37 C
Hubli
ಮೇ 5, 2024
eNews Land
ಆಧ್ಯಾತ್ಮಿಕ

ಇಂದು ವೈಕುಂಠ ಏಕಾದಶಿ; ರಾಜ್ಯಾದ್ಯಂತ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ

ಇಎನ್ಎಲ್ ಬೆಂಗಳೂರು:

ಪುಷ್ಯ ಮಾಸದ ಶುಕ್ಲ ಪಕ್ಷ ಸೋಮವಾರ ಬಂದಿರುವ ವರ್ಷದ ಮೊದಲ ಹಬ್ಬ ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವೆಂಕಟೇಶ್ವರ ಸ್ವಾಮಿ ದೇವಾಲಯಗಳು ವಿಶೇಷ ಪೂಜೆ ಹಾಗೂ ಉತ್ಸವಗಳಿಗೆ ಸಜ್ಜಾಗಿವೆ.
ವೈಕುಂಠ ದ್ವಾರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರೆ, ಇತ್ತ ಭಕ್ತರು ದೇವರ ದರ್ಶನ ಪಡೆಯಲು ಕಾತರದಿಂದ ಕಾಯುತ್ತಿದ್ದಾರೆ.
ಈ ಶುಭ ದಿನದಂದು ವೈಕುಂಠದ ಉತ್ತರದ ಬಾಗಿಲಿನ ಮೂಲಕ ಶ್ರೀಮನ್ನಾರಾಯಣ ದೇವರು ಮೂರು ಕೋಟಿ ದೇವಾನುದೇವತೆಗಳಿಗೆ ದರುಶನ ನೀಡಿದನು ಎಂಬ ಪ್ರತೀತಿ ಇದೆ.  ಹಾಗಾಗಿ ಈ ದಿನದಂದು ವಿಷ್ಣು ದೇವಾಲಯಗಳಲ್ಲಿ ವೈಕುಂಠ ದ್ವಾರವನ್ನು ನಿರ್ಮಿಸಿ, ಭಕ್ತರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಬೆಂಗಳೂರು ನಗರದ ಕೋಟೆ ವೆಂಕಟೇಶ್ವರಸ್ವಾಮಿ ದೇವಾಲಯ, ವೈಯಾಲಿಕಾವಲ್‌ನ ಟಿಟಿಡಿ, ರಾಜಾಜಿನಗರ ಹಾಗೂ ವಸಂತಪುರದ ಇಸ್ಕಾನ್ ದೇವಾಲಯಗಳು, ಮಹಾಲಕ್ಷ್ಮೀ ಲೇಔಟ್‌ನ ಶ್ರೀನಿವಾಸ ದೇವಸ್ಥಾನ, ಶ್ರೀನಿವಾಸನಗರದ ಲಕ್ಷ್ಮೀವೆಂಕಟೇಶ್ವರ ದೇವಾಲಯ, ಜೆ.ಪಿ.ನಗರ ತಿರುಮಲಗಿರಿ ಲಕ್ಷ್ಮೀವೆಂಕಟೇಶ್ವರಸ್ವಾಮಿ ದೇವಸ್ಥಾನ, ಮಾಗಡಿ ರಸ್ತೆಯ ಎಂ.ಜಿ.ರೈಲ್ವೆ ಕಾಲೊನಿಯ ವೆಂಕಟೇಶ್ವರಸ್ವಾಮಿ ದೇವಸ್ಥಾನ ಸೇರಿ ನಗರದಾದ್ಯಂತ ವಿಷ್ಣು ದೇವಾಲಯಗಳಲ್ಲಿ ಸಿದ್ಧತೆ ಭರದಿಂದ ಸಾಗಿದೆ.
<span;>ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ವೆಂಕಟೇಶ್ವರ ಸ್ವಾಮಿ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ವೈಕುಂಠ ದ್ವಾರದ ಪೂಜೆ, ಅಷ್ಟೋತ್ತರ ಶತನಾಮಾವಳಿ ಸೇವೆ, ಮಂತ್ರ ಪುಷ್ಪ ಸೇವೆ, ಅಷ್ಟಾವಧಾನ ಸೇವೆಗಳನ್ನು ನಡೆಯಲಿದ್ದು, ಕೀರ್ತನೆ, ದೇವರನಾಮ ಗಾಯನ ಸೇರಿ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಏಕಾದಶಿ ಉಪವಾಸ:
ಏಕಾದಶಿಯಂದು ವಿಷ್ಣು ಭಕ್ತರು ಉಪವಾಸ ನಡೆಸುತ್ತಾರೆ. ಇದರಿಂದ ದೇವರ ಅನುಗ್ರಹದೊಂದಿಗೆ ಹೆಚ್ಚು ಲ ದೊರೆಯಲಿದೆ ಎಂಬ ನಂಬಿಕೆ ಭಕ್ತರದು. ಕೆಲವರೂ ಪೂರ್ಣ ಪ್ರಮಾಣದಲ್ಲಿ ಉಪವಾಸ ಮಾಡಿದರೆ, ಆರೋಗ್ಯ ಸಮಸ್ಯೆ ಇರುವವರು ಎಳನೀರು ಸೇರಿದಂತೆ ದ್ರವಾಹಾರ ಸೇವಿಸಿ ವ್ರತ ಆಚರಿಸುತ್ತಾರೆ.

ಇಸ್ಮಾನ್ ಬೆಂಗಳೂರು ಸಂಸ್ಥೆಯು 2023 ವರ್ಷದ ಮೊದಲನೆಯ ಹಬ್ಬ ವೈಕುಂಠ ಏಕಾದಶಿಯನ್ನು ಜನವರಿ 2, 2023 ರಂದು ಹರೇ ಕೃಷ್ಣ ಗಿರಿ ಮತ್ತು ವೈಕುಂಠ ಗಿರಿಯಲ್ಲಿ ಆಚರಿಸಲಾಗುವುದು. ಅತ್ಯಂತ ಪುಮುಖ ಉತ್ಸವಗಳಲ್ಲಿ ಒಂದಾದ ಈ ದಿನದಂದು ಭಕ್ತರು ವೈಕುಂಠ ದ್ವಾರ ಪ್ರವೇಶಿಸಲು ದೇವಸ್ಥಾನಕ್ಕೆ ಬರುತ್ತಾರೆ. ವೈಕುಂಠ ದ್ವಾರವನ್ನು ವರ್ಷಕ್ಕೊಮ್ಮೆ ಮಾತ್ರ ತೆರೆಯಲಾಗುತ್ತದೆ. ಮತ್ತು ಈ ದಿನದಂದು ಯಾರು ವೈಕುಂಠ ದ್ವಾರವನ್ನು ಪುವೇಶಿಸುವರೋ, ಅವರು ಶ್ರೀ ವಿಷ್ಣುವಿನ ಪರಂಧಾಮ ಪಡೆಯುವರು ಎಂದು ನಂಬಲಾಗಿದೆ.

ಹರೇ ಕೃಷ್ಣ ಗಿರಿಯಲ್ಲಿನ ಶ್ರೀನಿವಾಸ ದೇವರಿಗೆ ಬೆಳಗ್ಗೆ 3ಕ್ಕೆ ಸಲ್ಲುವ ಸುಪುಭಾತ ಸೇವೆಯೊಂದಿಗೆ ಇಸ್ಕಾನ್ ಬೆಂಗಳೂರಿನಲ್ಲಿ ವೈಕುಂಠ ಏಕಾದಶಿ ಉತ್ಸವ ಪ್ರಾರಂಭವಾಗುತ್ತದೆ. ಲಕ್ಷಾರ್ಚನೆ ಸೇವೆ, ಕಲ್ಯಾಣೋತ್ಸವ ಸೇವೆ ಇತ್ಯಾದಿ ಸೇವೆಗಳು ಇಡೀ ದಿನ ನಡೆಯುತ್ತವೆ. ಲೋಕ ಕಲ್ಯಾಣಾರ್ಥಕ್ಕಾಗಿ, ಸಕಲ ಸನ್ಮಂಗಳಿಗಾಗಿ ದೇವರಿಗೆ ವಿಶೇಷ ಪೂಜೆಗಳನ್ನು ಅರ್ಪಿಸಲಾಗುವುದು. ಬೆಳಗ್ಗೆ 8 ರಿಂದ ದೇವಸ್ಥಾನವು ಸಾರ್ವಜನಿಕರಿಗಾಗಿ ತೆರೆದಿರುತ್ತದೆ.

ವಸಂತಪುರದಲ್ಲಿ ಹೊಸದಾಗಿ ತೆರೆದಿರುವ ಇಸ್ಕಾನ್ ಶ್ರೀ ರಾಜಾಧಿರಾಜ ದೇವಾಲಯದಲ್ಲಿ ಇದೇ ಮೊದಲ ಬಾರಿಗೆ ವೈಕುಂಠ ಏಕಾದಶಿ ಆಚರಿಸಲಾಗುವುದು. ದೇವರು ಹೊಸ ವಸ್ತ್ರಾಭರಣ, ಪರಿಮಳಯುತ ಪುಷ್ಪ ಹಾರಗಳಿಂದ ಅಲಂಕೃತರಾಗಿರುವರು.

ಇಸ್ಕಾನ್ ಬೆಂಗಳೂರು ಅಧ್ಯಕ್ಷ ಶ್ರೀ ಮಧು ಪಂಡಿತ ದಾಸ ನುಡಿದರು, ‘ವೈಕುಂಠ ಏಕಾದಶಿಯಂದು ಸ್ವತಃ ದೇವರೇ ತನ್ನು ದೇವಸ್ಥಾನದ ಬಾಗಿಲಿಗೆ ಬಂದು ತನ್ನ ಭಕ್ತರನ್ನು ಬರಮಾಡಿಕೊಳ್ಳುವನು. ಈ ಬಾರಿ ಮೊದಲನೆಯ ಸಲ ಶ್ರೀ ರಾಜಾಧಿರಾಜ ಗೋವಿಂದ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಆಚರಿಸುತ್ತಿರುವುದು ವಿಶೇಷ. ಭಗವಂತನು ಎಲ್ಲರಿಗೂ ಸುಖ ಶಾಂತಿ, ಆರೋಗ್ಯ, ಮತ್ತು ಭಕ್ತಿಯನ್ನು ದಯಪಾಲಿಸಲಿ ಎಂದು ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ.’

ದರ್ಶನಕ್ಕಾಗಿ ದೇವಸ್ಥಾನ ಭೇಟಿ ಮಾಡುವಾಗ, ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸಬೇಕು ಎಂದು ನಾವು ಭಕ್ತರಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಜಗತ್ತಿನಾದ್ಯಂತ ಭಕ್ತರ ಸೌಲಭ್ಯಕ್ಕಾಗಿ ಉತ್ಸವಗಳನ್ನು ದೇವಸ್ಥಾನದ ವೆಬ್ ಸೈಟ್ ನಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡಲಾಗುವುದು.

Related posts

ಭಾರತ ದೇಶದ ಆತ್ಮ ಆಧ್ಯಾತ್ಮ ಧರ್ಮ: ಬಿ.ವೈ.ವಿಜಯೇಂದ್ರ

eNEWS LAND Team

ಸ್ಥಾವರದ ಹಂಗಿಲ್ಲದ ಜಂಗಮನ ದರ್ಶನಕ್ಕೆ ಭಕ್ತಸಾಗರ

eNEWS LAND Team

ಡಾ. ಅಭಿನವ ಅನ್ನದಾನೇಶ್ವರ ಶ್ರೀಗಳು ಲಿಂಗೈಕ್ಯ

eNewsLand Team