25.5 C
Hubli
ಏಪ್ರಿಲ್ 27, 2024
eNews Land
ಆಧ್ಯಾತ್ಮಿಕ ಸುದ್ದಿ

ಭಾರತ ದೇಶದ ಆತ್ಮ ಆಧ್ಯಾತ್ಮ ಧರ್ಮ: ಬಿ.ವೈ.ವಿಜಯೇಂದ್ರ

ಇಎನ್‌ಎಲ್‌ಅಣ್ಣಿಗೇರಿ: ಪ್ರತಿವ್ಯಕ್ತಿಯಲ್ಲಿ ಆತ್ಮವಿದೆ. ದೇಶಕ್ಕೂ ಆತ್ಮವಿದೆ. ಸಕಲ ಜೀವರಾಶಿಗಳಲ್ಲೂ ಆತ್ಮವಿದೆ. ಆತ್ಮವಿಲ್ಲದ ಜೀವರಾಶಿಯಿಲ್ಲ. ಭಾರತ ದೇಶದ ಆತ್ಮ ಆಧ್ಯಾತ್ಮ, ಧರ್ಮ, ಜಗತ್ತಿನ ಇನ್ನಿತರ ದೇಶಗಳಿಗೆ ಆತ್ಮವಿದೆ. ಎಲ್ಲಿಯವರೆಗೂ ಧರ್ಮ ನಮ್ಮ ದೇಶದಲ್ಲಿರುವುದೋ ಅಲ್ಲಿಯವರೆಗೆ ನಮ್ಮ ದೇಶಕ್ಕೆ ಎನು ಆಗುವುದಿಲ್ಲ. ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಇದನ್ನೂ ಓದಿ:ಬಸವಣ್ಣನವರ ಚಿಂತನೆಗಳಲ್ಲಿ ಜಗತ್ತಿನ ಅನಿಷ್ಟಗಳನ್ನು ಹೊಗಲಾಡಿಸುವ ಶಕ್ತಿಯಿದೆ

ತಾಲೂಕಿನ ಮಣಕವಾಡ ಗ್ರಾಮದ ಅಜ್ಜನ ಸಂಭ್ರಮದ ಸಮಾರೋಪ ಸಮಾರಂಭ ಹಾಗೂ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದನ್ನೂ ಓದಿ:ಅರಿದೊಡೆ ಶರಣ : ಮರೆದೊಡೆ ಮಾನವ

ನಮ್ಮ ದೇಶದಲ್ಲಿ ಅವಧೂತರು, ಸತ್ಪುರಷರು, ಬಸವಾದಿ ಶರಣರು, ಸಂತರು ಮಹಾತ್ಮರು, ದಾಸರು, ಯತಿವರ್ಯರು, ಸಮಾಜ ಅದೋಗತಿಯತ್ತ ಸಾಗಿತ್ತಿರುವಾಗ ದೇಶ, ಸಮಾಜ, ಧಾರ್ಮಿಕ ಸಂಪ್ರದಾಯ, ಪರಂಪರೆ, ಪುಣ್ಯಕ್ಷೇತ್ರಗಳಲ್ಲಿ ಬಿತ್ತಿ ಬೆಳೆಸಿದ್ದು ನಮ್ಮ ಸೌಭಾಗ್ಯವೆಂದರು.

ಇದನ್ನೂ ಓದಿ:ಸರಿಯಾದ ಮಾರ್ಗದಲ್ಲಿ ನಡೆಯೋದು ಯೋಗ: ವಚನಾನಂದಶ್ರೀ

ಈ ಕ್ಷೇತ್ರದ ಮಠದ ಅಭಿವೃದ್ಧಿ, ಲಕ್ಷಂತಾರ ಭಕ್ತರು ನಂಬಿಕೆಗೆ ಪೂಜ್ಯ ಮೃತ್ಯುಂಜಯ ಶ್ರೀಗಳ ಕ್ಷೇತ್ರ ಪ್ರವಾಸೋದ್ಧಮ ಕ್ಷೇತ್ರವನ್ನಾಗಿ ಮಾಡುವಲ್ಲಿ ಶ್ರೀಗಳು ಆಕಾಂಕ್ಷೆಯ ಬೇಡಿಕೆಗೆ ಸರ್ಕಾರ ಅನುದಾನ ಕಲ್ಪಿಸಬೇಕೆಂದರು.

ಇದನ್ನೂ ಓದಿ:ಮಾಡುವಂತಿರಬೇಕು ಮಾಡದಂತಿರಬೇಕು, ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು.

ಉತ್ತರ ಕರ್ನಾಟಕ ಭಾಗದಲ್ಲಿ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಗಳು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದೆ ಕೊಡುಗೆ ಅಪಾರ. ರೈತ ಪರ ಹೋರಾಟಕ್ಕೆ ನಾಡಿನಾದ್ಯಂತ ಸಂಚರಿಸಿ ಸರ್ವ ಜನಾಂಗದ ಪ್ರೀತಿ ವಿಶ್ವಾಸ, ನಂಬಿಕೆ ಅರ್ಹರಾಗಿ, ಜನಪರ ಕಾರ್ಯಕ್ರಮಗಳನ್ನು ನಾಡಿಗೆ ಕೊಟ್ಟಿದ್ದಾರೆ.  ಆ ಹಿನ್ನಲೆಯಲ್ಲಿ ಜಗದೀಶ ಶೆಟ್ಟರ, ಬಸವರಾಜ ಬೊಮಾಯಿ, ಅಭಿವೃದ್ದಿ ಪಥದತ್ತ ಮುನ್ನಡೆಯುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪಕ್ಷ ಗಟ್ಟಿಯಾಗಿ ನೆಲೆ ಕಾಣಲು ಯಡಿಯೂರಪ್ಪನವ ಶ್ರಮದ ಫಲವಾಗಿ ಬಿಜೆಪಿ ಪಕ್ಷ ಬಲಿಷ್ಠವಾಗಿ ಉಳಿದಿದೆ ಎಂದರು.

ಇದನ್ನೂ ಓದಿ:ಅಂತರoಗದ ಪೂಜೆ, ಬಹಿರಂಗದ ವ್ಯವಹಾರದಲ್ಲಿ ವ್ಯಕ್ತವಾಗಬೇಕು.

ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ ಸೂರ್ಯ ಚಂದ್ರ ಇರುವರೆಗೂ ಅಜ್ಜನ ಸಂಭ್ರಮದ ಜಾತ್ರೆ ನಿರಂತರವಾಗಿ ಇರುತ್ತೆ. ಮಣಕವಾಡದ ತಪಸ್ವಿ ಲಿಂ.ಮೃತ್ಯುoಜಯ ಶ್ರೀಗಳ ಧರ್ಮದ ನೆಲೆ ಸೆಲೆಯಾಗಿ ಪಸರಿಸಿ ಭಕ್ತ ಸಮೂಹಕ್ಕೆ ಭಕ್ತಿ,ಜ್ಞಾನ, ಅನ್ನ ದಾಸೋಹ ಮೂಲಕ ಅನೇಕ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಅಭಿವೃದ್ದಿ ಕಾರ್ಯ ಕೈಗೊಂಡಿರೋದು ಶ್ಲಾಘನೀಯ.

ಇದನ್ನೂ ಓದಿ:ಶರಣ ಧರ್ಮದ-ಲಿಂಗಾಯತ ಧರ್ಮದ ತಿರುಳು: ವ್ಯಕ್ತಿಯ ನೈತಿಕ ಬದುಕಿನ ಹುರುಳು

ಮಠದ ಕಟ್ಟಡದ ಅಭಿವೃದ್ದಿಗೆ ಭಕ್ತ ಸಮೂಹ ನೀಡಿದ ಕೊಡುಗೆ ಜೊತೆ ಇನ್ನೊಂದು ಕೋಟಿ ಇಪ್ಪತ್ತು ಲಕ್ಷ ರೂಗಳ  ಅವಶ್ಯಕತೆಯಿದ್ದು, ಮುಂದಿನ ವರ್ಷ ಅಜ್ಜನ ಸಂಭ್ರಮ ಮಹೋತ್ಸವ ಬರುವುದರೊಳಗೆ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿ, ಚಾಲನೆ ನೀಡಬೇಕಿದೆ. ಸರ್ಕಾರ ಅನುದಾನ ಕಲ್ಪಸಿಬೇಕೆಂದು ಶ್ರೀಗಳ ಬೇಡಿಕೆಗೆ ಮುಖ್ಯಮಂತ್ರಿ ಗಮನಕ್ಕೆ ತಂದು ನೀಡುವ ಭರವಸೆ ಕೊಟ್ಟರು.

ಇದನ್ನೂ ಓದಿ:ಧರ್ಮದ  ಮಾನವೀಯ ಮೌಲ್ಯಗಳೇ ಸಮಾಜಕ್ಕೆ ಪೂರಕ: ಬಸವಲಿಂಗ ಶ್ರೀಗಳು

ಸಾನಿಧ್ಯವಹಿಸಿದ್ದ ಅಭಿನವ ಮೃತ್ಯುಂಜಯ ಶ್ರೀ, ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀ, ಸಿದ್ದರಹಳ್ಳಿ ಪಾರಮಾರ್ಥ ಗವಿಮಠದ ಮಲ್ಲಿಕಾರ್ಜುನ ಶ್ರೀ, ಅಕ್ಕಿಆಲೂರ ಮುತ್ತಿನಕಂತಿ ಮಠದ ಚಂದ್ರಶೇಖರ ಶ್ರೀ, ಕುಮಾರಪಟ್ಟಣದ ಜಗದೀಶ್ವರ ಶ್ರೀ ಆಶೀರ್ವಚನ ನೀಡಿದರು. ಸಂಕಲ್ಪ ಶೆಟ್ಟರ, ಮಂಜುನಾಥ ಅಮಾಸಿ, ಭೀಮಸಿಂಗ್ ರಾಠೋಡ, ಡಾ.ವಿನಯ್ ದೀಪಾಲಿ, ಡಾ.ಅಶೋಕ ಕಾಮತ, ಡಾ.ಕ್ರಾಂತಿಕಿರಣ, ಎಸ್.ಎಫ್. ನಿರಂಜನಗೌಡ್ರ, ಉಪಸ್ಥಿತರಿದ್ದರು. ತಾಲೂಕಿನ ಸದ್ಭಕ್ತರು, ಗ್ರಾಮ ಪಂ.ಸದಸ್ಯರು, ಪುರಸಭೆ ಸದಸ್ಯರು, ಗಣ್ಯಮಾನ್ಯರು, ಮಹಿಳೆಯರು, ಮಕ್ಕಳು, ಭಾಗವಹಿಸಿದ್ದರು. ಸರಿಗಮಪ ಹಾಗೂ ಕನ್ನಡದ ಕೋಗಿಲೆ ಖ್ಯಾತಿಯ ಸಂಗೀತ ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮಗಳು ಜರುಗಿದವು. 

ಇದನ್ನೂ ಓದಿ:ಬಿಎಸ್’ವೈ ಜಲರಕ್ಷಣೆ ನೀಡಿದ ಆಧುನಿಕ ಭಗೀರಥ: ಸಿಎಂ ಬೊಮ್ಮಾಯಿ

Related posts

ಕೊಚುವೇಲಿ-ಬೆಂಗಳೂರು ನಡುವೆ ವಿಶೇಷ ರೈಲು ಆರಂಭ

eNEWS LAND Team

ಅಂಧರ ಬಾಳಿಗೆ ಬೆಳಕಾದ ಲೂಯಿಸ್ ಬ್ರೈಲ್

eNewsLand Team

ಕರ್ನಾಟಕದಲ್ಲಿಂದು 27,156 ಕೊರೊನಾ ವೈರಸ್ ಪ್ರಕರಣಗಳು ಪತ್ತೆ!

eNEWS LAND Team