28 C
Hubli
ಸೆಪ್ಟೆಂಬರ್ 21, 2023
eNews Land
ಸುದ್ದಿ

ಮೋದಿ ಮೋದಿಯೇ ನೆಹರು ನೆಹರುನೇ‌ ಎಂದು ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟಾಂಗ್

ಇಎನ್ಎಲ್ ಹುಬ್ಬಳ್ಳಿ: ನಾವು ಯಾವತ್ತು ನೆಹರು ಅವರನ್ನು ಮೋದಿಯವರ ಜೊತೆ ಕಂಪೇರ್ ಮಾಡೇ ಇಲ್ಲ, ಮೋದಿ ಮೋದಿಯೇ ನೆಹರು ನೆಹರುನೇ‌ ಎಂದು ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟಾಂಗ್ ಕೊಟ್ಟರು.

ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವೈಚಾರಿಕತೆ ಇರೋ ನಾಯಕ. ಸಾಕಷ್ಟು ಬಜೆಟ್ ಮಂಡಿಸಿದವರು,ಅವರ ವೈಚಾರಿಕತೆ ಅವರಿಗರಲಿ. ರಾಹುಲ್ ಗಾಂಧಿ ಪ್ಲೀಜ್ ಮಾಡಲು ಈ ರೀತಿ ಮಾತನಾಡೋದು ಸರಿಯಲ್ಲ, ಈ ದೇಶದಲ್ಲಿ ಹೆಡ್ಗೆವಾರ್ ಆರ್ ಎಸ್ ಎಸ್ ಸ್ಥಾಪಿಸಿದ್ದು, ಅವರೊಬ್ಬ ದೇಶದ ಅಪ್ರತಿಮ ನಾಯಕ* ಮುಸ್ಲಿಂ ತುಷ್ಟಿಕರಣಕ್ಕೋಸ್ಕರ ಬಾಯಿಗೆ ಬಂದ ಹಾಗೆ ಸಿದ್ದರಾಮಯ್ಯ ಹೇಳಿಕೆ ನೀಡ್ತಿದ್ದಾರೆ ಎಂದು ಆರ್ ಎಸ್ ನವರು ಮೂಲ ನಮ್ಮ ದೇಶದವರಲ್ಲ ಎನ್ನೋ ಸಿದ್ದು ಹೇಳಿಕೆ ಜೋಶಿ ತೀರುಗೇಟು ನೀಡಿದರು.

ಸಿದ್ದರಾಮಯ್ಯ ಅವರು ಹೆಡ್ಗೆವಾರ್ ಯಾರು ಏನು ಮಾಡಿದ್ರು ತಿಳಿದುಕೊಳ್ಳಲಿ. ಎಲ್ಲ ತಿಳಿದುಕೊಂಡು ಮಾತನಾಡಿದ್ರೆ ಅದು ತಪ್ಪು, ಅವರು ಸೇವಾದಳದಲ್ಲಿದ್ರು ಎನ್ನೋದು ಗೊತ್ತಿಲ್ವಾ, ಅವರೊಬ್ಬರು ಜನ್ಮಜಾತ ದೇಶಭಕ್ತರು. ಸಿದ್ದುಗೆ ಆರ್ ಎಸ್ ಎಸ್ ಬಗ್ಗೆ ಗೊತ್ತಿಲ್ಲ ಅಂದ್ರೆ ಅವರ ಮೇಲೆ ಅನುಕಂಪವಿದೆ. ಗೊತ್ತಿದ್ರು ನಾಟಕ ಮಾಡ್ತಿದ್ದಾರೆ ಎಂದು ಲೇವಡಿ ಮಾಡಿದರು.

ಈ ಹಿಂದೆ ಕಾಂಗ್ರೆಸ್ ನವರು ಪಠ್ಯಪುಸ್ತಕದಲ್ಲಿ ಕಮ್ಯುನಿಷ್ಠರ ವಿಚಾರಧಾರೆ ಹಾಕಿದ್ದರು. ಸಿದ್ದರಾಮಯ್ಯ ತಾವೊಬ್ಬರೇ ತಜ್ಞರು ಅನ್ಕೊಂಡಿದ್ದಾರೆ. ಅದನ್ನ ಬಿಟ್ಟು ಹೊರಗಡೆ ಬರಬೇಕು. ಸಿದ್ದರಾಮಯ್ಯ ಪ್ರಧಾನಿಯನ್ನ ಕುಡಾ ಬಾಯಿಗೆ ಬಂದಾಗೇ ಬೈದಿದ್ದರು. ಕೆಲ ಗದ್ಯವನ್ನ ಇವರೇ ತೆಗೆದು,ಇವರೇ ಡ್ರಾಮ ಮಾಡ್ತಿದ್ದಾರೆ.
ಸಿದ್ದರಾಮಯ್ಯನವರೇ ಜನ ನಿಮ್ಮನ್ನ ತಿರಸ್ಕರಿಸಿದ್ದಾರೆ. ಯುಪಿನಲ್ಲಿ 388 ಕ್ಷೇತ್ರದ ನಿಮ್ಮ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಜನ ನಿಮ್ಮನ್ನ ಮೂಲೆಯಲ್ಲಿ ತಳ್ಳಿದ್ದಾರೆ. ನೀವು ಯಾಕೆ ಕ್ಷುಲ್ಲಕ್ಕೆ ಮಾತನಾಡಬಾರದು‌ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

Related posts

ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣಾ ಅಭಿಯಾನ

eNEWS LAND Team

ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವ ಕುರಿತು ಚರ್ಚೆ: ಸಿಎಂ ಬೊಮ್ಮಾಯಿ

eNewsLand Team

ಧಾರವಾಡ ವಿಪ: ಯಾವ ಸುತ್ತಲ್ಲಿ ಯಾರಿಗೆ ಎಷ್ಟು ಮತ? ನೋಡಿ

eNEWS LAND Team