23 C
Hubli
ಮೇ 8, 2024
eNews Land
ಸುದ್ದಿ

ಅಣ್ಣಿಗೇರಿ ಸಾರ್ವಜನಿಕ ಕೇಂದ್ರ ಗ್ರಂಥಾಲಯ ಶಾಖೆ ಗ್ರಂಥಪಾಲಕರ ವರ್ಗಾವಣೆ ರದ್ದುಗೊಳಿಸಲು ಆಗ್ರಹ

ಇಎನ್ಎಲ್ ಅಣ್ಣಿಗೇರಿ: ಪಟ್ಟಣದ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕ ನಿವೃತ್ತ ಸೈನಿಕ ಯೋಧರಾದ ಕೆ.ಜಿ.ಮೂಲಮನಿ ಅವರನ್ನು ಕುಂದಗೋಳ ತಾಲೂಕ ಕೇಂದ್ರ ಗ್ರಂಥಾಲಯ ಶಾಖೆಗೆ ವರ್ಗಾವಣೆಗೊಳಿಸಿರುವುದನ್ನು ಖಂಡಿಸಿ, ಸಾರ್ವಜನಿಕರು ಅವರ ಪ್ರಾಮಾಣಿಕ ಕರ್ತವ್ಯ ಸೇವೆ ಇಲ್ಲಿಯೇ ಮುಂದುವರಿಸಬೇಕೆoದು ಆಗ್ರಹಿಸಿ, ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಯವರಿಗೆ ಮನವಿ ಕಳಿಸುವ ಮೂಲಕ ಆಗ್ರಹಿಸಿದ್ದಾರೆ.ಸಾರ್ವಜನಿಕ ಕೇಂದ್ರಿಯ ಗ್ರಂಥಾಲಯ ಸ್ವಂತ ಕಟ್ಟಡವಿದ್ದು, ಓದುಗರಿಗೆ ಗ್ರಂಥಾಲಯದಲ್ಲಿ ಕುಳಿತುಕೊಳ್ಳಲು ಕುರ್ಚಿ ಟೇಬಲ್, ಕುಡಿಯುವ ನೀರು, 37500 ಪುಸ್ತಕಗಳಿದ್ದು, ವಿದ್ಯುತ್ , ದಿನನಿತ್ಯದ ದಿನಪತ್ರಿಕೆಗಳು ಲಭ್ಯವಿದೆ. ಡಿಜೆಟಿಲ್ ಮೂಲಕ ಮೊಬೈಲ್ ಯಾಪ್ ಮುಖಾಂತರ ವಿದ್ಯಾರ್ಥಿಗಳಿಗೆ ತಮಗೆ ಬೇಕಾದ ಪುಸ್ತಕಗಳನ್ನು ಓದುವ ಇಲಾಖೆ ವ್ಯವಸ್ಥೆ ಅಳವಡಿಸಿದ್ದು, ಇಂಟರ್‌ನೆಟ್ ಕಲೆಕ್ಷನ್ 2 ಕಂಪ್ಯೂಟರ್‌ಗಳು ಬಳಕೆಗೆ ವಿದ್ಯಾರ್ಥಿಗಳಿಗೆ ಲಭ್ಯವಿದೆ. ಗ್ರಂಥಾಲಯ ಸುತ್ತಲೂ ಸಸಿಗಳನ್ನು ನೆಟ್ಟು ಸಸಿಗಳ ಪೋಷಣೆಯಲ್ಲಿ ಕಾರ್ಯತತ್ಪರಾಗಿ ಪರಿಸರ ಸಂರಕ್ಷಣೆ ಜಾಗೃತೆ ಮೂಡಿಸಿದ್ದಾರೆ.

ಸಾರ್ವಜನಿಕರು, ಶಾಲಾ ಕಾಲೇಜ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ಗ್ರಂಥಾಲಯದ ಸೌಲಭ್ಯ ಒದುಗಿಸುವಲ್ಲಿ ಅತ್ಯಂತ ನಿಷ್ಠೆ ಪ್ರಮಾಣಿಕತೆಯಿಂದ ಆಸಕ್ತಿ ತೋರಿದ ಪರಿಣಾಮ ಇಂದಿನ ಮೊಬೈಲ್ ಬಳಿಕೆಯಲ್ಲೂ ನಿತ್ಯ 4-5 ನೂರು ಜನರು ಓದುವ ಹವ್ಯಾಸವನ್ನು ಬೆಳಿಸುವಂತೆ ಕೆ.ಜಿ.ಮೂಲಮನಿ ಮಾಡಿರೋದು ಜನತೆ ಪ್ರೀತಿ ವಿಶ್ವಾಸಕ್ಕೆ ಕಾರಣಿಭೂತರಾಗಿದ್ದಾರೆ.
ಕೆ.ಜಿ.ಮೂಲಮನಿ ಅವರ ಸೇವೆ ಪಟ್ಟಣದಲ್ಲಿ ಮುಂದುವರಿಸಬೇಕೆoದು ಸಾರ್ವಜನಿಕರ ಬೇಡಿಕೆಯಾಗಿದ್ದು, ಅವರ ವರ್ಗಾವಣೆ ರದ್ದುಗೊಳಿಸಿ, ಅಣ್ಣಿಗೇರಿ ಕೇಂದ್ರಿಯ ಗ್ರಂಥಾಲಯದಲ್ಲಿ ಗ್ರಂಥಪಾಲಕರಾಗಿ ಕರ್ತವ್ಯ ಸಲ್ಲಿಸಲು ಇಲಾಖೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Related posts

ಮೋದಿ ಮೋದಿಯೇ ನೆಹರು ನೆಹರುನೇ‌ ಎಂದು ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟಾಂಗ್

eNEWS LAND Team

ಮುಖ್ಯಮಂತ್ರಿಗೆ ಕೃಷಿ ಬೆಲೆ ಆಯೋಗದ ವರದಿ ಸಲ್ಲಿಕೆ

eNewsLand Team

ಕೆನರಾ ಬ್ಯಾಂಕ ಸಂಯೋಗದಲ್ಲಿ ಅಣ್ಣಿಗೇರಿ ಕ್ಲಸ್ಟರ್-2 ಕ್ರೀಡಾಕೂಟ

eNEWS LAND Team