34 C
Hubli
ಮಾರ್ಚ್ 28, 2024
eNews Land
ಆಧ್ಯಾತ್ಮಿಕ

ಡಾ. ಅಭಿನವ ಅನ್ನದಾನೇಶ್ವರ ಶ್ರೀಗಳು ಲಿಂಗೈಕ್ಯ

ಗದಗ ಹಾಲಕೆರೆ ಮಠದ 12ನೇ ಪೀಠಾಧಿಪತಿಗಳು, ಬಾಗಲಕೋಟೆಯ ಬಾದಾಮಿ ಶಿವಯೋಗಿ ಮಂದಿರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು

ಇಎನ್ಎಲ್ ಬೆಂಗಳೂರು

ನಾಡಿನ ಪ್ರಸಿದ್ಧ ಗದಗ ಜಿಲ್ಲೆ ಗಜೇಂದ್ರಗಡದ ಹಾಲಕೆರೆಯ ಶ್ರೀ  ಅನ್ನದಾನೇಶ್ವರ ಸಂಸ್ಥಾನ ಮಠದ 12 ನೇ ಪೀಠಾಧಿಪತಿ ಡಾ. ಅಭಿನವ ಅನ್ನದಾನೇಶ್ವರ ಶ್ರೀಗಳು ಲಿಂಗೈಕ್ಯರಾಗಿದ್ದಾರೆ.

85 ವರ್ಷದ ಶ್ರೀಗಳು ಅನಾರೋಗ್ಯದಿಂದ ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಸೋಮವಾರ  ಲಿಂಗೈಕ್ಯರಾದರು.

ನಾಡಿನ ಪ್ರಸಿದ್ಧ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗಿ ಮಂದಿರದ ಟ್ರಸ್ಟ್ ನ ಅಧ್ಯಕ್ಷರಾಗಿದ್ದ ಸಂಗನಬಸವ ಶ್ರೀಗಳು ತ್ರಿವಿಧ ದಾಸೋಹಿಯಾಗಿದ್ದರು.
ತಮ್ಮ ಅವಧಿಯಲ್ಲಿ ನಾಡಿನ ಮಠಾಧೀಶರು, ರಾಷ್ಟ್ರ ಮಟ್ಟದ ರಾಜಕಾರಣಿಗಳ ಸಮ್ಮುಖದಲ್ಲಿ ಸಂಸ್ಥೆಯ ಶತಮಾನೋತ್ಸವ ನಡೆಸಿದ್ದರು. ಎಲ್.ಕೆ. ಅಡ್ವಾಣಿ, ಸೋನಿಯಾ ಗಾಂಧಿ ಸೇರಿದಂತೆ ಪ್ರಮುಖರು  ಶತಮಾನೋತ್ಸವಕ್ಕೆ ಆಗಮಿಸಿದ್ದರು.

ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಹೋರಾಟದ ವೇಳೆ ವೀರಶೈವ ಲಿಂಗಾಯತ ಧಮ೯ ಮುಂದುವರೆಸುವಂತೆ ಮಠಾಧೀಶರ ಸಭೆ ನಡೆಸಿ ಗಮನ ಸೆಳೆದಿದ್ದರು.

ಈಚೆಗೆ ನವಂಬರ್ 8,9,10 ರಂದು ಗುರುವಂದನೆ ಹಾಗೂ ತಮ್ಮ ಪೀಠ ಪರಂಪರೆಗೆ ನೂತನ ಪೀಠಾಧಿಪತಿಗಳ ಮತ್ತು ಪ್ಪಿನ ಬಸವಲಿಂಗ ದೇವರ ಚರ ಪಟ್ಟಾಧಿಕಾರವನ್ನು ಅದ್ಧೂರಿಯಾಗಿ ನಡೆಸಿದ್ದರು. ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆದಿಯಾಗಿ ನಾಡಿನ 250 ಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಿದ್ದರು.

‘ ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳ ಪಾರ್ಥೀವ ಶರೀರ ಸುಕ್ಷೇತ್ರ ಹಾಲಕೆರೆಗೆ  ಸಂಜೆ ಆಗಮಿಸುತ್ತಿದ್ದು ಇಂದು 7 ಗಂಟೆಯಿಂದ ಮಂಗಳವಾರ ಮಧ್ಯಾಹ್ನ 4 ಗಂಟೆಯವರೆಗೆ ಹಾಲಕೆರೆಯ ಮಠದ ಆವರಣದಲ್ಲಿ ಶ್ರೀಗಳ ಅಂತಿಮ ದರ್ಶನಕ್ಕೆ ಅವಕಾಶ ಇದೆ. ಭಕ್ತರು ಶಾಂತ ರೀತಿಯಿಂದ ಅಂತಿಮ ದರ್ಶನ ಪಡೆದು ಪುನೀತರಾಗಲು’ ಮಠವು ಪ್ರಕಟಣೆ ಮೂಲಕ ವಿನಂತಿಸಿದೆ.

ಹಾಲಕೆರೆ ಸಂಗನಬಸವ ಶ್ರೀಗಳ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

——-
ಬೆಂಗಳೂರು:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು   ಅಭಿನವ ಅನ್ನದಾನೇಶ್ವರ ಡಾ. ಸಂಗನಬಸವ ಮಹಾಸ್ವಾಮಿಗಳ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಹೊಸಪೇಟೆ, ಬಳ್ಳಾರಿಯ ಕೊಟ್ಟೂರು ಸ್ವಾಮಿಮಠ, ಶ್ರೀಠದ ಶಿವಯೋಗ ಮಂದಿರದ ಅಧ್ಯಕ್ಷರಾಗಿದ್ದ ಡಾ. ಅಭಿನವ ಅನ್ನದಾನ ಸ್ವಾಮೀಜಿಗಳು ಕಳೆದ ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ೮೫ ವರ್ಷ ವಯಸ್ಸಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ನಸುಕಿನಲ್ಲಿ ಲಿಂಗೈಕ್ಯರಾಗಿದ್ದಾರೆ. ಹಲವು ದಶಕಗಳ ಕಾಲ ಅವರು ಕನ್ನಡ ನಾಡು, ನುಡಿ, ಲಿಂಗಾಯತ ಧರ್ಮಕ್ಕೆ ಸಲ್ಲಿಸಿದ ಸೇವೆ ಅಪಾರ. ಅವರ ನಿಧನದಿಂದ ಅಪಾರ ಭಕ್ತ ಸಮೂಹ ಅನಾಥವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಅವರ ಭಕ್ತ ಸಮೂಹಕ್ಕೆ ನೀಡಲಿ ಎಂದು ಕೋರುತ್ತೇನೆ.

ಇತ್ತೀಚೆಗಷ್ಟೇ, ಕೆಲವೇ ದಿನಗಳ ಹಿಂದೆ ಹಾಲಕೆರೆ ಮಠದ ಸಮಾರಂಭದಲ್ಲಿ ಭಾಗವಹಿಸಿದ್ದೆ. ಶ್ರೀಗಳ ಆಶೀರ್ವಾದ ಪಡೆದಿದ್ದೆ. ಆದರೆ ಇಷ್ಟು ಬೇಗ ಅವರನ್ನು ಕಳೆದುಕೊಳ್ಳುತ್ತೇವೆ ಎಂಬ ಕಲ್ಪನೆ ಇರಲಿಲ್ಲ. ಅವರ ನಿಧನ ನನಗೆ ವೈಯಕ್ತಿಕವಾಗಿ ಬಹಳ ದುಃಖ ತರಿಸಿದೆ ಎಂದು ಮುಖ್ಯಮಂತ್ರಿ ಗಳು ಕಂಬನಿ ಮಿಡಿದಿದ್ದಾರೆ.

Related posts

ಬುದ್ಧ, ಬಸವ, ಅಂಬೇಡ್ಕರ್ ಮಹಾವೀರರು ಕಾಲಾತೀತರು:ಸಿಎಂ

eNewsLand Team

ಸ್ಥಾವರದ ಹಂಗಿಲ್ಲದ ಜಂಗಮನ ದರ್ಶನಕ್ಕೆ ಭಕ್ತಸಾಗರ

eNEWS LAND Team

ಭಾರತ ದೇಶದ ಆತ್ಮ ಆಧ್ಯಾತ್ಮ ಧರ್ಮ: ಬಿ.ವೈ.ವಿಜಯೇಂದ್ರ

eNEWS LAND Team