ಮೇ 9, 2024
eNews Land
ಸುದ್ದಿ

ನಿಮ್ಮದು ಕಳಂಕ ರಹಿತ ಸೇವೆ: ಸಿ.ಎಮ್.ನಿಂಬಣ್ಣವರ

ಇಎನ್ಎಲ್ ಕಲಘಟಗಿ: ತಾವು ತಮ್ಮ ಸೇವಾ ಅವಧಿಯಲ್ಲಿ ಕಳಂಕ ರಹಿತವಾಗಿ ಸೇವೆ ಸಲ್ಲಿಸಿ ಇಲಾಖೆಗೂ ಸಮಾಜಕ್ಕೂ ಮಾದರಿಯಾಗಿದ್ದೀರಿ ಎಂದರು.

ಸ್ಥಳೀಯ 12 ಮಠದಲ್ಲಿ ನಿವೃತ್ತ ಲೋಕಾಯುಕ್ತ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾದ ವಿಜಯಕುಮಾರ.ರಾ.ಬಿಸರಳ್ಳಿ ಅವರ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ತಾವು ಸಮಯ ನಿಷ್ಠೆ, ಕರ್ತವ್ಯ ನಿಷ್ಠೆ, ದೇಶ ಭಕ್ತಿ, ಇವುಗಳನ್ನು ಅಳವಡಿಸಿಕೊಂಡು ಉತ್ತಮ ಸೇವೆ ಸಲ್ಲಿಸಿದ್ದೀರಿ. ತಪ್ಪು ಮಾಡಿದವರನ್ನು ಶಿಕ್ಷಿಸಿ ಉತ್ತಮ ನಾಗರಿಕರನ್ನಾಗಿ ಮಾಡಿದ ಅನೇಕ ಉದಾಹರಣೆಗಳು ಇವೆ. ತಮ್ಮ ನಿವೃತ್ತಿ ಜೀವನ ಸುಖ,ಸಮೃದ್ಧಿ,ಶಾಂತಿಯುತವಾಗಿ ಬದುಕು ಹಸನಾಗಲಿ ಎಂದರು. ಸನ್ಮಾನಿತರಾದ ವಿಜಯಕುಮಾರ ಅವರು ಮಾತನಾಡಿ ನಾನು ಪುಣ್ಯವಂತ, ಕಲಘಟಗಿ ತಾಲೂಕು ಮುಗ್ಧ ಮನಸಿನ ನಾಗರಿಕರನ್ನು ಹೊಂದಿದೆ, ನಿಮ್ಮ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳುವ ಪ್ರಭಾವಿಗಳು ಇರುತ್ತಾರೆ, ಅದಕ್ಕೆ ಅವಕಾಶ ಕೊಡಬೇಡಿ, ಹುಟ್ಟುತ್ತ ಯಾರೂ ಕೆಟ್ಟವರಲ್ಲ, ಸಂದರ್ಭಕ್ಕನುಸಾರವಾಗಿ ದುಷ್ಟತನವನ್ನು ಮಾಡಿರುತ್ತಾರೆ, ಅನೇಕ ದುಷ್ಟರನ್ನು ಶಿಕ್ಷಿಸಿದ್ದೇನೆ, ಇದರಲ್ಲಿ ಅನೇಕರು ಪ್ರಜ್ಞಾವಂತ ನಾಗರಿಕರಾಗಿದ್ದಾರೆ, ನಿಮ್ಮೆಲ್ಲರ ಸಹಕಾರದಿಂದ ಕಳಂಕರಹಿತವಾಗಿ ಸೇವೆಯಿಂದ ನಿವೃತ್ತಿ ಹೊಂದಿದ್ದೇನೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನ್ಯಾಯವಾದಿಗಳಾದ ವಿ.ಎಸ್.ಶಿವನಗೌಡ್ರ ತಾವು ಈ ಹಿಂದೆ ನಮ್ಮ ತಾಲೂಕಿನಲ್ಲಿ ಪೋಲಿಸ್ ಇನ್ಸಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದೀರಿ, ತಮ್ಮ ಪ್ರಾಮಾಣಿಕ ಸೇವೆಯೇ ತಾವು ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಯಿತು ಎಂದರು. ಎಮ್.ಆರ್.ತೋಟಗಂಟಿ ಮಾತನಾಡಿ ಇದು ವ್ಯಕ್ತಿಯ ಸನ್ಮಾನ ಅಲ್ಲ, ವ್ಯಕ್ತಿತ್ವದ ಸನ್ಮಾನ ಎಂದರು. ಆಯ್.ಸಿ.ಗೋಕುಲ ಮಾತನಾಡಿ ಪೋಲಿಸ್ ಇಲಾಖೆಯ ಮುಳ್ಳಿನ ಹಾಸಿಗೆ ಇದ್ದಂತೆ, ತಮ್ಮ ಆದರ್ಶಗಳು ಇಲಾಖೆಗೂ, ಸಮಾಜಕ್ಕೂ ನಿರಂತರವಾಗಿರಲಿ ಎಂದರು. ಎಸ್.ವಿ.ತಡಸಮಠ ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ, ತಮ್ಮ ಸಾಧನೆಗೆ ನಮ್ಮ ತಾಲೂಕು ಯಾವತ್ತೂ ಚಿರಋಣಿಯಾಗಿರುತ್ತದೆ ಎಂದರು. ಫಕ್ಕೀರೇಶ ನೇಸರೇಕರ, ಶಿವಣ್ಣ ಅರಳಿಹೊಂಡ, ಸಿ.ಬಿ.ಹೊನ್ನಿಹಳ್ಳಿ, ಮಾತನಾಡಿದರು.
ಕಾರ್ಯಕ್ರಮದಲ್ಲಿ ರೇವಣಸಿದ್ದ ಮಹಾಸ್ವಾಮಿಗಳು 12 ಮಠ ಕಲಘಟಗಿ ಸಾನಿಧ್ಯ ವಹಿಸಿದ್ದರು. ನಿಂಗಪ್ಪ ಸುತಗಟ್ಟಿ ನಿರೂಪಿಸಿದರು. ಬಸವರಾಜ ಶೆರೆವಾಡ , ಬೀಮಣ್ಣ ಗಾಣಿಗೇರ, ವಾಯ್.ಎನ್.ಪಾಟೀಲ, ಎಸ್.ಬಿ.ದೇಸಾಯಿ, ಈರಣ್ಣ ಕುಬಸದ, ರುದ್ರಪ್ಪ ಟೊಂಗಳೆ, ಹಾಗೂ ನೂರಾರು ಅಭಿಮಾನಿಗಳ ಬಳಗ ಉಪಸ್ಥಿತರಿದ್ದರು.

Related posts

ಅಣ್ಣಿಗೇರಿ ನೀಲಗುಂದ ಪುಣ್ಯಪುರುಷ ಗುದ್ನೇಶ್ವರ ಶ್ರೀಗಳ ಬಗ್ಗೆ ಇನ್ನಷ್ಟು ಓದಿ ತಿಳಿಯಿರಿ. ರಥೋತ್ಸವಕ್ಕೆ ತಪ್ಪದೇ ನಾಳೆ ಬನ್ನಿ…

eNEWS LAND Team

ತುಮರಿಕೊಪ್ಪ ವ ರಂಗಾಪೂರ ಗ್ರಾಮದ ಗಣಪತಿ ಜಾತ್ರಾ ಮಹೋತ್ಸವ. ಇಲ್ಲಿದೆ ಕಂಪ್ಲೀಟ್ ಮಾಹಿತಿ

eNEWS LAND Team

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ವರ್ಚುವಲ್ ಆಗಿ ಸಿಎಂ

eNEWS LAND Team