25 C
Hubli
ಮೇ 25, 2024
eNews Land
ಜಿಲ್ಲೆ

ಮನೆಯಿಂದಲೇ ಮತದಾನ ಮಾಡಿದ 80 ವರ್ಷ ಮೆಲ್ಪಟ್ಟ ಹಿರಿಯ ಹಾಗೂ ವಿಶೇಷಚೇತನ ಮತದಾರರು ಎಷ್ಟು? ಇಲ್ಲಿದೆ ನೋಡಿ!

ಇಎನ್ಎಲ್ ಧಾರವಾಡ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ 80 ವಯಸು ಮೇಲ್ಪಟ ಮತ್ತು ವಿಶೇಷಚೇತನ ಮತದಾರರಿಗೆ ಅನುಕೂಲವಾಗಲು ಇದೇ ಮೊದಲ ಬಾರಿಗೆ ಪರಿಚಯಿಸಿ, ಜಿಲ್ಲಾಡಳಿತದಿಂದ ಅನುಷ್ಠಾನಗೊಳಿಸಿದ್ದ ಮನೆಯಿಂದಲೇ ಮತದಾನದಲ್ಲಿ ಒಟ್ಟು 1,998 ಜನ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮನೆಯಿಂದಲೇ ಮತದಾನ ಮಾಡಲು ಜಿಲ್ಲೆಯ 7 ವಿಧಾನಸಭಾ ಮತಕ್ಷೇತ್ರಗಳಲ್ಲಿನ 80 ವಯಸ್ಸು ಮೇಲ್ಪಟ ಮತ್ತು ವಿಶೇಷಚೇತನದ ಮತದಾರರಿಗೆ ಚುನಾವಣಾ ಆಯೋಗದ ನಮೂನೆ 12ಡಿಯನ್ನು ವೀತರಿಸಲಾಗಿತ್ತು.
80 ವಯಸು ಮೇಲ್ಪಟ 1,686 ಜನರು ಮತ್ತು 392 ವಿಶೇಷಚೇತನ ಮತದಾರರು ಮನೆಯಿಂದಲೇ ಮತದಾನ ಮಾಡಲು ತಮ್ಮ ಒಪ್ಪಿಗೆ ನೀಡಿದ್ದರು. ಆದರೆ ಕಳೆದ 3 ದಿನಗಳಲ್ಲಿ 1,615 80 ವಯಸು ಮೇಲ್ಪಟ ಮತದಾರರು ಮತ್ತು 383 ವಿಶೇಷಚೇತನ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 12ಡಿ ನಮೂನೆ ಪಡೆದಿದ್ದ ಕೆಲವು ಮತದಾರರು ಸಾವು, ಮಾಹಿತಿ ನೀಡದೆ ಸ್ಥಳಾಂತರ, ಪರ ಊರಿಗೆ ಹೊಗಿದ್ದರಿಂದ ತಮ್ಮ ಹಕ್ಕು ಚಲಾಯಿಸಿಲ್ಲ.
80 ವಯಸು ಮೇಲ್ಪಟ ಮತ್ತು ವಿಶೇಷಚೇತನ ಮತದಾರರು, 69-ನವಲಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 430 ಮತ್ತು 70-ಕುಂದಗೋಳ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 135, 71-ಧಾರವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 414 ಮತ್ತು 72-ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 233 ಮತ್ತು 73-ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 253 ಮತ್ತು 74-ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 416 ಮತ್ತು 75-ಕಲಘಟಗಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 117 ಜನ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಹುಬ್ಬಳ್ಳಿಗೂ ಕಾಲಿಟ್ಟ ಹಿಜಾಬ್ ವಿವಾದ: ಪ್ರತಿಭಟನೆ

eNewsLand Team

ಫೆ.1 ರಿಂದ 15 ರ ವರೆಗೆ ಹೊಸಯಲ್ಲಾಪೂರ ಕೋಳಿಕೆರೆ ಹೂಳೆತ್ತುವ ಕಾರ್ಯ

eNewsLand Team

ಮಹಿಳೆ ಮೇಲೆ ಚಿರತೆ ದಾಳಿ

eNEWS LAND Team