ಮೇ 3, 2024
eNews Land
ದೇಶ ರಾಜ್ಯ

ಇಂಧನ ಮಾರಾಟ ತೆರಿಗೆ ಇಳಿಸಿದ ದೇಶದ ಮೊದಲ ರಾಜ್ಯ ಕರ್ನಾಟಕ

ಬೆಂಗಳೂರು ನ.04: ಪೆಟ್ರೋಲ್ ಹಾಗೂ ಡೀಸಲ್ ದರದಲ್ಲಿ 7. ರೂ. ಇಳಿಕೆ ಮಾಡಿ ಕರ್ನಾಟಕ ಸರ್ಕಾರವು ಇಂದು ಅಧಿಸೂಚನೆ ಹೊರಡಿಸಿದೆ.

ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ದರವನ್ನು ಕ್ರಮವಾಗಿ ರೂ 10 ಹಾಗೂ ರೂ 5 ಕ್ಕೆ ಇಳಿಸಿದ ಬೆನ್ನಲ್ಲೇ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ಹೊರ ಬಿದ್ದ ತಕ್ಷವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿಯೂ ತೆರಿಗೆ ಕಡಿಮೆ ಮಾಡುವ ನಿರ್ಧಾರ ಪ್ರಕಟಿಸಿದರು. ಆ ಮೂಲಕ ದೇಶದ ಮೊದಲ ರಾಜ್ಯವಾಗಿ ಇಂಧನ ದರ ಇಳಿಸುವ ನಿರ್ಧಾರ ಮಾಡಿದರು.

ಕೇಂದ್ರ ಸರ್ಕಾರವು ಕಡಿತಗೊಳಿಸಿರುವ ಅಬಕಾರಿ ತೆರಿಗೆಯ ಜೊತೆಯಲ್ಲಿ ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮಾರಟ ತೆರಿಗೆಯನ್ನು 35% ರಿಂದ 25.9%ಕ್ಕೆ ಮತ್ತು ಡೀಸೆಲ್‌ ಮೇಲಿನ ಮಾರಟ ತೆರಿಗೆಯನ್ನು 24% ರಿಂದ 14.34%ಕ್ಕೆ ಇಳಿಸಿರುತ್ತದೆ. ಇದರಿಂದ ದಿ. 3-11-21ರಂದು ಇದ್ದ ಪೆಟ್ರೋಲಿನ ಚಿಲ್ಲರೆ ಮಾರಾಟ ದರವು ₹113.93 ರಿಂದ ₹100.63 ಕ್ಕೆ ಬರಲಿದ್ದು, ಒಟ್ಟಾರೆ ದರ ಕಡಿತ ₹ 13.30 ಆಗಲಿದೆ.

ಹಾಗೂ ದಿ. 3-11-21ರಂದು ಇದ್ದ ಡೀಸೆಲ್‌ ನ ಚಿಲ್ಲರೆ ಮಾರಾಟ ದರವು ₹ 104.50 ರಿಂದ ₹85.03 ಕ್ಕೆ ಬರಲಿದ್ದು, ಒಟ್ಟಾರೆ ದರ ಕಡಿತ ₹ 19.47 ಆಗಲಿದೆ.

Related posts

ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ

eNEWS LAND Team

ಇಂದು ಏ.28 ಅಣ್ಣಿಗೇರಿಗೆ ಬಿಜೆಪಿ ಚಾಣಕ್ಯ ಅಮಿತ್ ಶಾ ಆಗಮನಕ್ಕೆ ಕಾಯುತ್ತಿರುವ ಜನ!!!

eNEWS LAND Team

ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣ ಪ್ರಸ್ತಾಪ ಬಸವರಾಜ ಹೊರಟ್ಟಿ

eNEWS LAND Team