ನವೆಂಬರ್ 28, 2022
eNews Land
ಅಪರಾಧ ದೇಶ

ದ ಕಾಶ್ಮೀರ ಫೈಲ್ಸ್: ಕಲಾವಿದೆಗೆ ಗುಂಡಿಕ್ಕಿದ ನರರಾಕ್ಷಸರು!!

Listen to this article

ಇಎನ್ಎಲ್ ಡೆಸ್ಕ್ : ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಕಲಾವಿದೆ ಅಮ್ರೀನ್ ಭಟ್ ಅವರನ್ನು ಉಗ್ರರು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.

ಅಮ್ರೀನ್ ಅವರು ಜಿಲ್ಲೆಯ ಚಡೂರ ಪ್ರದೇಶದ ಹುಶ್ರೂ ನಿವಾಸಿ. ಅವರ ಮನೆಯ ಬಳಿಯೇ ಉಗ್ರರು ಅವರ ಮೇಲೆ ರಾತ್ರಿ 8 ಗಂಟೆಗೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅಮ್ರೀನ್‌ ಜೊತೆ ಅವರ ಸೋದರ ಸಂಬಂಧಿ ಫರಾನ್‌ ಝುಬೈರ್‌ ಕೂಡಾ ಗಾಯಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮ್ರೀನ್‌ ಅವರನ್ನು ಚಡೂರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದ ಅಮ್ರೀನ್‌ ಭಟ್‌, ಅವರ ಗಾಯನ, ಕಿರುಚಿತ್ರ ಸೇರಿದಂತೆ ಹಲವು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು.

ದಾಳಿ ನಡೆದ ಪ್ರದೇಶಕ್ಕೆ ಭಾರಿ ಭದ್ರತೆ ಒದಗಿಸಲಾಗಿದೆ. ಉಗ್ರರನ್ನು ಪತ್ತೆ ಮಾಡಲು ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related posts

ಯಾದವಾಡದ ಮಂಜು-ಮಡದಿ ನೆನಪಲ್ಲಿ ಮದ್ಯ ಕುಡಿದು ಸತ್ತ !! ಇದು ಪ್ರೇಮದ‌ ವಿಷ!

eNewsLand Team

ಸೈನಿಕನ ಹೆಸರಲ್ಲಿ ನಡೆಯಿತು ಸೈಬರ್ ಕ್ರೈಂ!! ನಿಮಗೂ ಪಂಗನಾಮ ಹಾಕಬಹುದು ಹುಷಾರ್

eNEWS LAND Team

ರೈಲ್ವೆಯಲ್ಲಿ ಮೊಬೈಲ್, ಲ್ಯಾಪ್‌ಟಾಪ್ ಕದಿಯುತ್ತಿದ್ದ ಗೋವಾ ಆಸಾಮಿ ಅರೆಸ್ಟ್

eNEWS LAND Team