧಗನೆ ಉರಿದ ಕಾರು! ಪ್ರಯಾಣಿಕರ ಕತೆ?

eNewsLand Team

ಜಲಜೀವನ್ ಮಿಷನ್ ಯೋಜನೆ- ದೂರದೃಷ್ಟಿಯಿಂದ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ:ಸಂಸದ ಶಿವಕುಮಾರ ಉದಾಸಿ

eNEWS LAND Team

ಅಣ್ಣಿಗೇರಿಯಲ್ಲಿ ಸಂಭ್ರಮದ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

eNEWS LAND Team