ಮೇ 3, 2024
eNews Land
ರಾಜ್ಯ

ತೋವಿವಿ; 11ನೇ ಘಟಿಕೋತ್ಸವ : ರೈತನ ಮಗಳು ಉಮ್ಮೆಸಾರಾ’ಗೆ 16 ಚಿನ್ನದ ಪದಕ

ರಾಜ್ಯಪಾಲರಿಂದ ಪದಕ ಪ್ರದಾನ

ಇಎನ್ಎಲ್ ಬಾಗಲಕೋಟೆ:
ತೋಟಗಾರಿಕೆ ವಿವಿಯಲ್ಲಿ ಬುಧವಾರ ನಡೆದ 11ನೇ ಘಟಿಕೋತ್ಸವದಲ್ಲಿ ಕಾಫಿ ತೋಟದ ರೈತನ ಮಗಳಾದ ಉಮ್ಮೆಸಾರಾಳಿಗೆ 16 ಚಿನ್ನದ ಪದಕಗಳು ಲಭಿಸಿದ್ದು, ರಾಜ್ಯದ ರಾಜ್ಯಪಾಲರು ಹಾಗೂ ತೋವಿವಿಯ ಕುಲಾಧಿಪತಿಗಳಾದ ಥಾವರ್‍ಚಂದ್ ಗೆಹ್ಲೋಟ್ ಅವರು ಚಿನ್ನದ ಪದಕಗಳನ್ನು ಪ್ರಧಾನ ಮಾಡಿದರು.
ಉಮ್ಮೆಸಾರಾ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಗುಲ್ಲಂಪೆಟೆಯವರಾಗಿದ್ದು, ತಾಯಿ ರಹಿನಾ ಬಾನು ಗೃಹಿಣಿಯಾಗಿದ್ದು, ತಂದೆ ಅಸ್ನತ್ ಆಲಿ ಕೃಷಿ ವೃತ್ತಿಯಲ್ಲಿ ತೊಡಗಿದ್ದು, ಕಾಫಿ ತೋಟ ಹೊಂದಿರುತ್ತಾರೆ. ಉಮ್ಮೆಸಾರಾಳು ಶಿಕ್ಷಣದಲ್ಲಿ ಒಂದನೇ, ಎರಡನೇ ಹಾಗೂ ಮೂರನೇ ಸಾಲಿನಲ್ಲಿ ಯೂನಿವರ್ಸಿಟಿ ಮೆರಿಟ್ ವಿದ್ಯಾರ್ಥಿ ವೇತನ ಪಡೆದಿಕೊಂಡಿದ್ದು, ತನ್ನ ಪ್ರತಿಯೊಂದು ತರಗತಿಯಲ್ಲಿ ಹೆಚ್ಚಿನ ಅಂಕ ಪಡೆದಿದ್ದಾರೆ.
ಘಟಿಕೋತ್ಸವದಲ್ಲಿ ಒಟ್ಟಾರೆ ಡಾಕ್ಟರೇಟ್ ಪದವಿಯಲ್ಲಿ 4, ಸ್ನಾತಕೋತ್ತರ ಪದವಿಯಲ್ಲಿ 12 ಹಾಗೂ ಸ್ನಾತಕ ಪದವಿಯಲ್ಲಿ 18 ಸೇರಿ ಒಟ್ಟು 34 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಯಿತು. 4 ಪದಕಗಳನ್ನು ಕೊಡಗು ಜಿಲ್ಲೆಯ ಮಡಿಕೇರಿಯ ಸುಹಾನ್ ಭೀಮಯ್ಯ ಬಿ, ಬಂಗಾರಪೇಟೆಯ ಮಹೇಶ ವಿ.ಎನ್ ಅವರು ಪಡೆದಿದ್ದಾರೆ. ಅದೇ ರೀತಿ ಮೂರು ಚಿನ್ನದ ಪದಕವನ್ನು ಚಂದನ ಎನ್., ಅರುಣ ಕುಂಬಾರ್, ಪಡೆದುಕೊಂಡಿರುತ್ತಾರೆ. ಉಳಿದವರು ಎರಡು ಹಾಗೂ ಒಂದು ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.

ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗುವೆ; ವೈಜ್ಞಾನಿಕ ಸಂಶೋಧನೆಯಲ್ಲಿ ಮುಂದುವರೆಯುವ ಮೂಲಕ ರೈತ ಸಮುದಾಯಕ್ಕೆ ಏನಾದರೂ ಸಹಾಯ ಮಾಡುತ್ತೇನೆ. ಸ್ನಾತಕ ಪದವಿಯಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿ ಉಮ್ಮೆಸಾರಾ ತಿಳಿಸಿದರು ತಂದೆ ತಾಯಿಯವ ಪ್ರೋತ್ಸಾಹದಿಂದ ಸಾಧನೆ ಮಾಡಲು ಸಾಧ್ಯವಾಯಿತು. ನಮ್ಮ ತಂದೆಯವರು ಮೂಲತಃ ರೈತರಾಗಿದ್ದು, ರೈತ ಸಮುದಾಯಕ್ಕೆ ಏನಾದರೂ ಸಹಾಯ ಮಾಡುವ ಉದ್ದೇಶವಿದೆ ಎಂದರು.

Related posts

ಬಿಟ್ ಕಾಯಿನ್ ಹಗರಣದ ಬಗ್ಗೆ ದಾಖಲೆಗಳಿದ್ದರೆ ತನಿಖಾ ಸಂಸ್ಥೆಗಳಿಗೆ ನೀಡಿ- ಸಿಎಂ ಬೊಮ್ಮಾಯಿ

eNEWS LAND Team

ಹುಬ್ಬಳ್ಳಿ ಸಿದ್ಧಾರೂಢಮಠ ಮೂರಸಾವಿರ ಮಠದ ದರ್ಶನ ಪಡೆದ ಜೆ.ಪಿ.ನಡ್ಡಾ

eNEWS LAND Team

ವಿದ್ಯುತ್ ದೀಪಾಲಂಕಾರವನ್ನು ಒಂಬತ್ತು ದಿನಗಳವರೆಗೆ ವಿಸ್ತರಣೆ ಸಿ.ಎಂ

eNEWS LAND Team