29.4 C
Hubli
ಏಪ್ರಿಲ್ 28, 2024
eNews Land
ಸಣ್ಣ ಸುದ್ದಿ

ಕಿರೇಸೂರ ಗ್ರಾಮದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದಿಂದ ಜಾಗೃತಿ ಕಾರ್ಯಕ್ರಮ

ಇಎನ್ಎಲ್ ಹುಬ್ಬಳ್ಳಿ: ತಾಲೂಕಿನ‌ ಕಿರೇಸೂರ ಗ್ರಾಮದ ದೇವಸ್ಥಾನದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದಿಂದ ವಿಪತ್ತುಗಳಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಅಧಿಕಾರಿಗಳಾದ ಕಮ್ಯಾಂಡರ್ ಸುಜೀತ ಗೋಪ, ದಿಲೇಶ್ವರ‌ ರಾಂ, ಮಲ್ಲಿಕಾರ್ಜುನ ಅವರು ಮಹಿಳೆಯರು, ಮಕ್ಕಳು, ವಿಶೇಷ ಚೇತನರಲ್ಲಿ ವಿಪತ್ತುಗಳು ಸಂಭವಿಸಿದಾಗ ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದರ ಕುರಿತು ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ, ಉಪ ತಹಸೀಲ್ದಾರ್ ಚಂದ್ರಕಲಾ ನೀರಲಗಿ, ಅಂಗವಿಕಲ‌ ಇಲಾಖೆಯ ಮಾಂತೇಶ ಕುರ್ತಕೋಟಿ, ಗ್ರಾಪಂ ಅಧ್ಯಕ್ಷ ಬಿ.ಕೆ. ಪಾಟೀಲ, ಉಪಾಧ್ಯಕ್ಷ ನೀಲಪ್ಪ‌ ಗಾಳಪ್ಪನವರ, ಪಿಡಿಓ ಸಾದಿಕ್ ಅಮ್ಮಿನಭಾವಿ, ವಿಆರ್’ಡಬ್ಲೂ ಕಲ್ಮೇಶ‌ ಹುಬ್ಬಳ್ಳಿ ಸೇರಿದಂತೆ ಗ್ರಾಪಂ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.

Related posts

ಅಣ್ಣಿಗೇರಿ ತಾಲೂಕ ಫಾರ್ಮರ್ಸ್ ಪ್ರೋಡ್ಯುಸರ್ ಕಂಪನಿಗೆ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ

eNEWS LAND Team

ಕಲಘಟಗಿ: ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ

eNEWS LAND Team

ಕಾಮಸಮುದ್ರದಲ್ಲಿ ಭೂಮಿ ಪೂಜೆ ನೆರವೇರಿಸಿದ: ರಾಜಮ್ಮ

eNEWS LAND Team