29.9 C
Hubli
ಮಾರ್ಚ್ 29, 2024
eNews Land
ಅಪರಾಧ

ಇಎನ್ಎಲ್ ಎಕ್ಸಕ್ಲೂಸಿವ್: ವಾಸ್ತು ಪುರುಷ ಮಟಾಶ್ ಹಿಂದಿನ ಮಸಲತ್ತಿನ ಇಂಚಿಂಚು ಇನ್ಫಾರ್ಮೇಶನ್!! ಸ್ಕೆಚ್, ಮಟಾಶ್

ಇಎನ್ಎಲ್ ಬೆಂಗಳೂರು: ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಇಂಚಿಂಚು ಮಾಹಿತಿಯನ್ನು ಕೊಲೆಗಡುಕರು ಬಾಯಿ ಬಿಟ್ಟಿದ್ದಾರೆ. ಪೊಲೀಸ್ ಡ್ರಿಲ್ ಮಾಡಿದಾಕ್ಷಣ ಮಹಾಂತೇಶ ಶಿರೂರ್ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಇಎನ್ಎಲ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಚಂದ್ರಶೇಖರ ಗುರೂಜಿಯನ್ನ ಸುಮ್ಮನೆ ಬಿಡುವುದಿಲ್ಲ ಎಂದು ತನ್ನ ಆಪ್ತರ ಬಳಿ ಮೂರು‌ ತಿಂಗಳಿಂದ ಹೇಳಿಕೊಂಡು ಓಡಾಡುತ್ತಿದ್ದ. ಹೇಳಿದಂತೆ‌ ಚಂದ್ರಶೇಖರ ‌ಗರೂಜಿಯನ್ನು ಪರಲೋಕಕ್ಕೆ

 

ಹಂತಕರು ಅಂದುಕೊಂಡ ನಡೆದಿದ್ದರೆ ಜುಲೈ 5ಕ್ಕಲ್ಲ 3ನೇ ತಾರೀಖಿನಂದೇ ಚಂದ್ರಶೇಖರ ಗುರೂಜಿ ಕೊಲೆ ಮಾಡಲು ಪ್ಲಾನ್ ಮಾಡಿದ್ದರು.
ಬೆಂಗಳೂರಿನ ಕಾರ್ಯಕ್ರಮದಲ್ಲಿ ಗುರೂಜಿ ಹತ್ಯೆಗೈಯುವ ಪ್ಲಾನ್ ಮಾಡಿಕೊಂಡಿದ್ದ. ಆದರೆ ಗುರೂಜಿ ಅಣ್ಣನ 11 ವರ್ಷದ ಮೊಮ್ಮಗ ತೀರಿಕೊಂಡಿದ್ದರಿಂದ ಬೆಂಗಳೂರು ಕಾರ್ಯಕ್ರಮ ರದ್ದಾಗಿತ್ತು. ಮಾನವ ಗುರೂಜಿ ಈ ಕಾರ್ಯಕ್ರಮ ರದ್ದು ಮಾಡಿ ಹುಬ್ಬಳ್ಳಿಗೆ ಬಂದಿದ್ದ.

ಚಂದ್ರಶೇಖರ ಗುರೂಜಿ ಅವರನ್ನುವ ಸಾರ್ವಜನಿಕವಾಗಿಯೇ ಹತ್ಯೆ ಮಾಡುವ ಪ್ಲಾನ್ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊಲೆಗು ಮುನ್ನ ಗುರೂಜಿಯನ್ನು ಎರಡು ಬಾರಿ ಭೇಟಿಯಾಗಿದ್ದ ಮಹಾಂತೇಶ್ ಅವರೊಂದಿಗೆ ಸಾಕಷ್ಟು ಸಮಯ ಕಳೆದಿದ್ದ. ಜುಲೈ 3 ರಂದು ಗೋಕುಲ ರಸ್ತೆಯ ಗುರೂಜಿ ಅಪಾರ್ಟ್‌ಮೆಂಟ್ ನಲ್ಲಿ ಭೇಟಿಯಾಗಿದ್ದ.

ಚಂದ್ರಶೇಖರ ಗುರೂಜಿ ಕುಟುಂಬಸ್ಥರ ಸಮ್ಮುಖದಲ್ಲಿ ಭೇಟಿಯಾಗಿ 20 ನಿಮಿಷ ಮಾತನಾಡಿದ್ದ ಹಂತಕ ಮಹಾಂತೇಶ್. ಆದರೆ ಕೊಲೆ ಬಗ್ಗೆ ಗುರೂಜಿಗೆ ಅಗಲಿ, ಅವರ ಕುಟುಂಬಸ್ಥರಿಗೆ ಆಗಲಿ ಸಣ್ಣ ಸುಳಿವು ಕೂಡ ಸಿಕ್ಕಿರಲಿಲ್ಲ.
ಅಷ್ಟೇ ಅಲ್ಲ, ಕೊಲೆಗೂ ಒಂದು ದಿನ ಮುಂಚೆಯೂ ಸಹ ಗುರೂಜಿಯನ್ನು ಭೇಟಿ ಮಾಡಿದ್ದ ಮಹಾಂತೇಶ್ ಹಾಗೂ ಮಂಜುನಾಥ. ಇದೇ ಪ್ರೆಸಿಡೆಂಟ್ ಹೋಟೆಲ್ ನ ಲಾಂಜ್ ನಲ್ಲಿ‌ ಭೇಟಿಯಾಗಿದ್ದರು.

ಭೇಟಿಯಾಗಿ ಗುರೂಜಿ ಜೊತೆಗೆ ಮಾತುಕತೆ ನಡೆಸಿದ್ದ ಹಂತಕರು. ತಮಗೆ ಕೊಡುವುದಾಗಿ ಹೇಳಿದ್ದ ₹ 60 ಲಕ್ಷ ಹಣ, ಹಾಗು ಪ್ಲ್ಯಾಟ್ ಕೊಡಿ‌ ಎಂದು ಕೇಳಿದ್ದ.‌ಆದರೆ ಹಣ ಕೊಡುವುದಿಲ್ಲ ಎಂದು ಗುರೂಜಿ ಏಕವಚನದಲ್ಲಿ‌ ನಿಂದಿಸಿದ್ದ ಎನ್ನಲಾಗಿದೆ.
ಜುಲೈ ನಾಲ್ಕರಂದು ಕೊನೆಯ ಪ್ರಯತ್ನ ಎಂಬಂತೆ ನಿರಾಸೆ ಯಿಂದ ಮಹಾಂತೇಶ್ ವಾಪಸು ಹೋಗಿದ್ದ.

ಚಂದ್ರಶೇಖರ ಗುರೂಜಿ ಸರಳ ವಾಸ್ತು ಸಂಸ್ಥೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆಸಲು ನಾನು ಶ್ರಮಿಸಿದ್ದೇನೆ. ವೈಸ್ ಪ್ರೆಸಿಡೆಂಟ್ ಆಗಿ ಕೆಲಸ‌ ಮಾಡಿ ಯುವಕರ ತಂಡ ಕಟ್ಟಿ ಸಂಸ್ಥೆ ಬೆಳೆಸಿದ್ದೇನೆ. ಆದರೆ ಗುರೂಜಿ ನನ್ನನ್ನು ಸಂಸ್ಥೆಯಿಂದ ದೂರ ಮಾಡಿ, ಲಾಭ ಮಾಡಿಕೊಳ್ಳುತ್ತಿದ್ದರು.‌ ಸಂಸ್ಥೆಯಲ್ಲಿ ಗುರೂಜಿ ಬಲಗೈ ಬಂಟನಾಗಿ‌ ಕೆಲಸ‌ಮಾಡಿದ್ದ ಎಂದು ಅಸಮಾಧಾನ ಹೊಂದಿದ್ದ

ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಮಹಾಂತೇಶ್ ಸೂಚಿಸಿದ ವ್ಯಕ್ತಿಗಳ ಹೆಸರಲ್ಲಿ ಗುರೂಜಿ ಬೇನಾಮಿ‌ ಆಸ್ತಿ ಮಾಡಿದ್ದರು. ಈ ಬೆನಾಮಿ ಆಸ್ತಿಗಳಲ್ಲವೂ ಸರಳವಾಸ್ತು ಸಂಸ್ಥೆಯ ನೌಕರರ ಹೆಸರಲ್ಲಿ ಮಾಡಿದ್ದರು‌‌.
ಅದನ್ನ ಮರಳಿ‌ ಪಡೆಯಲು ಮುಂದಾದಾಗ ಮಹಾಂತೇಶ್ ಗೆ ಹಾಗೂ ಗುರೂಜಿ ನಡುವೆ ಸಂಘರ್ಷ ಆರಂಭವಾಯಿತು..
ನನ್ನ ಆಸ್ತಿಗಳನ್ನು ನನಗೆ ಮರಳಿ ಕೊಡಿಸು ಎಂದಿದ್ದ ಗುರೂಜಿ. ಅದರಂತೆ ಒಂದೊಂದೇ ಆಸ್ತಿ ಮರಳಿ ಕೊಡಿಸುವ ಕೆಲಸ ಮಾಡಿದ್ದ ಹಂತಕ ಮಹಾಂತೇಶ್ ಮರಳಿ ಕೊಡಿಸುತ್ತೇನೆ. ಆಸ್ತಿ ಬೇಕಾದರೆ ನನಗೆ ಹಣ ಕೊಡಿ‌ಎಂದಿದ್ದ ಮಹಾಂತೇಶ್

ಇದರ ಇದಕ್ಕೂ ಮೊದಲು ಒಂದೆರಡು ಆಸ್ತಿಗಳನ್ನು ಗುರೂಜಿ ಗೊತ್ತಾಗದಂತೆ ಮಾರಾಟ ಸಹ ಮಾಡಿದ್ದ‌ ಮಹಾಂತೇಶ್ ಗುರೂಗೆ ಉಲ್ಟಾ ಹೊಡೆದಿದ್ದ.
ಬೆನಾಮಿ ಆಸ್ತಿಗಳನ್ನು ಮರಳಿ‌ ಕೊಡಿಸುವಾಗ ಹಣ ನೀಡುವುದಾಗಿ ಹೇಳಿದ್ದ ಗುರೂಜಿ. ಪ್ರತಿ ತಿಂಗಳು ೫೦ ಸಾವಿರ, ಒಂದು‌ಪ್ಲ್ಯಾಟ್ ಕೊಡಿಸುವುದಾಗಿ ಹೇಳಿದ್ದ ಗುರೂಜಿ. ಆದರೆ ಒಂದಿಷ್ಟು ಹಣ ಬಿಟ್ಟರೆ ಬೇರೆನೂ ನೀಡಲಿಲ್ಲ.ಕೇಳಿದಕ್ಕೆ ಕೊಡುವುದಿಲ್ಲ ಎಂದು ನಿಂದಿಸಿದ್ದ, ಅಷ್ಟೇ ಅಲ್ಲದೇ ಒಟ್ಟು ಆಸ್ತಿ‌ ಮರಳಿ ಕೊಡಿಸದಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಸಿದ್ದ ಗುರೂಜಿ..!

ಜುಲೈ 5ರಂದು ಮಧ್ಯಾಹ್ನ ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ ಗೆ ಬಂದಿದ್ದ ಮಹಾಂತೇಶ್ ಹಾಗೂ ಮಂಜುನಾಥ ಆಸ್ತಿ‌ ವಿಚಾರ ಎಲ್ಲವನ್ನೂ ಬಗೆಹರಿಸಿಕೊಳ್ಳೋಣ ಮಾತನಾಡಬೇಕು ಎಂದು ಕರೆದಿದ್ದ. ಅದರಂತೆ ಹೋಟೆಲ್ ಲಾಂಜ್ ಗೆ ಆಗಮಿಸಿದ್ದ ಗುರುವನ್ನು ಯಮಲೋಕಕ್ಕೆ ಅಟ್ಟಲಾಗಿದೆ.
ಚಂದ್ರಶೇಖರ್ ಬಂದು ಕುಳಿತುಕೊಳ್ಳುತ್ತಿದ್ದಂತೆ ಏಕಾಏಕಿ ಚಾಕುವಿನಿಂದ ದಾಳಿ‌ನಡೆಸಿದ ಮಹಾಂತೇಶ್ ಹಾಗೂ ಮಂಜುನಾಥ ‌ಬಿಟ್ಟುಬಿಡದೆ‌ ಇರಿದರು. ರಕ್ತದ ನಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೆ. ಆರೋಪಿಗಳು ಓಟ ಕಿತ್ತಿದ್ದರು.

Related posts

ಕಾರು ಬೈಕ್ ಅಪಘಾತ ತಂದೆ ಮಗಳು ಸಾವು

eNEWS LAND Team

ಧಾರವಾಡ: ಖೋಟಾನೋಟು ಎಣಿಸ್ತಿದ್ದೊರು ಈಗ 1,2,3 ಎಂದು ಕಂಬಿ ಲೆಕ್ಕ ಮಾಡ್ತಿದಾರೆ!

eNewsLand Team

 ‘ಆ’ ಚಿತ್ರಕ್ಕೆ ನಿಮ್ಮ ಫೋಟೊ..! ಲೋನ್ ಆ್ಯಪ್ ಡೌನ್ಲೋಡ್ ಮಾಡೋ ಮೊದ್ಲು ಎಚ್ಚರ! ಧಾರವಾಡ ಮಹಿಳೆಗೆ ಆಗಿದ್ದೇನು??

eNewsLand Team