ಮೇ 3, 2024
eNews Land
ಸುದ್ದಿ

ತಂದೆ-ತಾಯಿ ಜೀವಂತ ದೇವರು ಪೂಜ್ಯತೆಯಿಂದ ಕಾಣಿರಿ : ಬಸವಲಿಂಗಸ್ವಾಮಿ

ಇಎನ್ಎಲ್ ಕಲಘಟಗಿ: ತಂದೆ-ತಾಯಿ ಜೀವಂತ ದೇವರು, ಪೂಜ್ಯತೆಯಿಂದ ಕಾಣಿರಿ, ಗಣಪತಿ ಚರಿತ್ರೆಯಲ್ಲಿ ಶಿವ-ಪಾರ್ವತಿಯನ್ನು ಪೂಜಿಸಿ ಗಣಗಳ ಅಧಿಪತಿಯಾಗಿದ್ದನ್ನು ಕಾಣುತ್ತೇವೆ ಎಂದರು.

ತುಮರಿಕೊಪ್ಪ ವ ರಂಗಾಪೂರ ಗ್ರಾಮದ ಗಣಪತಿ ಜಾತ್ರಾ ಮಹೋತ್ಸವ. ಇಲ್ಲಿದೆ ಕಂಪ್ಲೀಟ್ ಮಾಹಿತಿ

ತಾಲೂಕಿನ ತುಮರಿಕೊಪ್ಪ ವ ರಂಗಾಪೂರ ಗ್ರಾಮದ ಶ್ರೀ ಗಣಪತಿ ದೇವರ 5ನೇ ಜಾತ್ರಾ ಮಹೋತ್ಸವದ ಮಂಗಳ ಕಾರ್ಯದಲ್ಲಿ ನವಲಗುಂದ ಗವಿಮಠದ ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ ಶಿವ-ಪಾರ್ವತಿ ಪುತ್ರ ಷಣ್ಮುಖನು ಬ್ರಹ್ಮಾಂಡ 5ಪ್ರದಕ್ಷಣೆ ಹಾಕಲು ನವಿಲು ಏರಿ ಹೊರಟನು. ಆದರೆ ಗಣಪತಿಯು ಬ್ರಹ್ಮಾಂಡವನ್ನೇ ಸೃಷ್ಟಿಸಿದ ತಂದೆ-ತಾಯಿಯೇ ದೇವರು ಎಂದು ಶಿವ-ಪಾರ್ವತಿಗೆ ಪ್ರದಕ್ಷಣೆ ಹಾಕಿ ಗಣಪತಿಯಾದನು. ತಾವೆಲ್ಲರೂ ಇದೇ ಸನ್ಮಾರ್ಗದಲ್ಲಿ ನಡೆಯಿರಿ, ಮಣ್ಣಿನಿಂದ ಸೃಷ್ಟಿಯಾದ ಈ ದೇಹ ಮಣ್ಣಿಗೆ ಸೇರುತ್ತದೆ, ವೃದ್ಧಾಶ್ರಮಗಳು ಶಹರಗಳಲ್ಲಿ ಹೆಚ್ಚುತ್ತಿವೆ, ಹಳ್ಳಿಗಳಲ್ಲಿ ಇನ್ನೂ ಸಂಸ್ಕಾರಗಳು ಜೀವಂತವಾಗಿವೆ. ಯಾವುದೇ ಕಾರಣಕ್ಕೂ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ತಳ್ಳಬೇಡಿ ಎಂದು ತಮ್ಮ ಪ್ರವಚನದಲ್ಲಿ ಹೇಳಿದರು. ಬಮ್ಮಿಗಟ್ಟಿಯ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು ಮಾತನಾಡಿ ಸಾಧು-ಸಂತರ ಭೇಟಿ ಬಂಗಾರಗಟ್ಟಿ, ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಈ ಶರೀರವನ್ನು ಕೊಟ್ಟಿದ್ದಾನೆ, ಮನೆಯಲ್ಲಿ ನಿಯಮಿತವಾಗಿ ಪೂಜೆ-ಪುನಸ್ಕಾರ, ಭಜನೆಗಳನ್ನು ಎರಡು ಹೊತ್ತು ಮಾಡಿರಿ, ಧಾರಾವಾಹಿಗಳನ್ನು ನೋಡುವುದನ್ನು ಕಡಿಮೆ ಮಾಡಿರಿ, ಒಳ್ಳೆಯ ಮಾತುಗಳನ್ನು ಶ್ರವಣ ಮಾಡಿರಿ ಎಂದರು. ಸಾನಿಧ್ಯವನ್ನು ಗ್ರಾಮದ ರುದ್ರಯ್ಯ ಸ್ವಾಮಿಗಳು ವಹಿಸಿದ್ದರು. ಕುಂಭಮೇಳ, ಗಣಪತಿ ದೇವರ ಭವ್ಯ ಮೆರವಣಿಗೆ ಏರ್ಪಾಡಾಗಿದ್ದವು.

 ಬದುಕಿನಲ್ಲಿ ಸಾಧಿಸಲು ಆರೋಗ್ಯ ಮುಖ್ಯ : ಸಿ.ಎಮ್.ನಿಂಬಣ್ಣವರ
ಈ ಸಂದರ್ಭದಲ್ಲಿ ಬೇಗೂರ ಗ್ರಾಪಂ ಅಧ್ಯಕ್ಷೆ ನಾಗವ್ವ ಅಂಗಡಿ, ಗ್ರಾಪಂ ಸದಸ್ಯರಾದ ತುಕಾರಾಮ ಹೂಗಾಡಿ, ಶಕುಂತಲಾ ಹರಿಜನ, ಮಂಜುಳಾ ಸಂತಪ್ಪನವರ, ತಿಪ್ಪಣ್ಣ ಕುರುಬರ, ನಿಂಗಪ್ಪ ನಿಗದಿ, ಹಾಗೂ ಬೇಗೂರ ಗ್ರಾಮದ ಪರಶುರಾಮ ರಜಪೂತ, ಫಕ್ಕೀರಪ್ಪ ಮುನವಳ್ಳಿ, ರುದ್ರಪ್ಪ ಹಡಪದ, ಸಮಾಜ ಸೇವಕರಾದ ಶಂಕರ ಚವ್ಹಾಣ ಮುಂತಾದವರನ್ನು ಸನ್ಮಾನಿಸಲಾಯಿತು. ನ್ಯಾಯವಾದಿಗಳಾದ ಮಂಜುನಾಥ ಧನಿಗೊಂಡ ಸ್ವಾಗತಿಸಿದರು. ಕಲ್ಲಪ್ಪ ಕಟ್ಟಿಮನಿ ನಿರೂಪಿಸಿದರು.

Related posts

ನಡೆದಾಡುವ ದೇವರು ಸಿದ್ಧೇಶ್ವರ ಸ್ವಾಮೀಜಿ ವೈಕುಂಠಕ್ಕೆ

eNEWS LAND Team

ಮತದಾನ ಪ್ರಮಾಣ ಹೆಚ್ಚಿಸಲು ಶ್ರಮಿಸಿ: ಪಿ.ಎಸ್. ವಸ್ತ್ರದ

eNEWS LAND Team

ಅಣ್ಣಿಗೇರಿ ಪುರಸಭೆ ಮತದಾನ : ಜಾತ್ರೆ, ಸಂತೆ ನಿಷೇಧ

eNewsLand Team